ಕ್ರಾಂತಿವೃತ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೮ ನೇ ಸಾಲು:
ಸೂರ್ಯನ ಸುತ್ತ ಬಹುತೇಕ ಗ್ರಹಗಳ ಕಕ್ಷೆಗಳು ಭೂಮಿಯ ಕಕ್ಷೆಯ ಸಮತಳದಲ್ಲೇ ಇದ್ದು, ಹೆಚ್ಚೆಂದರೆ ಕೆಲವು ಡಿಗ್ರಿಗಳಷ್ಟು ವ್ಯತ್ಯಾಸವನ್ನು ಹೊಂದಿರುತ್ತವೆ. ಹೀಗಾಗಿ ಇವುಗಳು ಆಗಸದಲ್ಲಿ ಸದಾ ಕ್ರಾಂತಿವೃತ್ತದ ಹತ್ತಿರವೇ ಕಂಡುಬರುತ್ತವೆ. ೭° ಕಕ್ಷೀಯ [[ಓರೆ]]ಯನ್ನು ಹೊಂದಿರುವ [[ಬುಧ]] ಗ್ರಹವು ಇದಕ್ಕೆ ಅಪವಾದವಾಗಿದೆ. [[ಪ್ಲುಟೊ]] ಭೂಮಿಯ ಕ್ರಾಂತಿವೃತ್ತದಿಂದ ೧೭° ಓರೆಯಲ್ಲಿದ್ದು, ಇದನ್ನು [[ಕುಬ್ಜ ಗ್ರಹ]]ವೆಂದು ಮರು-ವಿಂಗಡಣೆ ಮಾಡುವವರೆಗೆ ಈ ಮೇಲಿನ ನಿಯಮಕ್ಕೆ ಒಂದು ಅಪವಾದದಂತಿತ್ತು. ಆದರೆ, [[ಸೌರಮಂಡಲ]]ದ ಬೇರೆ ಕಾಯಗಳು ಇನ್ನೂ ಹೆಚ್ಚಿನ [[ಕಕ್ಷೀಯ ಓರೆ]]ಗಳನ್ನು ಹೊಂದಿವೆ (ಉದಾ: [[:en:Eris (dwarf planet)|ಎರಿಸ್]] ೪೪° ಮತ್ತು [[:en:Pallas (asteroid)|ಪಲಸ್]] ೩೪°).
 
ಕ್ರಾಂತಿವೃತ್ತೀಯ ಸಮತಳ ಮತ್ತು ಇನ್ನೊಂದು ಗ್ರಹದ ಕಕ್ಷೀಯ ಸಮತಳಗಳ ಛೇದನ ರೇಖೆಯನ್ನು [[:en:Orbital node|ಪಾತೀಯ ರೇಖೆ]] ಎಂದು ಕರೆಯಲಾಗುತ್ತದೆ. ಖಗೋಳದ ಮೇಲೆ ಪಾತೀಯ ರೇಖೆಯ ಛೇದನ ಬಿಂದುಗಳು [[ಆರೋಹಣ ಸಂಪಾತ]] (ಇಲ್ಲಿ ಗ್ರಹವು ಕ್ರಾಂತಿವೃತ್ತವನ್ನು ದಕ್ಷಿಣದಿಂದ ಉತ್ತರಕ್ಕೆ ಹಾದುಹೋಗುತ್ತದೆ) ಮತ್ತು ವ್ಯಾಸದ ಎದುರು ಬದಿಯಲ್ಲಿರುವ [[ಅವರೋಹಣ ಸಂಪಾತ]]. ಒಂದು [[ಉಚ್ಚ ಮತ್ತು ನೀಚ ಗ್ರಹಗಳು|ನೀಚ ಗ್ರಹ]]ವು ತನ್ನ ಪಾತ ಬಿಂದುವಿನ ಮೂಲಕ ಹಾದುಹೋದಾಗ ಮಾತ್ರ ಸೂರ್ಯ ಸಂಕ್ರಮಣವಾಗುವ ಸಾಧ್ಯತೆಯಿದೆ.
 
ಬೇರೆ ಗ್ರಹಗಳಿಂದುಂಟಾಗುವ [[:en:perturbation (astronomy)|ಕ್ಷೋಭೆ]]ಗಳ ಕಾರಣ, ಬಹುತೇಕ ಬೇರೆಲ್ಲಾ ಕಕ್ಷೀಯ ಅಂಶಗಳಂತೆ, ಓರೆ ಮತ್ತು ಪಾತೀಯ ರೇಖೆಗಳೂ ಶತಮಾನಗಳ ಅವಧಿಯಲ್ಲಿ ನಿಧಾನವಾಗಿ ಬದಲಾಗುತ್ತವೆ.
"https://kn.wikipedia.org/wiki/ಕ್ರಾಂತಿವೃತ್ತ" ಇಂದ ಪಡೆಯಲ್ಪಟ್ಟಿದೆ