ದಿಕ್ಸೂಚಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
೩೪ ನೇ ಸಾಲು:
[[ಅಭ್ರಕ]]ದ ಸೂಚಿ ಬಿಲ್ಲೆಯ ಕೆಳಗೆ ಕಾಂತ ಸೂಜಿಗಳ ಕಟ್ಟುಗಳಿವೆ. ಇವನ್ನು ವಿವಿಧ ರೀತಿಯಲ್ಲಿ ಅಳವಡಿಸುವುದುಂಟು. ಯಾವುದೇ ರೀತಿಯ ರಚನೆಯಾದರೂ ಅದು ದಿಕ್ಸೂಚನ ಬಲದ ಪ್ರಭಾವಕ್ಕೆ ಅತಿನಿಕಟವಾಗಿ ಒಳಗಾಗುವಂತಿರಬೇಕು. ಬೋಗುಣಿಯ ಮಧ್ಯೆ ಲಂಬವಾಗಿ ನಿಂತಿರುವ ಜ್ಯೂಯಲ್ ಇರುವ ತಿರುಗಣೆಯ ಮೇಲೆ ಗುರುತ್ವ ಕೇಂದ್ರ ಸರಿಯಾಗಿ ಬರುವಂತೆ ಸೂಚಿಬಿಲ್ಲೆ ಇದೆ. ಬೋಗುಣಿಯಲ್ಲಿ ತುಂಬಿರುವ ನೀರು ಮತ್ತು ಆಲ್ಕೊಹಾಲ್ ಮಿಶ್ರಣದಲ್ಲಿ ಸೂಚಿಬಿಲ್ಲೆ ಭಾಗಶಃ ತೇಲುತ್ತದೆ. ಇದರಿಂದ ತಿರುಗಣೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಬೋಗುಣಿ ಜಿಂಬಾಲುಗಳ ಮೇಲೆ ನಿಂತಿದೆ. ಹಡಗು ಹೇಗೆ ಓಲಾಡಿದರೂ ಸೂಚಿಬಿಲ್ಲೆ ಮಾತ್ರ ಮಟ್ಟತಲದಲ್ಲಿರುತ್ತದೆ. ಬೋಗುಣಿಯಲ್ಲಿರುವ ದ್ರವ ಸೂಚಿಬಿಲ್ಲೆಯ ಕಂಪನಗಳನ್ನು ಶಮನಗೊಳಿಸುತ್ತದೆ.
 
ಆದ್ದರಿಂದ ದಿಕ್ಸೂಚನೆಯಲ್ಲಿ ವಿಳಂಬವಾಗುವುದಿಲ್ಲ. ಹಡಗಿನ ಚಲನದಿಕ್ಕನ್ನು ಬೋಗುಣಿಯ ಒಳಮೈಯಿಂದ ಹೊರಗೆ ಚಾಚಿರುವ ದಾಂಡಿಗ ವಾಚಕ (ಐ) ತಿಳಿಸುತ್ತದೆ. ಇದು ಹಡಗಿನ ಮಧ್ಯರೇಖೆಗೆ ಸಮಾನಾಂತರವಾಗಿದೆ. ಜಿಂಬಾಲುಗಳಿರುವ ಪೀಠದ ಹೆಸರು ಬಿನಕಲ್. ಹಡಗಿನ ಕಾಂತತೆಯಿಂದ ಉತ್ತರಮುಖಿಯ[[ಉತ್ತರಮುಖಿ]]ಯ ವಾಚನದಲ್ಲಿ ಕಾಣುವ ಲೋಪಗಳನ್ನು ನಿವಾರಿಸಲು ಉಪಯೋಗಿಸುವ ಕಾಂತದಂಡಗಳನ್ನು ಮತ್ತು ಮೆದುಕಬ್ಬಿಣದ ಗೋಳಗಳನ್ನು ಜೋಡಿಸಲು ಅನುಕೂಲವಾಗುವಂತೆ ಇದರಲ್ಲಿ ತಕ್ಕ ಜಾಗಗಳಿವೆ. ಸೂಚಿಬಿಲ್ಲೆಯ ವೃತ್ತಪಟ್ಟಿಯಲ್ಲಿ 360 ಸಮಭಾಗಗಳಿವೆ. ಹಡಗಿನ ಚಲನ ದಿಕ್ಕಿನಲ್ಲಿ ಸೂಕ್ಷ್ಮ ಬದಲಾವಣೆ ಮಾಡುವುದು ಈಗ ಸಾಧ್ಯ. ಹಿಂದೆ ಯಾನ ಕೌಶಲ ಇಷ್ಟು ಸುಧಾರಿಸಿರಲಿಲ್ಲ. ಆದ್ದರಿಂದ ಆಗ ಸೂಚಿಬಿಲ್ಲೆಯಲ್ಲಿ ನಾಲ್ಕು ದಿಕ್ಕುಗಳನ್ನು ಮಾತ್ರ ತೋರಿಸಿರುತ್ತಿದ್ದರು. ಯಾನಕೌಶಲ ಸುಧಾರಿಸದೆ ಪಟ್ಟಿಯ ದಿಕ್ಕುಗಳ ಸಂಖ್ಯೆ ಹೆಚ್ಚಿದರೆ ಅದು ಅರ್ಥಪೂರ್ಣವಾಗಿರುವುದಿಲ್ಲ. ಎಂಟು ಮತ್ತು ಮೂವತ್ತೆರಡು ದಿಕ್ಕುಗಳನ್ನು ತೋರಿಸುವುದು ಮಧ್ಯಕಾಲದಲ್ಲಿ ವಾಡಿಕೆಗೆ ಬಂತು. ಇವುಗಳಿಗೆ ಸೂಚಿ ಬಿಂದುಗಳೆಂದು (ಕಾಂಪಸ್ ಪಾಯಿಂಟ್ಸ್‌) ಹೆಸರು.
 
ಉತ್ತರಮುಖಿಯ ಬೋಗುಣಿಯ ತಳ ತೂಕವಾಗಿದೆ. ಹೀಗಿರುವುದು ಆವಶ್ಯಕವೂ ಆಗಿದೆ. ಆದರೆ ಹಡಗು [[ವೇಗೋತ್ಕರ್ಷ]]ಗೊಂಡು ಚಲಿಸಲಾರಂಭಿಸಿದರೆ ಬೋಗುಣಿ ನಿಜವಾದ ಲಂಬದಲ್ಲಿ ನಿಲ್ಲುವುದಿಲ್ಲ. ಅದು ಗುರುತ್ವ ಮತ್ತು ಹಡಗಿನ ವೇಗೋತ್ಕರ್ಷಗಳ ಫಲಿತದ ಜಾಡಿನಲ್ಲಿ ನಿಲ್ಲುತ್ತದೆ. ಆಗ ಉತ್ತರಮುಖಿಯ ವಾಚನದಲ್ಲಿ ಲೋಪ ಉಂಟಾಗುತ್ತದೆ. ಸಾಧಾರಣ ವೇಗದಲ್ಲಿ ಚಲಿಸುವ ಹಡಗುಗಳಲ್ಲಿ ವೇಗೋತ್ಕರ್ಷದಿಂದ ವಾಚನದಲ್ಲಿ ಉಂಟಾಗುವ ಲೋಪ ಅಂಥ ಅಪಾಯಕ್ಕೇನೂ ದಾರಿ ಮಾಡಿಕೊಡುವುದಿಲ್ಲ. ಆದರೆ ವೇಗದಿಂದ ಚಲಿಸುವ ಹಡಗುಗಳಲ್ಲಿ ಇದನ್ನು ಕಡೆಗಣಿಸುವಂತಿಲ್ಲ. ಇದರ ನಿವಾರಣೆಗಾಗಿ ಗೈರೊಸ್ಕೋಪಿನ ನೆರವಿನಿಂದ ಯಾವಾಗಲೂ ಮಟ್ಟಸವಾಗಿಯೇ ನಿಲ್ಲುವ ಅಟ್ಟಣೆಯ ಮೇಲೆ ಜಿಂಬಾಲುಗಳನ್ನು ಜೋಡಿಸುತ್ತಾರೆ. ಇಂಥ ವ್ಯವಸ್ಥೆಯನ್ನುಳ್ಳ ಉತ್ತರ ಮುಖಿಗಳ ಹೆಸರು ಗೈರೊಕಾಂತ ದಿಕ್ಸೂಚಿಗಳು.
"https://kn.wikipedia.org/wiki/ದಿಕ್ಸೂಚಿ" ಇಂದ ಪಡೆಯಲ್ಪಟ್ಟಿದೆ