ಕತಾರ್ಸಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧೧ ನೇ ಸಾಲು:
ಈ ಅಭಿಪ್ರಾಯಗಳು ಎಷ್ಟರ ಮಟ್ಟಿಗೆ ಅರಿಸ್ಟಾಟಲನದೊ ಹೇಳುವಂತಿಲ್ಲ. ಪಾಶ್ಚಾತ್ಯ ವಿಮರ್ಶೆಯಲ್ಲಿ ಕತಾರ್ಸಿಸ್ ಪದದಷ್ಟು ಚರ್ಚಿತವಾಗಿರುವ ಉಕ್ತಿ ಬೇರೊಂದಿಲ್ಲ.
 
ಹರ್ಷನಾಟಕವೂ ನಗುವಿನ ಮೂಲಕ ಇದೇ ರೀತಿ ಭಾವಶುದ್ಧಿಯನ್ನು ದೊರಕಿಸುತ್ತದೆ ಯೆಂದು ಪ್ರಾಯಶಃ ಅರಿಸ್ಟಾಟಲನ ಅಭಿಮತವಾಗಿತ್ತು. ಆದರೆ ಹರ್ಷನಾಟಕವನ್ನು ಕುರಿತ ಅವನ ಲೇಖನ ಕಣ್ಮರೆಯಾಗಿದೆಯಾಗಿ ಖಚಿತವಾಗಿ ಏನನ್ನೂ ಹೇಳುವಂತಿಲ್ಲ. ಕತಾರ್ಸಿಸ್ ತತ್ತ್ವ ಅರಿಸ್ಟಾಟಲನ ಬಗೆಗೇ ರುದ್ರನಾಟಕದ ಬಗೆಗೇ ಮಿತಿಗೊಂಡಿಲ್ಲ. ಪಾಶ್ಚಾತ್ಯ ಕಲಾಮೀಮಾಂಸೆಯಲ್ಲಿ ಅದಕ್ಕೆ ಹೆಚ್ಚಿನ ವ್ಯಾಪ್ತಿ ಲಭಿಸಿದೆ. ಲಲಿತ ಕಲೆಯ ಸ್ವರೂಪದ ಮೇಲೆ ಕತಾರ್ಸಿಸ್ ಬೆಳಕು ಚೆಲ್ಲುತ್ತದೆಯೇ ಇದೊಂದು ಗಹನ ಪ್ರಶ್ನೆ. ಇಲ್ಲವೆಂದು ಅನೇಕರ ವಾದ. ಕಲೆಗೋಸ್ಕರ ಕಲೆ ಇರುವುದರಿಂದ ಅದಕ್ಕೆ ಪ್ರತ್ಯೇಕ ಉದ್ದೇಶವನ್ನು ಆರೋಪಿಸುವುದು ತಪ್ಪು. ನಾಟಕ ಒಂದು ವಿನೋದ ಅಷ್ಟೇ. ವಿನೋದ ಮುಖ್ಯವಲ್ಲ. ಅದರಿಂದ ಉಂಟಾಗಬಹುದಾದ ಭಾವಶುದ್ಧಿ ಇತ್ಯಾದಿಗಳು ಕೇವಲ ಗೌಣ-ಎಂದವರ ವಾದ. (ಎಸ್.ವಿ.ಆರ್.)
 
ಅರಿಸ್ಟಾಟಲ್ ಟ್ರ್ಯಾಜಿಡಿಯು ಭಯ ಇತ್ಯಾದಿಗಳನ್ನು ಪ್ರಚೋದಿಸಿ ಅವುಗಳ ಕೆತಾರ್ಸಿಸ್ಅನ್ನು ಸಾಧಿಸುತ್ತದೆ ಎಂದ. ಟ್ರ್ಯಾಜೆಡಿಯ ಕ್ರಿಯೆಯನ್ನು ವೀಕ್ಷಿಸಿ ಪ್ರೇಕ್ಷಕರು ಖಿನ್ನವಾಗುವುದಿಲ್ಲ, ಉದ್ವೇಗಗೊಳ್ಳುವುದಿಲ್ಲ, ಒಂದು ರೀತಿಯ ಬಿಡುಗಡೆಯನ್ನು ಅನುಭವಿಸುತ್ತಾರೆ ಎಂದು ಪ್ರತಿಪಾದಿಸಿದ. ಅನಾರೋಗ್ಯಕರವಾಗಬಹುದಾದ ಭಾವಗಳು ನಾಟಕದ ನಾಯಕನ ಬಗೆಗೆ ಸಹಾನುಭೂತಿಯಿಂದ ಬಹಿರ್ಮುಖಿಯಾಗುತ್ತವೆ, ಹೀಗೆ ಮಾನಸಿಕ ಸಾಮರಸ್ಯವಾಗುತ್ತದೆ ಎಂದು ಅರಿಸ್ಟಾಟಲನ ವಿವರಣೆ ಎಂಬುದು ಕೆಲವು ವಿಮರ್ಶಕರ ಅಭಿಪ್ರಾಯ. ಇದರಿಂದ ಬದುಕಿನ ನೋವಿನ ಮೇಲೆ ಪ್ರೇಕ್ಷಕನ ಮನಸ್ಸು ಪ್ರಭುತ್ವವನ್ನು ಸಾಧಿಸುತ್ತದೆ, ಟ್ರ್ಯಾಜಿಡಿಯು ಮನುಷ್ಯನ ನೈತಿಕ ಸ್ವಭಾವವನ್ನು ದುರ್ಬಲಗೊಳಿಸುವುದಿಲ್ಲ, ಇನ್ನೂ ಬಲಗೊಳಿಸುತ್ತದೆ ಎಂದು ವಿಮರ್ಶಕರು ವಿವರಿಸಿದ್ದಾರೆ. (ಎಲ್.ಎಸ್.ಎಸ್.)
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಕತಾರ್ಸಿಸ್" ಇಂದ ಪಡೆಯಲ್ಪಟ್ಟಿದೆ