ಗೋಪಾಲ ವಾಜಪೇಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು clean up, replaced: ಹಿಂದೀ → ಹಿಂದಿ using AWB
೧೫ ನೇ ಸಾಲು:
 
==ಪತ್ರಿಕೋದ್ಯಮದಲ್ಲಿ==
ಪ್ರಾರಂಭದಲ್ಲಿ ಗದಗಿನ ‘'ವಾಸವಿ'’ ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದರು. ನಂತರ ೧೯೭೧ರಲ್ಲಿ ಕೆ. ಎಚ್. ಪಾಟೀಲರ '‘ವಿಶಾಲ ಕರ್ನಾಟಕ’' ದೈನಿಕ ಸೇರಿಕೊಂಡರು. ಮರುವರ್ಷದಲ್ಲೇ ‘'ಸಂಯುಕ್ತ ಕರ್ನಾಟಕ’' ಬಳಗದ ‘'ಕರ್ಮವೀರ’' ವಾರಪತ್ರಿಕೆಯ ಉಪಸಂಪಾದಕರಾಗಿ ನೇಮಕಗೊಂಡರು. ಪತ್ರಿಕಾರಂಗದ ದಿಗ್ಗಜರುಗಳಾದ ಪಾ.ವೆಂ. ಆಚಾರ್ಯ, ಖಾದ್ರಿ ಶಾಮಣ್ಣ, ಸುರೇಂದ್ರ ದಾನಿ ಮುಂತಾದವರ ನಿಕಟ ಸಂಪರ್ಕ ಮತ್ತು ಮಾರ್ಗದರ್ಶನ ಗೋಪಾಲ ವಾಜಪೇಯಿ ಅವರಿಗೆ ಲಭಿಸಿತು.
 
‘'ಕರ್ಮವೀರ’' ಪತ್ರಿಕೆಯಲ್ಲಿ ವಾಜಪೇಯಿಯವರು ಬರೆಯುತ್ತಿದ್ದ ವ್ಯಕ್ತಿಚಿತ್ರಗಳು ಜನಪ್ರಿಯಗೊಂಡವು. ೧೯೭೮ರ ವರ್ಷದಲ್ಲಿ ವಾಜಪೇಯಿ ಅವರು ಕನ್ನಡದ ‘ರೀಡರ್ ಡೈಜೆಸ್ಟ್’ ಎಂದು ಪ್ರಖ್ಯಾತವಾಗಿರುವ '‘ಕಸ್ತೂರಿ'’ ಮಾಸಪತ್ರಿಕೆಯ ಸಂಪಾದಕೀಯಕ್ಕೆ ವರ್ಗಾವಣೆಗೊಂಡರು. “ಮೊಹರೆ ಮತ್ತು ಪಾವೆಂ ಅವರು ಬೆಳೆಸಿದ ಆ ಧೀಮಂತ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುವುದೇ ಒಂದು ಅನನ್ಯ ಅನುಭವ” ಎನ್ನುತ್ತಾರೆ ವಾಜಪೇಯಿ.
೨೫ ನೇ ಸಾಲು:
 
==ನಾಟಕ ಲೋಕದಲ್ಲಿ==
ಗೋಪಾಲ ವಾಜಪೇಯಿ ಅವರದು ವೈವಿಧ್ಯಪೂರ್ಣ ಪ್ರತಿಭೆ. ಪತ್ರಿಕಾ ಕ್ಷೇತ್ರವಲ್ಲದೆ ಆಕಾಶವಾಣಿ, ರಂಗಭೂಮಿ, ಚಲನಚಿತ್ರ, ಕಿರುತೆರೆ ಕ್ಷೇತ್ರಗಳಲ್ಲೂ ಅವರು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆಕಾಶವಾಣಿಯ ನಾಟಕ ವಿಭಾಗದ ‘ಎ’ ಗ್ರೇಡ್ ಕಲಾವಿದರಾಗಿ ಎಪ್ಪ ತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಮುಖ್ಯ ಪಾತ್ರ ವಹಿಸಿರುವ ಗೋಪಾಲ ವಾಜಪೇಯಿಯವರು ಪ್ರಖ್ಯಾತ ಬಾನುಲಿ ನಾಟಕ ರಚನೆಕಾರರೂ ಹೌದು.
 
ಗೋಪಾಲ ವಾಜಪೇಯಿ ಹತ್ತಕ್ಕೂ ಹೆಚ್ಚು ನಾಟಕಗಳ ರಚನೆಯನ್ನು ಮಾಡಿದ್ದಾರೆ. ಅವರ ‘'ದೊಡ್ಡಪ್ಪ’ ' ಎಂಬ ಜಾನಪದ ಶೈಲಿಯ ನಾಟಕ ರಾಜ್ಯದ ಪ್ರತಿಷ್ಠಿತ ಹವ್ಯಾಸಿ ತಂಡಗಳಿಂದ ೫೦೦ಕ್ಕೂ ಹೆಚ್ಚು ಪ್ರಯೋಗಳನ್ನು ಕಂಡ ಜನಪ್ರಿಯ ನಾಟಕವೆನಿಸಿದೆ. ‘'ಸಂತ್ಯಾಗ ನಿಂತಾನ ಕಬೀರ’', '‘ನಂದಭೂಪತಿ'’, 'ಧರ್ಮಪುರಿಯ ಶ್ವೇತವೃತ್ತ', 'ಆಗಮನ' ಮುಂತಾದ ಅವರ ಇತರ ಭಾಷಾ ಪ್ರಸಿದ್ಧ ರೂಪಾಂತರ ನಾಟಕಗಳೂ ‘ರಂಗಾಯಣ’, 'ಶಿವಸಂಚಾರ’ ತಂಡಗಳಿಂದ ಭಾರತಾದ್ಯಂತ ನೂರಾರು ಬಾರಿ ಪ್ರಯೋಗಿಸಲ್ಪಟ್ಟಿವೆ.
 
==ಗೀತರಚನೆ==
ಚಲನಚಿತ್ರರಂಗದಲ್ಲಿ ಸಂಭಾಷಣಕಾರರಾಗಿ, ಗೀತರಚನಕಾರರಾಗಿ ಗೋಪಾಲ ವಾಜಪೇಯಿ ಮಹತ್ವಪೂರ್ಣಕೆಲಸ ಮಾಡಿದ್ದಾರೆ. ಸುಂದರ ಕೃಷ್ಣ ಅರಸರ ‘'ಸಂಗ್ಯಾ ಬಾಳ್ಯಾ", ನಾಗಾಭರಣರ '‘ಸಂತ ಶಿಶುನಾಳ ಶರೀಫ’', '‘ನಾಗಮಂಡಲ’, '‘ಸಿಂಗಾರೆವ್ವ’ ' ಹಾಗೂ ಗಿರೀಶ್ ಕಾಸರವಳ್ಳಿಯವರ '‘ತಾಯಿ ಸಾಹೇಬ’' ಚಿತ್ರಗಳಿಗೆ ಸಂಭಾಷಣೆ ಬರೆದವರು ಗೋಪಾಲ ವಾಜಪೇಯಿ. ಜೊತೆಗೆ ‘'ಸಂಗ್ಯಾ ಬಾಳ್ಯಾ’,', '‘ನಾಗಮಂಡಲ’', '‘ಸಿಂಗಾರೆವ್ವ’ ' ಮತ್ತು ಕೇಸರಿ ಹರವೂ ಅವರ ‘'ಭೂಮಿಗೀತ'’ಕ್ಕೆ ವಾಜಪೇಯಿ ಗೀತರಚನೆಯನ್ನು ಮಾಡಿದ್ದಾರೆ. ಈ ಎಲ್ಲ ಚಿತ್ರಗೀತೆಗಳು ಅಪಾರ ಜನಪ್ರಿಯತೆ ಗಳಿಸಿವೆ.
 
ಗೋಪಾಲ ವಾಜಪೇಯಿ ಅವರ ಚಿತ್ರಗೀತೆಗಳು ಮಾತ್ರವಲ್ಲದೆ, ಸಿ ಅಶ್ವಥ್ ಅವರ ರಾಗಸಂಯೋಜನೆಯಲ್ಲಿ ‘'ನಾಗಮಂಡಲ’' ರಂಗ ಗೀತೆಗಳು, '‘ಜೋಡಿ ಜೀವ’' ಜಾನಪದ ಶೈಲಿಯ ಕಥನ ಗೀತೆಗಳು, ಕೆ ಎಂ ಎಫ್ ಅವರಿಗಾಗಿ '‘ಕ್ಷೀರ ಸಂಪದ’' ಎಂಬ ದ್ವನಿ ಸುರುಳಿಗಾಗಿ ರಚಿಸಿದ ಗೀತೆಗಳು; ಡಾ. ನಾಗರಾಜರಾವ್ ಹವಲ್ದಾರ್ ಹಾಡಿರುವ ಭಾವಾನುವಾದಿತ ಅಭಂಗಗಳು ದ್ವನಿಸುರುಳಿ, ಸಿಡಿ ರೂಪದಲ್ಲಿ ಹೊರಬಂದಿವೆ. ಇದೀಗ ವಾಜಪೇಯಿಯವರು ಕಬೀರ ದಾಸರ ದೋಹೆಗಳನ್ನು ಸರಳಗನ್ನಡದಲ್ಲಿ ಭಾವಾನುವಾದ ಮಾಡಿ ಸಿಡಿ ರೂಪದಲ್ಲಿ ಕನ್ನಡಿಗರಿಗೆ ಅರ್ಪಿಸುವ ಮಹತ್ತರ ಯೋಜನೆ ಹಾಕಿಕೊಂಡಿದ್ದಾರೆ.
 
==ಪ್ರಕಟಿತ ಕೃತಿಗಳು==
ಗೋಪಾಲ ವಾಜಪೇಯಿ ಅವರ ‘'ದೊಡ್ಡಪ್ಪ’ ' ನಾಟಕ ಹೆಗ್ಗ್ಗೋಡಿನ ಅಕ್ಷರ ಪ್ರಕಾಶನದಿಂದ, ಯಂಡಮೂರಿ ವೀರೇಂದ್ರನಾಥರ ಅನುವಾದವಾದ '‘ಯಶಸ್ಸಿನತ್ತ ಪಯಣ'’ ಹುಬ್ಬಳ್ಳಿಯ ಸಾಹಿತ್ಯ ಭಂಡಾರದಿಂದ ಮತ್ತು ಭೀಶಮ್ ಸಾಹ್ನಿಯವರ ಮೂಲ ಹಿಂದೀಹಿಂದಿ ನಾಟಕದ ಅನುವಾದ '‘ಸಂತ್ಯಾಗ ನಿಂತಾನ ಕಬೀರ’' ಪ್ರಗತಿ ಗ್ರಾಫಿಕ್ಸ್ ಪ್ರಕಾಶನದಿಂದಲೂ ಪ್ರಕಟಗೊಂಡಿವೆ. 'ನಂದ ಭೂಪತಿ' (ಶೇಕ್ಸ್ ಪಿಯರನ ಕಿಂಗ್ ಲಿಯರ್ ರೂಪಾಂತರ) ಇತ್ತೀಚೆಗೆ ಹಗರಿಬೊಮ್ಮನಹಳ್ಳಿಯ ಸುಯೋದನ ಪ್ರಕಾಶನದಿಂದ ಹೊರಬಂದ ಕೃತಿ. 'ದೊಡ್ದಪ್ಪ ' ನಾಟಕದ ಎರಡನೆಯ ಮುದ್ರಣ ಮತ್ತು 'ಧರ್ಮಪುರಿಯ ಶ್ವೇತವೃತ್ತ...' (ಚಾಕ್ ಸರ್ಕಲ್ ರೂಪಾಂತರ) ಮತ್ತು 'ಸುಮ್ಮನೇ ನೆನಪುಗಳು' ಇದೀಗ ಅಚ್ಚಿನ ಮನೆಗೆ ಹೋಗಲು ಕಾದಿವೆ.
 
==ಅಂಕಣಕಾರರಾಗಿ==
೪೭ ನೇ ಸಾಲು:
 
==ಗೌರವ ಪುರಸ್ಕಾರಗಳು==
ಗೋಪಾಲ ವಾಜಪೇಯಿ ಅವರ ವೈವಿಧ್ಯಪೂರ್ಣ ಪ್ರತಿಭೆಗೆ ಸಂದಿರುವ ಪುರಸ್ಕಾರಗಳೂ ವೈವಿಧ್ಯಪೂರ್ಣವಾಗಿವೆ. ರಾಜ್ಯಮಟ್ಟದ ಯುವನಾಟಕೋತ್ಸವ ‘ಅತ್ಯುತ್ತಮ ನಟ’ ಪ್ರಶಸ್ತಿ, (೧೯೭೮), '‘ದೊಡ್ಡಪ್ಪ’ ' ನಾಟಕ ರಚನೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ (೧೯೮೧), '‘ದೊಡ್ಡಪ್ಪ’ ' ನಾಟಕಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ (೧೯೮೩), '‘ದೊಡ್ಡಪ್ಪ’ ' ನಾಟಕಕ್ಕಾಗಿ ಹುಬ್ಬಳ್ಳಿ ಯ ಮೂರು ಸಾವಿರ ಮಟದ 'ಗ್ರಂಥ ಪುರಸ್ಕಾರ' (೧೯೮೫), 'ಕಸ್ತೂರಿ' ಪತ್ರಿಕೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಲೋಕ ಶಿಕ್ಷಣ ಟ್ರಸ್ಟಿನ ಗೌರವ (೨೦೦೬) ಮತ್ತು ಮಾಧ್ಯಮ ಅಕಾಡೆಮಿ ಪ್ರಶಸ್ತಿ (೨೦೦೮), ಅಲ್ಲದೆ ಹಲವಾರು ಪ್ರತಿಷ್ಠಿತ ಸಂಗ ಸಂಸ್ಥೆಗಳ ಗೌರವಗಳು ಗೋಪಾಲ ವಾಜಪೇಯಿ ಅವರಿಗೆ ಸಂದಿವೆ.
 
[[ವರ್ಗ: ಗೀತರಚನೆಕಾರರು]]
[[ವರ್ಗ: ನಾಟಕಕಾರರು]]
[[ವರ್ಗ: ಚಿತ್ರ ಸಂಭಾಷಣೆಗಾರರು]]
[[ವರ್ಗ: ಪತ್ರಕರ್ತರು]]
[[ವರ್ಗ: ಪತ್ರಿಕಾ ಸಂಪಾದಕರು]]
"https://kn.wikipedia.org/wiki/ಗೋಪಾಲ_ವಾಜಪೇಯಿ" ಇಂದ ಪಡೆಯಲ್ಪಟ್ಟಿದೆ