ಎಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
 
ಎಲೆ: ಸಾಮಾನ್ಯವಾಗಿ ಎಲ್ಲ ಬಗೆಯ ಸಸ್ಯಗಳ[[ಸಸ್ಯ]]ಗಳ ಕಾಂಡ, [[ರೆಂಬೆ]], ಕೊಂಬೆಗಳಲ್ಲಿ ವಿವಿಧ ವರ್ಣಗಳಲ್ಲಿ ಬೆಳೆಯುವ [[ಸಸ್ಯ]]ಗಳ ಪ್ರಮುಖ ಭಾಗ (ಲೀಫ್).ಕಾಂಡದ ಮೇಲೆ ಹಸಿರಾಗಿ ಬೆಳೆಯುವ ಎಲ್ಲ ಸಸ್ಯಭಾಗಗಳನ್ನೂ ವಾಡಿಕೆಯಾಗಿ ಎಲೆ ಎಂದು ಕರೆಯುತ್ತಾರೆ. ಆದರೆ ಎಲೆಯಂತೆ ತೋರದ ಇನ್ನೂ ಅನೇಕ ಭಾಗಗಳೂ ಎಲೆಗಳೇ ಆಗಿವೆಯೆಂದು ಸಂಶೋಧನೆಗಳಿಂದ ತಿಳಿಯಬಂದಿದೆ. ಗೆಡ್ಡೆಯ ಮೇಲಿನ ಪದರಗಳು, ಹೂವಿನ ಕೆಲ ಭಾಗಗಳು ಇದಕ್ಕೆ ಒಳ್ಳೆಯ ಉದಾಹರಣೆ. ಪಾಚಿಯಂಥ ಕೆಳವರ್ಗದಸಸ್ಯದಲ್ಲಿ ಎಲೆ ಕಾಂಡ ಬೇರುಗಳನ್ನು ಪ್ರತ್ಯೇಕವಾಗಿ ಕಾಣುವುದು ಅಸಾಧ್ಯ. ಕೋಲುಗಳ್ಳಿಯಲ್ಲಿನ ಎಲೆಗಳು ಆಗಲೇ ಬಿದ್ದುಹೋಗಿರುತ್ತವೆ. ಪಾಪಾಸುಕಳ್ಳಿಯಲ್ಲಿ ಹಸ್ತದಂತೆ ದಪ್ಪನಾಗಿರುವ ಭಾಗ ಎಲೆಯಂತೆ ಕಂಡರೂ ಅದು ಎಲೆಯಲ್ಲ, ಅದು ಅದರ ಕಾಂಡ. ಆ ಹಸ್ತದ ಮೇಲೆ ಚೂಪಾಗಿ ನಿಮಿರಿ ನಿಂತಿರುವ ಮುಳ್ಳುಗಳೇ ಗಿಡದ ಎಲೆಗಳು.
 
ಎಲೆಗಳು ಕಾಂಡ ಅಥವಾ ಅದರ ಕವಲುಗಳ ಮೇಲೆ ತೆಳುವಾಗಿ, ಅಗಲವಾಗಿ ಇದ್ದು ಗಿಣ್ಣುಗಳಿರುವ [[ಜಾಗ]]ದಲ್ಲಿ ಉದ್ಭವಿಸುವುವು. ಕಾಂಡಕ್ಕೂ ಎಲೆಗಳಿಗೂ ಇರುವ ಮೇಲುಗಡೆಯ ಕಂಕುಳಲ್ಲಿ (ಆಕ್ಸಿಲ್) ಒಂದೊಂದು ಎಲೆ [[ಮೊಗ್ಗು]] ಇರುತ್ತದೆ. ಇದರ ಬೆಳೆವಣಿಗೆಯಿಂದ ಕಾಂಡದ ಹೊಸಕೊನೆಗಳು ಉತ್ಪತ್ತಿಯಾಗುವುವು. ಕೊನೆ ಬೆಳೆದಂತೆ ಎಳೆಯ ಎಲೆಗಳು ಮೇಲಾಗಿ ಹಳೆಯ ಎಲೆಗಳು ಕೆಳಗಾಗುತ್ತವೆ. ಕಾಂಡಗಳ ಮೇಲೆ ಈ ರೀತಿ ಎಲೆಗಳು ಇರುವುದನ್ನು ಊಧರ್ವ್‌ ವೃದ್ಧಿ (ಆಕ್ರೊಪೆಟಲ್ ಸಕ್ಸೆಷನ್) ಎನ್ನುತ್ತಾರೆ. ಎಲೆ ಉತ್ಪತ್ತಿಯಾಗುತ್ತಿರುವಾಗ, ಅದು ತನ್ನ ತುದಿಯಲ್ಲಿ ಮೊದಲು ಸ್ವಲ್ಪ ಬೆಳೆಯುತ್ತದೆ. ಕೆಲವು ಜರಿಗಿಡಗಳಲ್ಲಿ ಬಹು ಕಾಲ ಈ ರೀತಿಯ ಬೆಳೆವಣಿಗೆಯನ್ನು ಕಾಣಬಹುದು. ಉದಾ: ಲೈಗೋಡಿಯಂ. ಅನಂತರ ಅದು ತನ್ನ ಬುಡದಲ್ಲಿಯೂ ಸಾಧಾರಣವಾಗಿ ಮಧ್ಯ ಪ್ರದೇಶದಲ್ಲಿಯೂ ವೃದ್ಧಿಯಾಗುತ್ತದೆ. ಏಕದಳ ಸಸ್ಯಗಳಲ್ಲಿ, ಎಲೆ ಬುಡದಲ್ಲಿ ಬಹುಕಾಲ ಬೆಳೆಯುತ್ತದೆ. ಆಮೇಲೆ, ಎಲೆಗಳು ತಮ್ಮೊಳಗೆ ಹೊಸ ಜೀವಕೋಶಗಳನ್ನು ನಿರ್ಮಿಸದೆ ಕೇವಲ ಗಾತ್ರದಲ್ಲಿ ದೊಡ್ಡವಾಗುತ್ತವೆ.
"https://kn.wikipedia.org/wiki/ಎಲೆ" ಇಂದ ಪಡೆಯಲ್ಪಟ್ಟಿದೆ