ಓಪರಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಕೊಂಡಿ ಸೇರ್ಪಡೆ
೭ ನೇ ಸಾಲು:
ಇನ್ನೊಂದು ಪ್ರದೇಶ (S-ಸೈಟ್) ಚಾಲಕದೊಂದಿಗೆ ಸೇರುತ್ತದೆ. ಇನ್ನೊಂದು ಪ್ರದೇಶ (ಂ-ಸೈಟ್) ಪ್ರೇರೇಪಕವನ್ನು ಬಂಧಿಸುತ್ತದೆ. ಪ್ರೇರೇಪಕದೊಂದಿಗೆ ಆಗುವ ಬಂಧನ ಪ್ರೋಟೀನಿನ ಆಕಾರದಲ್ಲಿ ವ್ಯತ್ಯಾಸವನ್ನು ಉಂಟುಮಾಡಿ ಚಾಲಕ-ದಮನಕಗಳಿಗಿರುವ ವಾತ್ಸಲ್ಯವನ್ನು ತಗ್ಗಿಸುತ್ತದೆ. ಈ ಅಭಿಪ್ರಾಯಗಳನ್ನು ಚಿತ್ರದಲ್ಲಿ ತೋರಿಸಿದೆ.
 
ಓಪರಾನ್ ಪ್ರಮೇಯ ಕೇವಲ ತಾತ್ತ್ವಿಕವಾಗಿಯೇ ಉಳಿದಿಲ್ಲ. ಎಷರೀಷಿಯಾ ಕೋಲೈ ಮತ್ತು ಸಾಲ್ಮೊನೆಲ್ಲಾ ಗುಂಪಿನ ಸೂಕ್ಷ್ಮ ಜೀವಿಗಳಲ್ಲಿ[[ಜೀವಿ]]ಗಳಲ್ಲಿ ಇದುವರೆಗೆ ಸುಮಾರು ಹತ್ತಕ್ಕೂ ಮಿಕ್ಕಿದ ಓಪರಾನುಗಳನ್ನು ಅಧ್ಯಯನ ಮಾಡಲಾಗಿದೆ. ಇವುಗಳ ಪೈಕಿ ಲ್ಯಾಕ್ಪೋಸ್ ಸಕ್ಕರೆಯ ಚಯಾಪಚಯ ಕ್ರಿಯೆಗೆ ಕಾರಣವಾದ ಲ್ಯಾಕ್ ಓಪರಾನ್, ಲ್ಯೂಸೀನ್ ಅಮೈನೋ ಆಮ್ಲದ ಸಂಶ್ಲೇಷಣೆಗೆ ಕಾರಣವಾದ ಲ್ಯೂ ಓಪರಾನ್, ಹಿಸ್ಟಿಡಿನ್ ಅಮೈನೋ ಆಮ್ಲದ ಸಂಶ್ಲೇಷಣೆಗೆ ಸಂಬಂಧಪಟ್ಟ ಹಿಸ್ ಓಪರಾನ್, ಇದನ್ನೂ ಇನ್ನೂ ಕೆಲವು ಓಪರಾನುಗಳನ್ನೂ ವಿಶದವಾಗಿ ಅಭ್ಯಸಿಸಲಾಗಿದೆ. 1969ರಲ್ಲಿ ಬೆಕ್ನಿತ್ ಮತ್ತು ಸಹೋದ್ಯೋಗಿಗಳು ಲ್ಯಾಕ್ ಓಪರಾನನ್ನು ಬೇರ್ಪಡಿಸುವುದರಲ್ಲಿ ಜಯಗಳಿಸಿದರು. ಇವೆಲ್ಲ ಅಧ್ಯಯನಗಳ ಫಲವಾಗಿ ಸೂಕ್ಷ್ಮಜೀವಿಗಳಲ್ಲಿ ನಿಯಂತ್ರಣ ವ್ಯವಸ್ಥೆಯ ಬಗ್ಗೆ ಕೆಲವು ವಿಷಯಗಳು ಬೆಳಕಿಗೆ ಬಂದಿವೆ.
 
ಈಗಿರುವ ಅಭಿಪ್ರಾಯಗಳನ್ನು ಸಂಕ್ಷಿಪ್ತವಾಗಿ ಹೀಗೆ ತಿಳಿಸಬಹುದು. ಜಾಕೋಬ್ ಮತ್ತು ಮೋನೋರವರ ಪ್ರಮೇಯ, ಕೆಲವು ಮಾರ್ಪಾಡುಗಳೊಡನೆ, ಸೂಕ್ಷ್ಮಜೀವಿಗಳಲ್ಲಿರುವ ನಿಯಂತ್ರಣವ್ಯವಸ್ಥೆಯನ್ನೂ ವಿವರಿಸಬಲ್ಲದು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಆದರೆ ನಿಯಂತ್ರಣ ಸಕಾರಾತ್ಮಕವೇ ಅಥವಾ ನಕಾರಾತ್ಮಕವೇ ಎಂಬುದು ಇನ್ನೂ ಬಗೆಹರಿಯದ ವಿಷಯ. ಲ್ಯಾಕ್ ಓಪರನಿನ ಸಂದರ್ಭದಲ್ಲಿ ನಡೆದಿರುವ ಪ್ರಯೋಗಗಳಿಂದ ನಿಯಂತ್ರಣ, ದಮನವಾದ ಜೀನು ವ್ಯಕ್ತವಾಗದಂತೆ, ನಕಾರಾತ್ಮಕವೆಂದು ತೋರಿಬಂದಿದೆ. ತದ್ವಿರುದ್ಧವಾಗಿ ಅರಾಬಿನೋಸ್ ಓಪರಾನಿನಲ್ಲಿ ಸಕಾರಾತ್ಮಕ ನಿಯಂತ್ರಣವಿದೆಯೆನ್ನುವುದಕ್ಕೆ ಬಲವತ್ತರವಾದ ಅನುವಂಶಿಕ ಸಾಕ್ಷ್ಯಗಳು ದೊರೆತಿವೆ.
"https://kn.wikipedia.org/wiki/ಓಪರಾನ್" ಇಂದ ಪಡೆಯಲ್ಪಟ್ಟಿದೆ