ಖಾನಾಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 2 interwiki links, now provided by Wikidata on d:q2120803 (translate me)
ಮೈಸೂರು ವಿ ವಿ ವಿಶ್ವಕೋಶ ದಿಂದ ಮಾಹಿತಿ
೨೬ ನೇ ಸಾಲು:
footnotes = |
}}
 
 
 
'''ಖಾನಾಪುರ''' [[ಕರ್ನಾಟಕ]]ದ [[ಬೆಳಗಾವಿ]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಬೆಳಗಾವಿ ನಗರದಿಂದ ಸುಮಾರು ೨೬ ಕಿಮಿ ದೂರದಲ್ಲಿದೆ. ಖಾನಾಪುರ [[ಕರ್ನಾಟಕ]], [[ಗೋವಾ]] ಮತ್ತು [[ಮಹಾರಾಷ್ಟ್ರ]]ದ ಪ್ರಮುಖ ನಗರಗಳಿವೆ ಉತ್ತಮ ರೈಲ್ವೆ ಮತ್ತು ರಸ್ತೆ ಸಂಪರ್ಕಗಳನ್ನು ಹೊಂದಿದೆ.
 
ಖಾನಾಪುರ
 
ಮೈಸೂರು ರಾಜ್ಯದ ಬೆಳಗಾಂವಿ ಜಿಲ್ಲೆಯ ತೀರ ದಕ್ಷಿಣದ ತಾಲ್ಲೂಕು ಮತ್ತು ಅದರ ಕೇಂದ್ರ. ತಾಲ್ಲೂಕಿನ ವಿಸ್ತೀರ್ಣ 633 ಚ.ಮೈ. ಸಹ್ಯಾದ್ರಿ ಬೆಟ್ಟಗಳ ಪ್ರದೇಶದಲ್ಲಿರುವ ತಾಲ್ಲೂಕು ಪ್ರಕೃತಿ ಸೌಂದರ್ಯದಿಂದ ಕೂಡಿದೆ. ತಾಲ್ಲೂಕಿನ ವಾಯವ್ಯ ಭಾಗದಲ್ಲಿ ಎತ್ತರವಾದ ಬೆಟ್ಟಗಳು, ಈಶಾನ್ಯ ಹಾಗೂ ಪೂರ್ವದಲ್ಲಿ ಬಯಲುಪ್ರದೇಶ, ದಕ್ಷಿಣ ಹಾಗೂ ನೈಋತ್ಯ ಭಾಗದಲ್ಲಿ ದಟ್ಟವಾದ ಕಾಡು ಇವೆ. ತಾಲ್ಲೂಕಿನ ವಾಯುಗುಣ ಹಿತಕರವಾದ್ದು. ಇಲ್ಲಿಯ ವಾರ್ಷಿಕ ಸರಾಸರಿ ಮಳೆ 71". ಕುಳುಕುಂಬಿಯಲ್ಲಿ ಉಗಮಿಸುವ ಮಲಪ್ರಭಾ ನದಿ ತಾಲ್ಲೂಕಿನ ಉತ್ತರಾರ್ಧದಲ್ಲಿಯೇ ಹರಿದು ಪೂರ್ವಕ್ಕೆ ಸಾಗುತ್ತದೆ. ತಾಲ್ಲೂಕಿನ ಎಲ್ಲ ಕಡೆಗಳಲ್ಲೂ ಬತ್ತದ ಗದ್ದೆಗಳು ಮತ್ತು ಅಲ್ಲಲ್ಲಿ ಹಣ್ಣಿನ ತೋಟಗಳು ಉಂಟು. ಬತ್ತ, ಮೆಣಸಿನಕಾಯಿ ಇವು ತಾಲ್ಲೂಕಿನ ಮುಖ್ಯ ಬೆಳೆಗಳು. ದಕ್ಷಿಣ ಭಾಗದಲ್ಲಿರುವ ಕಾಡಿನಲ್ಲಿ ಬಿದಿರು, ಸಾಗವಾನಿ, ಶಿವನಿ, ಮತ್ತಿ ಮುಂತಾದ ಮರಗಳುಂಟು. ಮರಮುಟ್ಟು, ಉರುವಲು ಕಟ್ಟಿಗೆ ಇವು ಮುಖ್ಯ ಅರಣ್ಯೋತ್ಪನ್ನಗಳು. ಈ ತಾಲ್ಲೂಕಿನ ಜನಸಂಖ್ಯೆ 2,43,154 (2001).
 
ಲೋಂಡಾ ಒಂದು ಪ್ರಮುಖ ರೈಲ್ವೆ ಕೂಡುನಿಲ್ದಾಣ. ಇದರ ಸಮೀಪದಲ್ಲಿ ಮ್ಯಾಂಗನೀಸ್ ಗಣಿಗಳಿವೆ. ಹಳಶಿಯಲ್ಲಿ ಪುರಾತನ ವರಾಹ ಹಾಗೂ ನೃಸಿಂಹ ದೇವಸ್ಥಾನಗಳಿವೆ. ನಂದಗಡ ವ್ಯಾಪಾರಕೇಂದ್ರ. ಇಲ್ಲಿ ಅನೇಕ ಅಕ್ಕಿ ಗಿರಣಿಗಳುಂಟು. ಖಾನಾ ಪುರ-ಜಂಬೋಟಿ ರಸ್ತೆಯ ಸಮೀಪದಲ್ಲಿ, ಖಾನಾಪುರದ ವಾಯವ್ಯಕ್ಕೆ ಸು. 8 ಮೈ. ದೂರದಲ್ಲಿ ಮಲಪ್ರಭಾ ನದಿಯ ಆಸೋಗಾ ಜಲಪಾತವಿದೆ.
 
ಖಾನಾಪುರ ಪಟ್ಟಣದ ಜನಸಂಖ್ಯೆ 16,563 (2001). ಇದು ಬೆಂಗಳೂರು-ಪುಣೆ ರೈಲುಮಾರ್ಗದಲ್ಲಿ ಲೋಂಡಾ ಮತ್ತು ಬೆಳಗಾಂವಿಗಳ ಮಧ್ಯದಲ್ಲಿರುವ ಪ್ರಮುಖ ನಿಲ್ದಾಣ. ಇಲ್ಲಿಂದ ಬೆಳಗಾಂವಿ ದಾಂಡೇಲಿ ಗೋವೆಗಳಿಗೆ ಬಸ್ಸು ಸೌಕರ್ಯವುಂಟು. ಖಾನಾಪುರ ಸಾಗವಾನಿ ಮತ್ತು ಬಿದಿರುಗಳ ಸಂಗ್ರಹಸ್ಥಳ, ವ್ಯಾಪಾರಕೇಂದ್ರ. ಇಲ್ಲಿ ಪಿಂಗಾಣಿ ಸಾಮಾನು ಮತ್ತು ಮಂಗಳೂರು ಹೆಂಚು ತಯಾರಿಸುವ ಕಾರ್ಖಾನೆಗಳುಂಟು. (ಸಿ.ಎಸ್.ಜೆ.)
 
 
 
[[ವರ್ಗ:ಬೆಳಗಾವಿ ಜಿಲ್ಲೆಯ ತಾಲೂಕುಗಳು]]
"https://kn.wikipedia.org/wiki/ಖಾನಾಪುರ" ಇಂದ ಪಡೆಯಲ್ಪಟ್ಟಿದೆ