ಕತಾರ್ಸಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಕತಾರ್ಸಿಸ್ : ಭೇದಿ, ವಿರೇಚನೆ ಎಂಬ ಅರ್ಥವನ್ನುಳ್ಳ ಈ ಪ್ರಾಚೀನ ಗ್ರೀಕ್ ಪದ ವೈದ...
 
ಚುNo edit summary
೧ ನೇ ಸಾಲು:
'''ಕತಾರ್ಸಿಸ್''' : ಭೇದಿ, ವಿರೇಚನೆ ಎಂಬ ಅರ್ಥವನ್ನುಳ್ಳ ಈ ಪ್ರಾಚೀನ ಗ್ರೀಕ್ ಪದ ವೈದ್ಯಕ್ಕೆ ಸೇರಿದುದು. ತತ್ತ್ವಜ್ಞರು ಕ್ರಮೇಣ ಇದನ್ನು ಕೆಲವು ಕಲೆಗಳು ಉಂಟುಮಾಡುವ ಪರಿಣಾಮಕ್ಕೆ ಅನ್ವಯಿಸಿದರು.
 
ರುದ್ರನಾಟಕದ (ಗಂಭೀರ ನಾಟಕ) ಮೇಲೆ ಪ್ಲೇಟೊ ಮಹಾಶಯನಿಗೆ ವಿಶೇಷ ಆಗ್ರಹ. ಅದರಿಂದ ಆಗುವ ಕೇಡನ್ನು ಆತ ಹೀಗೆ ಬಣ್ಣಿಸಿದ: ನಾಟಕಶಾಲೆಯಲ್ಲಿ ಅದನ್ನು ವೀಕ್ಷಿಸುತ್ತ ನೋಟಕರು ತಮ್ಮ ಮರುಕವನ್ನು ತಡೆದಿಡಲಾರದೆ ಎಲ್ಲರೆದುರಿಗೂ ಗಟ್ಟಿಯಾಗಿ ರೋದಿಸುತ್ತಾರೆ. ಆ ವರ್ತನೆಯಿಂದ ಅವರ ದಾಢರ್ಯ್‌ಕ್ಕೂ ಸಂಯಮಕ್ಕೂ ಹಾನಿ, ಅವರ ಪೌರುಷಕ್ಕೇ ಅಪಾಯ. ಆದ್ದರಿಂದ ಆದರ್ಶ ಗಣರಾಜ್ಯದಿಂದ ನಾಟಕಕರ್ತರನ್ನು ಗಡೀಪಾರು ಮಾಡತಕ್ಕದ್ದು.
೧೪ ನೇ ಸಾಲು:
 
ಅರಿಸ್ಟಾಟಲ್ ಟ್ರ್ಯಾಜಿಡಿಯು ಭಯ ಇತ್ಯಾದಿಗಳನ್ನು ಪ್ರಚೋದಿಸಿ ಅವುಗಳ ಕೆತಾರ್ಸಿಸ್ಅನ್ನು ಸಾಧಿಸುತ್ತದೆ ಎಂದ. ಟ್ರ್ಯಾಜೆಡಿಯ ಕ್ರಿಯೆಯನ್ನು ವೀಕ್ಷಿಸಿ ಪ್ರೇಕ್ಷಕರು ಖಿನ್ನವಾಗುವುದಿಲ್ಲ, ಉದ್ವೇಗಗೊಳ್ಳುವುದಿಲ್ಲ, ಒಂದು ರೀತಿಯ ಬಿಡುಗಡೆಯನ್ನು ಅನುಭವಿಸುತ್ತಾರೆ ಎಂದು ಪ್ರತಿಪಾದಿಸಿದ. ಅನಾರೋಗ್ಯಕರವಾಗಬಹುದಾದ ಭಾವಗಳು ನಾಟಕದ ನಾಯಕನ ಬಗೆಗೆ ಸಹಾನುಭೂತಿಯಿಂದ ಬಹಿರ್ಮುಖಿಯಾಗುತ್ತವೆ, ಹೀಗೆ ಮಾನಸಿಕ ಸಾಮರಸ್ಯವಾಗುತ್ತದೆ ಎಂದು ಅರಿಸ್ಟಾಟಲನ ವಿವರಣೆ ಎಂಬುದು ಕೆಲವು ವಿಮರ್ಶಕರ ಅಭಿಪ್ರಾಯ. ಇದರಿಂದ ಬದುಕಿನ ನೋವಿನ ಮೇಲೆ ಪ್ರೇಕ್ಷಕನ ಮನಸ್ಸು ಪ್ರಭುತ್ವವನ್ನು ಸಾಧಿಸುತ್ತದೆ, ಟ್ರ್ಯಾಜಿಡಿಯು ಮನುಷ್ಯನ ನೈತಿಕ ಸ್ವಭಾವವನ್ನು ದುರ್ಬಲಗೊಳಿಸುವುದಿಲ್ಲ, ಇನ್ನೂ ಬಲಗೊಳಿಸುತ್ತದೆ ಎಂದು ವಿಮರ್ಶಕರು ವಿವರಿಸಿದ್ದಾರೆ. (ಎಲ್.ಎಸ್.ಎಸ್.)
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕತಾರ್ಸಿಸ್|ಕತಾರ್ಸಿಸ್}}
"https://kn.wikipedia.org/wiki/ಕತಾರ್ಸಿಸ್" ಇಂದ ಪಡೆಯಲ್ಪಟ್ಟಿದೆ