ಹೊಯಿಸಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೭ ನೇ ಸಾಲು:
‘ಹೊಯಿಸಳ’ ಎಂಬ ಕಾವ್ಯನಾಮದಿಂದ ಮಕ್ಕಳ ಸಾಹಿತಿ ಎಂದೇ ಪ್ರಖ್ಯಾತರಾಗಿದ್ದ ಅರಗ ಲಕ್ಷ್ಮಣರಾಯರು ಮೇ 7, 1893ರಂದು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಜನಿಸಿದರು. ಅವರ ತಂದೆ ಸುಬ್ಬಣ್ಣನವರು ಮತ್ತು ತಾಯಿ ಸುಬ್ಬಮ್ಮನವರು. ಖ್ಯಾತಲೇಖಕಿ [[ಎಂ. ಕೆ. ಇಂದಿರ]], ಇವರ ಸೋದರ ಸಂಬಂಧಿ. ಖ್ಯಾತ ಕನ್ನಡ ಚಲನಚಿತ್ರ ಸಾಹಿತಿ, ನಿರ್ಮಾಪಕ, ನಿರ್ದೇಶಕ, ನಟ-ನಾಟಕಕಾರರಾದ [[ಸಿ.ವಿ.ಶಿವಶಂಕರ್]] ಅವರು ಲಕ್ಷ್ಮಣರಾಯರ ಅಳಿಯ
 
ಲಕ್ಷ್ಮಣರಾಯರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾಭ್ಯಾಸ ನರಸಿಂಹರಾಜಪುರದಲ್ಲಿ ನೆರವೇರಿತು. ಅವರ ಪ್ರೌಢಶಾಲಾ ವ್ಯಾಸಂಗ ಮೈಸೂರಿನಲ್ಲಿ ನಡೆಯಿತು. ಅನಿಬೆಸೆಂಟರು ಮದನಪಲ್ಲಿಯಲ್ಲಿ ಸ್ಥಾಪಿಸಿದ್ದ ನ್ಯಾಷನಲ್‌ ಕಾಲೇಜಿನಿಂದ ಅವರು ಬಿ. ಎ. ಪದವಿ ಪಡೆದರು. ಕಾಲೇಜಿನಲ್ಲಿದ್ದಾಗಲೇ ಅನಿಬೆಸೆಂಟ್‌, [[ಸಿ.ಎಫ್‌. ಆಂಡ್ರೂಸ್]], ಮತ್ತು ಕಸಿನ್ಸ್ ಅವರುಗಳ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ್ದರಿಂದ ವಿದ್ಯಾಭ್ಯಾಸಕ್ಕೆ ತಡೆಯುಂಟಾಯಿತು. ೧೯೧೯ರಲ್ಲಿ ಶಾಂತಿನಿಕೇತನಕ್ಕೆ ತೆರಳಿ ಸುಮಾರು ೨ ವರ್ಷಗಳ ಕಾಲವಿದ್ದು ಬಂದನಂತರ ಇವರ ಬದುಕಿನ ರೀತಿಯೇ ಬದಲಾಯಿತು.
 
೧೯೨೨ರಲ್ಲಿ ಚನ್ನಪಟ್ಟಣದ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ನೇಮಕಗೊಂಡು ವಿವಿದೆಡೆಗಳಲ್ಲಿ ನಿವೃತ್ತರಾಗುವವರೆವಿಗೂ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಲಕ್ಷ್ಮಣರಾಯರಿಗೆ ಅಧ್ಯಾಪಕ ವೃತ್ತಿ ಬಹಳ ತೃಪ್ತಿ ತಂದುಕೊಟ್ಟ ವೃತ್ತಿಯಾಗಿತ್ತು. ನಿವೃತ್ತಿಯ ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಮಕ್ಕಳ ಕಾರ್ಯಕ್ರಮ ನಿರ್ವಾಹಕರಾಗಿ ಕೆಲಕಾಲ ಕಾರ್ಯನಿರ್ವಹಿಸಿದ ಅವರು, ಪ್ರಜಾವಾಣಿ ಪತ್ರಿಕೆಯ ‘ಬಾಲಭಾರತಿ’ ಮಕ್ಕಳ ವಿಭಾಗವನ್ನು ಕೆಲಕಾಲ ನಡೆಸಿ ಮಕ್ಕಳ ಪ್ರೀತಿಯ 'ಅಣ್ಣಾಜಿ'ಯಾದರು.
 
==ಸಾಹಿತ್ಯ==
"https://kn.wikipedia.org/wiki/ಹೊಯಿಸಳ" ಇಂದ ಪಡೆಯಲ್ಪಟ್ಟಿದೆ