ಪ್ಲಾಸಿ ಕದನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೬ ನೇ ಸಾಲು:
ರಾಜ್ಯದ ನಾಯಕತ್ವದ ಬದಲಾವಣೆ ತಮ್ಮ ಹಿತಾಸಕ್ತಿಗೆ ಅವಶ್ಯಕ ಎಂದು ಕಂಪನಿಯವರು ಮೊದಲೇ ನಿರ್ಧರಿಸಿಯಾಗಿತ್ತು. ೧೭೫೨ರಷ್ಟು ಮೊದಲೇ ರಾಬರ್ಟ್ ಓರ್ಮೆ ಎಂಬಾತನು ರಾಬರ್ಟ್ ಕ್ಲೈವನಿಗೆ ಬರೆದ ಪತ್ರದಲ್ಲಿ ಸಿರಾಜುದ್ದೌಲನ ಅಜ್ಜ ಅಲಿವರ್ದಿ ಖಾನನ್ನು ಪದ್ಯುತಗೊಳಿಸುವುದು ಕಂಪನಿಯ ಅಭಿವೃದ್ಧಿಗೆ ಅಗತ್ಯ ಎಂದು ಬರೆದಿದ್ದನು.
೧೭೫೬ರಲ್ಲಿ ಅಲಿವರ್ದಿ ಖಾನನ ಅಕಾಲ ಮರಣದ ನಂತರ ಅವನ ಉತ್ತರಾಧಿಕಾರಿಯಾಗಿ ಸಿರಾಜುದ್ದೌಲನ ಹೆಸರಿತ್ತು. ಅವನನ್ನು ಅಲಿವರ್ದ್‌ಖಾನನು ದತ್ತು ತೆಗೆದುಕೊಂಡಿದ್ದನು. ಈ ಬದಲಾವಣೆಯ ವೇಳೆಗೆ ನಡೆದ ಕೆಲ ಬೆಳವಣಿಗೆಗಳು ಸಾಕಷ್ಟು ವಿವಾದಕ್ಕೆ ಕಾರಣವಾಗಿ , ಬ್ರಿಟಿಷರು ಈ ಅವಕಾಶವನ್ನು ಉಪಯೋಗಿಸಿಕೊಂಡು ಸಿರಾಜುದ್ದೌಲನ ವಿರುದ್ಧ , ಅಲಿವರ್ದಿಖಾನನ ಮಗಳು ಘಸೇಟಿಬೇಗಂ ಪಕ್ಷ ಹಿಡಿದರು.
 
==ಸೇನೆಗಳು==
 
ರಾಬರ್ಟ್ ಕ್ಲೈವನ ಸೈನ್ಯಲ್ಲಿ ಬರಿಯ ೯೫೦ ಯೂರೋಪಿಯನ್ ಸೈನಿಕರು, ೨೧೦೦ ಭಾರತೀಯ ಸೈನಿಕರು ಮತ್ತು ಒಂದಷ್ಟು ತುಪಾಕಿಗಳು ಇದ್ದರೆ , ನವಾಬನ ಸೈನ್ಯದಲ್ಲಿ ೫೦,೦೦೦ ಸೈನಿಕರೂ, ಭಾರೀ ಫಿರಂಗಿಗಳೂ ಹಾಗು ಅದನ್ನು ನಿರ್ವಹಿಸಲು ಫ್ರೆಂಚರು ಕಳುಹಿಸಿದ ೪೦ ಜನ ಫ್ರೆಂಚ್ ಸೈನಿಕರೂ ಇದ್ದರು. ಇದರಲ್ಲಿ ೧೬,೦೦೦ ಸೈನಿಕರು , ಬ್ರಿಟಿಷರೊಂದಿಗೆ ಒಳ ಸಂಧಾನ ಮಾಡಿಕೊಂಡಿದ್ದ ಮೀರ್‍ ಜಾಫರ್‍ ನ ಅಧೀನದಲ್ಲಿದ್ದು , ಯುದ್ಧದಲ್ಲಿ ಪಾಲ್ಗೊಳ್ಳಲಿಲ್ಲ. ಅಂತೂ ಕೊನೆಗೆ ಬರಿಯ ೫೦೦೦ ಸೈನಿಕರು ಯುದ್ಧಕ್ಕಿಳಿದರು. ಆದರೂ ಸಂಖ್ಯೆಯಲ್ಲಿ ಬ್ರಿಟಿಷರಿಗಿಂತ ಹೆಚ್ಚಿದ್ದ ನವಾಬನ ಸೈನ್ಯದ, ಸೇನಾಪತಿ ಮೀರ್‍ ಮದನ್ ಫಿರಂಗಿಯ ಗುಂಡು ತಗಲಿ ಸತ್ತು ಅದರಿಂದ ನವಾಬನ ಸೈನ್ಯದಲ್ಲಿ ಗೊಂದಲ ಉಂಟಾದುದರಿಂದ ಯುದ್ಧದ ಪರಿಣಾಮವೇ ಬದಲಾಯಿತು.ಈ ಯುದ್ಧ ಮುಗಿದಾಗ ೨೦ಕ್ಕೂ ಕಡಿಮೆ ಬ್ರಿಟಿಷ್ ಸೈನಿಕರು ಸತ್ತಿದ್ದರು.
 
==ಯುದ್ಧಾನಂತರ==
 
ಸಿರಾಜುದ್ದೌಲನಿಗೆ ಎರಡು ಬಗೆದ ಮೀರ್‍ ಜಾಫರನನ್ನು ಬಂಗಾಳದ ನವಾಬನನ್ನಾಗಿ ಮಾಡಲಾಯಿತು. ತಲೆ ಮರೆಸಿಕೊಂಡು ಓಡುವುದರಲ್ಲಿದ್ದ ಸಿರಾಜುದ್ದೌಲನ್ನು ಹಿಡಿದು ,ಮುಂದೆ , ಕೊಲ್ಲಲಾಯಿತು. ಘಸೇಟಿ ಬೇಗಂ ಮತ್ತು ಇತರ ಅನೇಕ ಪ್ರಬಲ ಮಹಿಳೆಯರನ್ನು ಸೆರೆಹಿಡಿದು [[ಢಾಕಾ]]ದಲ್ಲಿ ಬಂದೀಖಾನೆಯಲ್ಲಿರಿಸಲಾಯಿತು.
 
ಬ್ರಿಟಿಷರ ಮೇಲುಸ್ತುವಾರಿಯಲ್ಲಿ ಅಸಮಾಧಾನಗೊಂಡ ಮೀರ್‍ ಜಾಫರನು ಡಚ್ಚರನ್ನು ಸಹಾಯಕ್ಕಾಗಿ ಬೇಡಿದನು. ಅವರು ಕಳುಹಿಸಿದ ಏಳು ಹಡಗುಗಳು ಮ್ತು ೭೦೦ ನಾವಿಕರನ್ನು ಬ್ರಿಟಿಷರು ಯುದ್ಧದಲ್ಲಿ ಪರಾಭವಗೊಳಿಸಿದರು. ಅದರ ನಂತರ ಮೀರ್‍ ಜಾಫರನನ್ನು ಕೆಳಗಿಳಿಸಿ ಅವನ ಸ್ಥಾನಕ್ಕೆ , ಅವನ ಅಳಿಯ ಮೀರ್‍ ಕಾಸೀಮನನ್ನು ತರಲಾಯಿತು. ಸ್ವತಂತ್ರ ಮನೋವೃತ್ತಿಯನ್ನು ತೋರಿ ಅದ ಅವನನ್ನು ೧೭೬೪ರ [[ಬಕ್ಸಾರ್‍ ಕದನ]]ದಲ್ಲಿ ಬ್ರಿಟಿಷರು ಸೋಲಿಸುವುದರೊಂದಿಗೆ ಬಂಗಾಳ ಸಂಪೂರ್ಣವಾಗಿ ಬ್ರಿಟಿಷರ ಕೈಗೆ ಹೋಯಿತು. ಮೀರ್‍ ಜಾಫರನನ್ನು ಪುನಃ ಬ್ರಿಟಿಷ್ ಅಧೀನದ ನವಾಬನನ್ನಾಗಿ ಸ್ಥಾಪಿಸಲಾಯಿತು.
 
==ಯುದ್ಧದ ಬಹುಮಾನ==
 
ಕ್ಲೈವನು ಕಂಪನಿಗಾಗಿ ೨.೫ ಮಿಲಿಯನ್ ಪೌಂಡುಗಳು, ಹಾಗೂ ತನ್ನಸ್ವಂತಕ್ಕಾಗಿ ೨,೩೪,೦೦೦ ಪೌಂಡುಗಳನ್ನು ನವಾಬನ ಬೊಕ್ಕಸದಿಂದ ವಸೂಲು ಮಾಡಿದನು. ಕಂಪನಿ ಫೋರ್ಟ್ ವಿಲಿಯಮ್ಮ ಸುತ್ತಮುತ್ತ ಜಮೀನಿನ ಉಪಯೋಗಕ್ಕ್ಕೆ ಕೊಡಬೇಕಾದ ೩೦,೦೦೦ ಪೌಂಡು ವಾರ್ಷಿಕ ಕಂದಾಯವನ್ನೂ ಕ್ಲೈವನಿಗೆ ಜಹಗೀರು ಬಿಡಲಾಯಿತು. ಆ ಕಾಲದಲ್ಲಿ ೮೦೦ ಪೌಂಡಿನಲ್ಲಿ ಇಬ್ಬ ಬ್ರಿಟಿಷ್ ಆಢ್ಯ ಗೃಹಸ್ತ ಐಷಾರಾಮದ ಜೀವನ ಮಾಡಬಹುದಾಗಿತ್ತು ಎಂದರೆ ಕ್ಲೈವನ ಸಂಪತ್ತಿನ ಕಲ್ಪನೆ ಬರಬಹುದು.
೧೭೭೬ರಲ್ಲಿ ಕ್ಲೈವನನ್ನು ಬಂಗಾಳದ ಗವರ್ನರ್‍ ಎಂದು ನೇಮಿಸಲಾಯಿತು. ಮುಂದೆ ೧೭೭೪ರಲ್ಲಿ , ಅಫೀಮಿನ ವ್ಯಸನವಿದ್ದ ಕ್ಲೈವನು , ಆತ್ಮಹತ್ಯೆ ಮಾಡಿಕೊಂಡನು.
==ಕೆಲ ಸ್ವಾರಸ್ಯಕರ ಸಂಗತಿಗಳು==
 
* ಕ್ಲೈವನ ಸಿಬ್ಬಂದಿಯಲ್ಲಿ ಒಬ್ಬ ನಾಗಿದ್ದ ವಾರೆನ್ ಹೇಸ್ಟಿಂಗ್ಸ್ ಆಗಿನ್ನೂ ತರುಣ. ೧೭೫೭ರಲ್ಲಿ ಅವನನ್ನು ನವಾಬನ ಆಸ್ಥಾನದಲ್ಲಿ ರೆಸಿಡೆಂಟನನ್ನಾಗಿ ನೇಮಿಸಲಾಯಿತು. ಮುಂದೆ ಆತ [[ಭಾರತ]]ದ ಮೊದಲನೆಯ ಗವರ್ನರ್‍ ಜನರಲ್ ಆದ. ಮುಂದೆ ಭ್ರಷ್ಟಾಚಾರದ ಆಓಪದ ಮೇಲೆ ಅವನನ್ನು ಆ ಸ್ಥಾನದಿಂದ ಕಿತ್ತು ಹಾಕಲಾಯಿತು.
 
* ಕ್ಲೈವನಿಗೆ ಮುಂದೆ ಪ್ಲಾಸಿಯ ಬೇರನ್ ಎಂಬ ಪದವಿ ಪ್ರದಾನ ಮಾಡಲಾಯಿತು. ಆತ ಐರ್‍ಲೆಂಡಿನಲ್ಲಿ ಜಮೀನು ಕೊಂಡು , ಅದರಲ್ಲಿ ಒಂದು ಭಾಗಕ್ಕೆ ಪ್ಲಾಸಿ ಎಂದು ಹೆಸರಿಟ್ಟ. ಇಂದಿಗೂ ಆ ಹೆಸರಿಟ್ಟು ಕೊಂಡಿರುವ ಆ ಜಾಗದಲ್ಲಿ ಈಗ ಲಿಮರಿಕ್ ವಿಶ್ವವಿದ್ಯಾಲಯವಿದೆ.
 
* ಈ ಯುದ್ಧದಲ್ಲಿ ಫ್ರೆಂಚರಿಂದ ವಶಪಡಿಸಿಕೊಳ್ಳಲಾದ ತೋಫುಗಳನ್ನು [[ಕಲಕತ್ತಾ]]ದ ವಿಕ್ಟೋರಿಯಾ ಮೆಮೋರಿಯಲ್ ನಲ್ಲಿ ನೋಡಬಹುದು.
 
*ಮುರ್ಶಿದಾಬಾದಿನ ಹತ್ತಿರದಲ್ಲಿ ಜಾಫರ್‍ ಗಂಜ್ ಎಂಬಲ್ಲಿ ಮೀರ್‍ ಜಾಫರನ ಪಾಳುಬಿದ್ದ ಅರಮನೆ ಇದೆ. ಇಲ್ಲಿಯೇ ನಮಕ್ ಹರಾಮ್ ( ವಿಶ್ವಾಸಘಾತಕ) ಬಾಗಿಲು ಇದೆ. ಪಲ್ಲಕ್ಕಿಯಲ್ಲಿ ಬುರ್ಖಾ ಹಾಕಿದ ರಾಣಿಯ ವೇಷದಲ್ಲಿ ಬ್ರಿಟಿಷ್ ಅಧಿಕಾರಿಯು ಮೀರ್‍ ಜಾಫರನೊಂದಿಗೆ ಮಸಲತ್ತಿಗೆ ಇಲ್ಲಿಯೇ ಬಂದಿದ್ದ ಎಂದು ಹೇಳುತ್ತಾರೆ.
 
 
[[ವರ್ಗ:ಭಾರತದ ನಿರ್ಣಾಯಕ ಯುದ್ಧಗಳು]]
"https://kn.wikipedia.org/wiki/ಪ್ಲಾಸಿ_ಕದನ" ಇಂದ ಪಡೆಯಲ್ಪಟ್ಟಿದೆ