ಬಾಲಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪತ್ರಿಕಾ ಮಾಹಿತಿ
೧ ನೇ ಸಾಲು:
'''ಟಿ.ಎನ್.ಬಾಲಕೃಷ್ಣ''' - [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಅತ್ಯಂತ ಪ್ರತಿಭಾವಂಥ ನಟರಲ್ಲೊಬ್ಬರು. ಇವರು ಕನ್ನಡದ ಜನತೆಯನ್ನು ಹಲವು ದಶಕಗಳ ಕಾಲ ತಮ್ಮ ತೀಕ್ಷ್ಣ ಹಾಗು ನೈಜ ಅಭಿನಯದಿಂದ ರಂಜಿಸಿದ್ದಾರೆ. ಕನ್ನಡ ಚಿತ್ರರಂಗದ ವಲಯದಲ್ಲಿ, ಹಾಗು ಚಿತ್ರಪ್ರೇಮಿಗಳಲ್ಲಿ '''ಬಾಲಣ್ಣ''' ಎಂದೇ ಪರಿಚಿತರಾಗಿದ್ದ ಇವರಿಗೆ ಹುಟ್ಟಿನಿಂದಲೇ ಕಿವಿಯು ಸರಿಯಾಗಿ ಕೇಳಿಸುತ್ತಿರಲಿಲ್ಲ.
 
== ಹಿನ್ನೆಲೆ ==
ಬಾಲಕೃಷ್ಣರ ಜನನ [[ನವೆಂಬರ್ ೨]],[[೧೯೧೧]]ರಂದು [[ಹಾಸನ]] ಜಲ್ಲೆಯ ಅರಸೀಕೆರೆಯಲ್ಲಿ.ನಾಟಕ ಕಂಪೆನಿಯ ಗೇಟು ಕಾಯುವುದು,ಬೋರ್ಡು ಬರೆಯುವುದು,ಪೋಸ್ಟರ್ ಅಂಟಿಸುವುದು..ಹೀಗೆ ಆರಂಭವಾದ ಇವರ ವೃತ್ತಿಜೀವನ ಮುಂದೆ ರಂಗಭೂಮಿಯ ನಟನೆಗೆ ತಿರುಗಿತು.’ಕೃಷ್ಣಲೀಲಾ ’ ಇವರು ಅಭಿನಯಿಸಿದ ಮೊದಲ ನಾಟಕ.
ಚಾಮುಂಡೇಶ್ವರಿ,ಗುಬ್ಬಿ ಕಂಪೆನಿಗಳಲ್ಲಿ ಅಭಿನಯಿಸಿದ್ದ ಬಾಲಣ್ಣ ನೀಲಾಂಜನೆ,ಚಿತ್ರಾಂಗದೆ ಮುಂತಾದ ೫೦ ನಾಟಕಗಳನ್ನು ಬರೆದಿದ್ದಾರೆ.
==ಕನ್ನಡ ಚಿತ್ರರಂಗದಲ್ಲಿ ಬಾಲಕೃಷ್ಣ==
ವರ್ಷ [[:Category:ವರ್ಷ-೧೯೪೩ ಕನ್ನಡಚಿತ್ರಗಳು|೧೯೪೩ ರಲ್ಲಿ]] '''[[ರಾಧಾರಮಣ]]''' ಚಿತ್ರದ ಮೂಲಕ [[ಕನ್ನಡ ಚಿತ್ರರಂಗ]] ಪ್ರವೇಶಿಸಿದ ಇವರು ಸುಮಾರು ೫೧೦ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಹಾಸ್ಯ ನಟ,ಖಳ ನಟ,ಪೋಷಕ ನಟ ..-ಹೀಗೆ ಎಲ್ಲ ಬಗೆಯ ಪಾತ್ರಗಳಲ್ಲೂ ನಟಿಸಿ ಸೈ ಅನಿಸಿಕೊಂಡಿದ್ದಾರೆ.ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಚಿರಸ್ಮರಣೀಯ. [[ಕಣ್ತೆರೆದು ನೋಡು]],[[ಬಂಗಾರದ ಮನುಷ್ಯ]],[[ತ್ರಿಮೂರ್ತಿ]],[[ಸಂಪತ್ತಿಗೆ ಸವಾಲ್]], [[ಗಂಧದ ಗುಡಿ]], [[ಭಾಗ್ಯದ ಲಕ್ಷ್ಮಿ ಬಾರಮ್ಮ]] ಇವರು ಅಭಿನಯಿಸಿದ ಕೆಲವು ಪ್ರಮುಖ ಚಿತ್ರಗಳು.[[ಯಮಕಿಂಕರ]] ಅವರ ಅಭಿನಯದ ಕೊನೆಯ ಚಿತ್ರ.
 
==ನಿರ್ಮಾಪಕರಾಗಿ ಬಾಲಕೃಷ್ಣ==
ಬಾಲಕೃಷ್ಣ ಅವರು ಕೆಲವು ಚಿತ್ರಗಳಿಗೆ ನಿರ್ಮಾಪಕರಾಗಿದ್ದರುಸಹನಿರ್ಮಾಪಕರಾಗಿದ್ದರು.
 
* [[ರಣಧೀರ ಕಂಠೀರವ (ಚಲನಚಿತ್ರ)|ರಣಧೀರ ಕಂಠೀರವ]]
* ಕಲಿತರೂ ಹೆಣ್ಣೇ
 
[[ಪಂಚರತ್ನ]],[[ಭಕ್ತ ಮಲ್ಲಿಕಾರ್ಜುನ]] ಚಿತ್ರಗಳಿಗೆ ಹಾಡು,ಸಂಭಾಷಣೆ ಬರೆದಿದ್ದರು.
 
== ಪ್ರಶಸ್ತಿ /ಪುರಸ್ಕಾರಗಳು ==
* ೧೯೮೯ -೯೦ - ಪುಟ್ಟಣ್ಣ ಕಣಗಾಲ್ ಪ್ರಶಸ್ತಿ.
* ಬಂಗಾರದ ಮನುಷ್ಯ ಚಿತ್ರದ ಅಭಿನಯಕ್ಕೆ ಶ್ರೇಷ್ಠ ಪೋಷಕ ನಟ ಪ್ರಶಸ್ತಿ.
 
ಬಾಲಕೃಷ್ನ ಅವರು [[ಜುಲೈ ೧೯]],[[೧೯೯೫]]ರಂದು ನಿಧನರಾದರು.
 
[[Category:ಕನ್ನಡ ಚಿತ್ರರಂಗದ ನಟರು]]
"https://kn.wikipedia.org/wiki/ಬಾಲಕೃಷ್ಣ" ಇಂದ ಪಡೆಯಲ್ಪಟ್ಟಿದೆ