ಉಪಯುಕ್ತತಾವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಉಪಯುಕ್ತತಾವಾದ: ಯಾವ ಕಾರ್ಯದಿಂದ ಗರಿಷ್ಠ ಸಂಖ್ಯೆಯ ಜನಕ್ಕೆ ಗರಿಷ್ಠ ಕ್ಷೇಮ...
 
ಕೊಂಡಿ ಸೇರ್ಪಡೆ
೧ ನೇ ಸಾಲು:
 
ಉಪಯುಕ್ತತಾವಾದ: ಯಾವ ಕಾರ್ಯದಿಂದ ಗರಿಷ್ಠ ಸಂಖ್ಯೆಯ ಜನಕ್ಕೆ ಗರಿಷ್ಠ ಕ್ಷೇಮ ಲಭಿಸುವುದೋ ಅಂಥ ಕಾರ್ಯವೇ ಸೂಕ್ತ ಕಾರ್ಯ ಎಂಬ ನೀತಿಸೂತ್ರ (ಯುಟಿಲಿಟೇರಿಯನಿಸಂ). ಪ್ರಯೋಜಕತೆಯೇ ಧರ್ಮಕ್ಕೆ ನಿರ್ಣಾಯಕ-ಎಂಬ ಈ ವಾದ ಪಾಶ್ಚಾತ್ಯ ರಾಜಕೀಯ ನೈತಿಕ ಇತಿಹಾಸದಲ್ಲಿ[[ಇತಿಹಾಸ]]ದಲ್ಲಿ ಕಾಲದಿಂದ ಕಾಲಕ್ಕೆ ಬಗೆಬಗೆಯ ಬಣ್ಣ ತಳೆದಿದೆ. ಯಾವುದು ಐಹಿಕ ಗುರಿ ಸಾಧಕವೋ ಅದು ಉಪಯುಕ್ತ. ಬೇಕೆನಿಸುವ ಎಲ್ಲ ವಸ್ತುವೂ, ಬಾಳಬಹುದಾದ ಎಲ್ಲ ಜೀವನವೂ ಇಲ್ಲಿ ಉದ್ಬವಿಸುವುದಿಲ್ಲ. ಆದ್ದರಿಂದ ಈ ವಾದ ಅಷ್ಟೇನೂ ಸ್ತುತ್ಯಾರ್ಹವಲ್ಲ. ಇದೊಂದು ನೀತಿಸೂತ್ರವಾಗಲಿ ಧರ್ಮದೃಷ್ಟಿಯಾಗಲಿ ಆಗಲಾರದು-ಎಂದು ಈ ಬಗ್ಗೆ ವಾದಿಸುವವರೂ ಉಂಟು.
 
ಉಪಯುಕ್ತತಾವಾದವನ್ನು ಮೊಟ್ಟಮೊದಲಿಗೆ ಮಂಡಿಸಿದ ರಿಚರ್ಡ್ ಕಂಬರ್ಲ್ಯಾಂಡ್ (1670). ಪರಮಸುಖ ಸಾಧನೆಯೇ ಮೂಲಭೂತ ನೀತಿಸೂತ್ರವೆಂದು ಆತ ಪ್ರತಿಪಾದಿಸಿದ. ಈ ಸೂತ್ರ ದೈವದತ್ತ: ಇದು ದೇವರ ಮೂಲ ನಿಯವi.
೯ ನೇ ಸಾಲು:
ಒಳಿತು-ಕೆಡಕುಗಳ ಭಾವನಾತ್ಮಕ ವಿವೇಚನೆ ನಡೆಸಿದ್ದ ಬೆಂಥಾಮ್, ಮಿಲ್ಗಳ ವಾದವನ್ನು ಸಂಪೂರ್ಣ ತಳ್ಳಿ ಹಾಕಿ ಅದಕ್ಕೆ ಬೇರೆ ರೂಪು ಕೊಟ್ಟವನು ಹೆನ್ರಿ ಸಿಜ್ವಿಕ್ (1874), ಗರಿಷ್ಠ ಕ್ಷೇಮಸೂತ್ರ ರಚಯಕನೀತನೇ. ಇದೊಂದೇ ಈತನ ದೃಷ್ಟಿಯಲ್ಲಿ ಮೂಲಭೂತ ನೀತಿಸೂತ್ರ .ಸುಖಪ್ರಾಪ್ತಿಯೊಂದೇ ಸಾಧನೀಯವೆಂಬ ಸೂತ್ರವನ್ನು ಜಿ.ಇ. ಮೂರನೂ (1903) ತಳ್ಳಿ ಹಾಕಿದ. ಜ್ಞಾನ, ರಸಾಭಿಜ್ಞತೆ, ಪ್ರೀತಿ, ಸ್ನೇಹ-ಇವೆಲ್ಲವೂ ಪರಮ ಪುರುಷಾರ್ಥಗಳೇ ಎಂದು ಈತ ಬರೆದ. ಗರಿಷ್ಠ ಸಂಖ್ಯೆಯ ಗರಿಷ್ಠ ಕ್ಷೇಮ-ಎಂಬ ಸೂತ್ರವನ್ನೂ ಈತ ಮುಂದೆ (1912) ಸಮರ್ಥಿಸಿದ. ಆದ್ದರಿಂದ ಈತನ ಉಪಯುಕ್ತತಾವಾದ ವನ್ನು ಆದರ್ಶ ಉಪಯುಕ್ತತಾವಾದವೆಂದು ಕರೆಯಲಾಗಿದೆ. ಸೌಖ್ಯ ಪುರುಷಾರ್ಥೀ ಉಪಯುಕ್ತತಾವಾದಕ್ಕಿಂತ ಇದು ಭಿನ್ನ, ಒಂದು ಕೆಲಸ ಒಳ್ಳೆಯದೇ, ಕೆಟ್ಟದ್ದೇ ಎಂಬುದನ್ನು ಪರಿಗಣಿಸಬೇಕು-ಎಂದು ಈತ ವಾದಿಸಿದ್ದಾನೆ. ಆದ್ದರಿಂದ ಈತನ ದೃಷ್ಟಿಯಲ್ಲಿ ಉದ್ದೇಶಗಳು ಕೇವಲ ಗುರಿಸಾಧಕಗಳಲ್ಲ. ಹೀಗೆ ಉಪಯುಕ್ತತಾವಾದದ ಹಲವಾರು ಲೇಖಕರು ಎರಡು ವಿರುದ್ಧ ನಿಲವುಗಳ ನಡುವೆ ಸಾಮರಸ್ಯ ತರಲು ಯತ್ನಿಸಿರುವುದು ಕಂಡುಬರುತ್ತದೆ. ಸ್ವಂತ ಸುಖವೇ ಅನ್ವೇಷಣಾರ್ಹವೆಂಬುದು ಒಂದು ನಿಲವು. ಮಾನವಹಿತವೇ ಅಂತಿಮ ಲಕ್ಷ್ಯವೆನ್ನುವುದಾದರೆ ಸ್ವಂತಸುಖವೇ ಏಕೈಕ ಲಕ್ಷ್ಯವೆಂಬುದು ಸರಿಯಲ್ಲ-ಎಂಬುದು ಇನ್ನೊಂದು ನಿಲವು. ಈ ವಿರುದ್ಧ ನಿಲವುಗಳ ಸಾಮರಸ್ಯ ಯತ್ನದಿಂದಾಗಿಯೇ ಈ ವಾದ ಅನೇಕರ ಆಸಕ್ತಿ ಕೆರಳಿಸಿದೆ.
 
ಒಟ್ಟಿನಲ್ಲಿ ಹೆಚ್ಚು ಜನರಿಗೆ ಹೆಚ್ಚು ಸುಖವನ್ನೊದಗಿಸುವುದೇ ಉಪಯುಕ್ತತಾವಾದದ ಒರೆಗಲ್ಲು. ಮನುಷ್ಯನ[[ಮನುಷ್ಯ]]ನ ಜೀವನದಲ್ಲಿ ಅಂತಿಮವಾದ ಗುರಿಯೇ ಸುಖ. ಆದ್ದರಿಂದ ಎಲ್ಲ ಪ್ರಜೆಗಳಿಗೂ ನಾನಾ ವಿಧಗಳಲ್ಲಿ ಹೆಚ್ಚು ಸುಖ ಸಂವರ್ಧನೆಗೆ ಅವಕಾಶ ಕೊಟ್ಟು, ಆದಷ್ಟೂ ದುಃಖದ ಉಗಮವನ್ನು ತಪ್ಪಿಸುವಂತೆ ದೇಶ ಮತ್ತು ಸರ್ಕಾರ ತನ್ನ ಕೆಲಸಕಾರ್ಯಗಳನ್ನು ನಿಭಾಯಿಸಬೇಕು. ಪ್ರಜೆಗಳ ಕಷ್ಟಕಾರ್ಪಣ್ಯ ಕಡಿಮೆಮಾಡಿ ಅವರ ಸುಖಸಂತೋಷ ಹೆಚ್ಚಿಸುವುದೇ ದೇಶದ ಶಾಸಕರ ಹಾಗೂ ರಾಜಕಾರಣಿಗಳ ಆದ್ಯ ಕರ್ತವ್ಯ. ಪ್ರಜೆಗಳ ಸುಖಸಂತೋಷವನ್ನು ಹೆಚ್ಚಿಸಿ, ತನ್ಮೂಲಕ ಅವರ ನೈತಿಕ ಬೆಳವಣಿಗೆಯನ್ನು ರೂಪಿಸುವುದು ಸರ್ಕಾರದ ಕರ್ತವ್ಯ. ದೇಶದ ಯಾವ ಕಾಯಿದೆಯೇ ಆಗಲಿ ಅದರ ಮಹತ್ತ್ವ ಮತ್ತು ಉಪಯುಕ್ತತೆಯು ಅದು ನೀಡುವ ಒಳ್ಳೆಯ ಫಲಿತಾಂಶವನ್ನೇ ಅವಲಂಬಿಸುತ್ತದೆ. ಒಟ್ಟಿನಲ್ಲಿ ಪ್ರಜೆಗಳ ಸುಖ, ಸಂತೋಷ, ಕಲ್ಯಾಣ-ಇವೇ ದೇಶದ ಎಲ್ಲ ಕಾಯಿದೆಗಳ ಪರಮ ಗುರಿಯಾಗಿರಬೇಕು. ಅಂದರೆ ಪ್ರಜೆಗಳ ಏಳಿಗೆ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಬರಬಹುದಾದ ಅಡ್ಡ ಆತಂಕಗಳ ನ್ನೆಲ್ಲ ನಿವಾರಿಸಲು ಸಾಧ್ಯವಾದ ಕಾರ್ಯಗಳೆಲ್ಲವನ್ನೂ ದೇಶ, ಸರ್ಕಾರ, ರಾಜಕಾರಣಿಗಳು ಮತ್ತು ಶಾಸಕರು ಕೈಗೊಳ್ಳಬೇಕು.
 
ಈ ರೀತಿಯಾಗಿ ಉಪಯುಕ್ತತಾವಾದಿಗಳು ವ್ಯಕ್ತಿಯ ಸುಖ ಸಂತೋಷ ಸ್ವಾತಂತ್ರ್ಯಗಳಿಗೆ ಹೆಚ್ಚು ಪ್ರಾಮುಖ್ಯ ಕೊಟ್ಟರು; ಅನ್ಯಾಯ ಅನೀತಿ ಪ್ರಜಾಪೀಡೆಗಳಲ್ಲಿ ಪರ್ಯವಸಾನವಾಗುವ ಕ್ರೂರ ಶಾಸನಗಳಿಗೆ ಅವರು ಯಾವಾಗಲೂ ವಿರುದ್ಧ. ಯಾವ ಕಾಯಿದೆಯನ್ನೇ ಆಗಲಿ, ಯಾವ ರಾಜಕೀಯ ಸಂಸ್ಥೆಯನ್ನೇ ಆಗಲಿ ಅವು ಇರುವ ಹಾಗೆಯೇ ಒಪ್ಪಲು ಅವರು ತಯಾರಿಲ್ಲ. ಆದರೆ ಸಮಾಜದ ಕಲ್ಯಾಣಕ್ಕಾಗಿ ಅವುಗಳನ್ನು ಬದಲಾಯಿಸಲು ಅವರು ಬದ್ಧಕಂಕಣರು. ಯಾವ ರಾಜಕೀಯ ಸಂಸ್ಥೆಯನ್ನಾದರೂ ಅದು ಎಷ್ಟೇ ಶತಮಾನಗಳಿಂ ದಿರಲಿ, ಅದರ ಯೋಗ್ಯತೆಯನ್ನು ಅದರ ಉಪಯುಕ್ತತೆಯಿಂದಲ್ಲದೆ ಮತ್ತಾವುದರಿಂದಲೂ ನಿರ್ಧರಿಸಲಾಗದು, ಜನಕ್ಕೆ ಉಪಯೋಗವಿಲ್ಲದ ಸಂಸ್ಥೆ ಅಥವಾ ವ್ಯವಸ್ಥೆಯನ್ನು ಅದು ಎಷ್ಟೇ ಶತಮಾನಗಳಿಂದಿದ್ದರೂ ಬದಲಾಯಿಸಬೇಕು. ಈ ರೀತಿ ದೇಶದ ಮತ್ತು ಸರ್ಕಾರದ ಎಲ್ಲ ಕೆಲಸಕಾರ್ಯಗಳನ್ನೂ ಈವಾದ ಉಪಯುಕ್ತತೆಯ ದೃಷ್ಟಿಯಿಂದಲೇ ನೋಡುತ್ತದೆ. ಒಟ್ಟಿನಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧಿಸಿ ಜನಜೀವನವನ್ನು ಉತ್ತಮಪಡಿಸು ವುದೇ ಉಪಯುಕ್ತತಾವಾದದ ಪರಮಗುರಿ.
"https://kn.wikipedia.org/wiki/ಉಪಯುಕ್ತತಾವಾದ" ಇಂದ ಪಡೆಯಲ್ಪಟ್ಟಿದೆ