ಎಲೆತೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧೫ ನೇ ಸಾಲು:
| binomial_authority = [[Carolus Linnaeus|L.]]
}}
'''ಎಲೆತೋಟ''': ವೀಳ್ಯದೆಲೆಯ ಬಳ್ಳಿಗಳನ್ನು ಹೆಚ್ಚಾಗಿ ಹಾಗೂ ಪ್ರತ್ಯೇಕವಾಗಿ ಬೆಳೆಸುವ ಪ್ರದೇಶವನ್ನು ಎಲೆತೋಟವೆನ್ನುತ್ತಾರೆ. ಮೆಣಸಿನಂvsೆಮೆಣಸಿನಂತೆ ವೀಳ್ಯದೆಲೆಯ ಬಳ್ಳಿಯನ್ನೂ ಅಧಿಕ ಪ್ರಮಾಣದಲ್ಲಿ ತೋಟಗಳಲ್ಲಿ ಬೆಳೆಸುತ್ತಾರೆ. ಇದರ ವ್ಯವಸಾಯ ಮತ್ತು ಉಪಯೋಗ ಏಷ್ಯದಲ್ಲಿ ಪ್ರಾಚೀನಕಾಲದಿಂದಲೂ ಇದೆ. ಇದರ ಮೂಲಸ್ಥಾನ ಮಲೇಸಿಯ ಎಂದು ಹೇಳಲಾಗಿದೆ. ಭಾರತ, ಶ್ರೀಲಂಕಾ, ಮಲೇಷ್ಯಗಳಲ್ಲಿಯೂ ತಾಂಬೂಲ ಚರ್ವಣ ಬಹು ಹಳೆಯ ಸಂಪ್ರದಾಯ. ಇಲ್ಲಿನ ಸಾಮಾಜಿಕ ಹಾಗೂ ಧಾರ್ಮಿಕ ಅಚಾರಗಳಲ್ಲೂ ತಾಂಬೂಲಕ್ಕೆ ಅಗ್ರಸ್ಥಾನವಿರುವುದು ಕಂಡುಬಂದಿದೆ (ನೋಡಿ- ತಾಂಬೂಲ).
 
ವೀಳ್ಯದೆಲೆಯನ್ನು ಭಾರತ ದೇಶದ ಎಲ್ಲ ಪ್ರಾಂತ್ಯಗಳಲ್ಲೂ ಕರ್ನಾಟಕ ರಾಜ್ಯದ ಮೈದಾನ ಪ್ರದೇಶಗಳಲ್ಲಿ ವಿಶೇಷವಾಗಿಯೂ ಬೆಳೆಸುತ್ತಾರೆ. ಬೆಂಗಳೂರು, ಚಿತ್ರದುರ್ಗ ಮೈಸೂರು, ಮಂಡ್ಯ, ಹಾಸನ, ಧಾರವಾಡ ಮುಂತಾದ ಜಿಲ್ಲೆಗಳ ಎಲೆ ಹೆಸರು ಪಡೆದಿದೆ. ಇತರ ಜಿಲ್ಲೆಗಳಲ್ಲಿ ಇದರ ವ್ಯವಸಾಯ ಗಣನೀಯ ಪ್ರಮಾಣದಲ್ಲಿಲ್ಲ.
೨೨ ನೇ ಸಾಲು:
 
ಆಳವಾದ ಜೌಗಿಲ್ಲದ ಕಪ್ಪು ಮಣ್ಣು ಎಲೆಯ ತೋಟಮಾಡಲು ಉತ್ಕೃಷ್ಟವಾದ್ದು. ದೀರ್ಘ ಕಾಲದ ಬೆಳೆಯಾದ್ದರಿಂದ ಹೆಚ್ಚು ಫಲವತ್ತಾದ ಮಣ್ಣುಬೇಕು. ಸಸ್ಯಗಳಿಂದ ಕೊಳೆತು ಹೆಚ್ಚು ಫಲವತ್ತಾಗಿರುವ ಕೆಂಪು ಗೋಡು ಭೂಮಿ ಚೆನ್ನಾಗಿ ಫಸಲನ್ನು ಕೊಡುತ್ತದೆ. 6-7ರವರೆಗೆ ಪಿ.ಎಚ್.ಉಳ್ಳ ಮಣ್ಣು ಸರಿಹೊಂದುತ್ತದೆ. ಮಣ್ಣಿಗೆ ತೇವಾಂಶವನ್ನು ಚೆನ್ನಾಗಿ ತಡೆದು ಇಟ್ಟುಕೊಳ್ಳುವ ಶಕ್ತಿ ಇರಬೇಕು. ನೀರು ಹೆಚ್ಚು ಬೇಕಿದ್ದರೂ ಬುಡದಲ್ಲಿ ನಿಲ್ಲಬಾರದು, ಬಿದ್ದ ನೀರು ಬಸಿದು ಹೋಗಲು ಅನುಕೂಲವಾಗುವಂತೆ ಇಂಗು ಕಾಲುವೆಗಳನ್ನು ತೆಗೆಯಬೇಕು.
 
ಬಳ್ಳಿಯನ್ನು ಹಂಬುಗಳಿಂದ ವೃದ್ಧಿ ಮಾಡುತ್ತಾರೆ. ಸಾಮಾನ್ಯವಾಗಿ ಮುಂಗಾರು ಮಳೆಯ ಮಧ್ಯದಲ್ಲಿ ಹಂಬು ನೆಡುವುದು ವಾಡಿಕೆ. ಸು. 1ವರ್ಷ ವಯಸ್ಸಾಗಿದ್ದು ಚೆನ್ನಾಗಿ ಬಲಿತಿರುವ ಹಂಬುಗಳನ್ನು ಸು. 1ಮೀ ಉದ್ದ ಗೆಣ್ಣುಗಳು ಬರುವಂತೆ ಕತ್ತರಿಸಿಕೊಂಡು ನೆಡಬೇಕು.
 
Line ೩೨ ⟶ ೩೩:
ಮದರಾಸು ಎಲೆ ಅದರ ಹೆಸರೇ ಸೂಚಿಸುವಂತೆ ಚೆನ್ನೈ ಪ್ರಾಂತ್ಯದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಹೆಚ್ಚು ದಿನ ಇಟ್ಟರೂ ಎಲೆ ಬಾಡದು. ಜಾತಿ ಉತ್ತಮವಾದ್ದರಿಂದ ಹೆಚ್ಚಿನ ಬೆಲೆಯೂ ಬೇಡಿಕೆಯೂ ಇದೆ.
 
ವೀಳ್ಯದೆಲೆಯ ಹಂಬನ್ನು ಬೆಳೆಸುವ ಮೊದಲು ಭೂಮಿಯನ್ನು ಚೆನ್ನಾಗಿ ಹದಮಾಡಬೇಕು. ಬೇಸಗೆ ಬರುವ ಮೊದಲೆ ನೆಲವನ್ನು ಆಳವಾಗಿ ಅಗೆದು ಬಿಸಿಲಿನ ತಾಪಕ್ಕೆ ಬಿಡಬೇಕು. ಮುಂಗಾರು ಮಳೆಯ ಪ್ರಾರಂಭದಲ್ಲಿ ಹೆಂಟೆಗಳನ್ನು ಚೆನ್ನಾಗಿ ಪುಡಿ ಮಾಡಿ ಮಟ್ಟಸಮಾಡಬೇಕು. ಗರಿಕೆ, ಕೆಳೆ, ಕಲ್ಲು ಇತ್ಯಾದಿಗಳನ್ನು ತೆಗೆದುಹಾಕಿ ಶುದ್ಧಮಾಡಬೇಕು. ಭದ್ರವಾದ ಬೇಲಿಯನ್ನು ಸಿದ್ಧ ಮಾಡಬೇಕು. ನೀರಾವರಿಗೋಸ್ಕರ ಬಾವಿ ಮತ್ತು ಕಾಲುವೆಗಳನ್ನು ಮಾಡಬೇಕು. ತೋಟದ ಸುತ್ತಲೂ ಗಾಳಿತಡೆಯನ್ನು ನಿರ್ಮಿಸಬೇಕು.
 
ಮೊದಲು ಹಂಬುಗಳನ್ನು ಹಬ್ಬಿಸಲು ಅಗಸೆ, ಬೂರುಗ, ನುಗ್ಗೆ, ಪಾರಿಜಾತ ಮುಂತಾದ ಬೀಜಗಳನ್ನು ಸಾಲುಗಳಲ್ಲಿ ನೆಡುವುದರಿಮದ ಬೇಸಾಯ ಪ್ರಾರಂಭವಾಗುತ್ತದೆ. ಬೀಜಗಳನ್ನು ಬಿತ್ತನೆ ಮಾಡುವುದಕ್ಕೆ ಮುಂಚೆ ಅನುಕೂಲತೆಗೆ ತಕ್ಕ ಹಾಗೆ 1ಮೀ ಅಗಲದ ಉದ್ದನೆಯ ಪಾತಿಗಳನ್ನು ಮಾಡಬೇಕು. ಪ್ರತಿ ಎರಡು ಪಾತಿಗಳಿಗೆ ನಡುವೆ 1.3ಮೀ ಅಗಲವಿರುವ ಚೌಗು ಕಾಲುವೆಗಳನ್ನು ನಾಲ್ಕು ಮೀ ಉದ್ದಕ್ಕೂ ಮಾಡಬೇಕು. ಅನಂತರ ಅಂತರದಲ್ಲಿ ಸಾಲುಗಳಾಗಿ ನೆರಳಿನ ಮರಗಳನ್ನು ಎಬ್ಬಿಸಬೇಕು. ಅಗಸೆ, ಬೂರುಗ, ನುಗ್ಗೆ, ಪಾರಿಚಾತ, ಹಾಲಿವಾಣ ಇವು ಒಳ್ಳೆಯ ನೆರಳು ಕೊಡುವ ಮರಗಳು. ಅನೇಕ ವೇಳೆ ಬೆಳೆದ ಅಡಕೆ ಮತ್ತು ತೆಂಗುಗಳಿಗೂ ಬಳ್ಳಿಯನ್ನು ಹಬ್ಬಿಸುವುದುಂಟು. ಎರಡು ಅಥವಾ ಮೂರು ತಿಂಗಳಲ್ಲಿ ನೆರಳು ಗಿಡಗಳು 1.3-1.6ಮೀ ಎತ್ತರಕ್ಕೆ ಬೆಳೆಯುತ್ತವೆ. ಇವುಗಳ ಮಧ್ಯದಲ್ಲಿನ ಪಾತಿಯಲ್ಲಿ ಆಗಸ್ಟ್‌ ತಿಂಗಳಲ್ಲಿ ಹಂಬುಗಳ ತುಂಡುಗಳನ್ನು ನೆಡುವುದು ವಾಡಿಕೆ. ಸಾಲಿನಲ್ಲಿ ಒತ್ತಾಗಿರುವ ಸಸಿಗಳನ್ನು ಕಿತ್ತುಹಾಕಬೇಕು. ಅಂಟುಗಳು ಚಿಗುರುವವರೆಗೆ ನೀರು ಹೊತ್ತು ಹಾಕುವುದು ಅಗತ್ಯ. ಸರಿಯಾದ ನೆರಳನ್ನೂ ಒದಗಿಸಬೇಕು.
 
Line ೫೦ ⟶ ೫೨:
 
ಎಲೆಯಲ್ಲಿನ ತೈಲಾಂಶವನ್ನು ಪ್ರತ್ಯೇಕಿಸಿ ಅನೇಕ ಔಷಧಗಳಲ್ಲಿ ಬಳಸುತ್ತಾರೆ. ಎಲೆಗಳನ್ನು ಎಣ್ಣೆ, ಬೆಣ್ಣೆ ಇತ್ಯಾದಿಗಳೊಡನೆ ಹಾಕಿ ಕಾಯಿಸಿದಾಗ ಜಿಡ್ಡಿನಲ್ಲಿರುವ ಕಮಟುನಾತ ಮಾಯವಾಗಿ ಶುಭ್ರವಾಗುತ್ತದೆ. (ಡಿ.ಎಂ.)
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಲೆತೋಟ |ಎಲೆತೋಟ}}
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಎಲೆತೋಟ" ಇಂದ ಪಡೆಯಲ್ಪಟ್ಟಿದೆ