ಮೀಮಾಂಸ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಜಗತ್ತು: ಮುಂದುವರೆಸಿದೆ-
→‎ಅಪೂರ್ವ: ಮುಂದುವರೆಸಿದೆ-
೭೧ ನೇ ಸಾಲು:
:ಇವು ಧರ್ಮವೆನಿಸುತ್ತವೆ. ವೇದ ವಿರೋಧಿ ಕರ್ಮಗಳು ನಿಷಿದ್ಧ ಕರ್ಮಗಳು.
:೧. ನಿತ್ಯ ಕರ್ಮಗಳಿಗೆ ಫಲವಿಲ್ಲ. ಬಿಟ್ಟರೆ ಪ್ರತ್ಯವಾಯು (ಲೋಪ) ಸಂಭವಿಸುತ್ತದೆ. ಆದರೆ ಮಾಡಿದ್ದರಿಂದ ಪಾಪಗಳು ಕ್ಷಯಿಸುತ್ತವೆ ಎಂದು ಕುಮಾರಿಲರು ಹೇಳುತ್ತಾರೆ. ಮಾಡಿದ್ದರಿಂದ ಪುಣ್ಯವಿದೆ ಬಿಟ್ಟದ್ದರಿಂದ ಪಾಪವಿಲ್ಲ ಎಂದು ಕೆಲವರು ಹೇಳುತ್ತಾರೆ.
 
 
<br />
== ಅಪೂರ್ವ==
ಕರ್ಮಫಲವು ಹೇಗೆ ಉಂಟಗುತ್ತದೆ ? ಈವಿಚಾರ :
:ಕರ್ಮವನ್ನು ಮಾಡುವಾಗ ಫಲವಿಲ್ಲ; ಕರ್ಮವನ್ನು ಅನುಭವಿಸುವಾಗ ಕರ್ಮವಿಲ್ಲ. ಇದೊಂದು ವಾದ. ಕರ್ಮ (ಯಜ್ಞ) ಮಾಡುವಾಗ ಯಜಮಾನನಲ್ಲಿ ಒಂದು ವಿಶಿಷ್ಟವಾದ (ಅಪೂರ್ವವಾದ)ಶಕ್ತಿಯು ಹುಟ್ಟಿಕೊಂಡು, ಫಲವನ್ನು (ಯಥಾಕಾಲದಲ್ಲಿ ) ಕೊಡುತ್ತದೆ. ಇದು ಅಪೂರ್ವ.
== ಮೋಕ್ಷ : ==
ಜೈಮಿನಿ ಅವರ ಶಿಷ್ಯರಾದ , ಶಬರಸ್ವಾಮಿಗಳ ಮಾತುಗಳಲ್ಲಿ ಮೋಕ್ಷದ ಪ್ರಸ್ತಾಪವಿಲ್ಲ. ಸ್ವರ್ಗವೇ ಮೊದಲಾದ ಅಭ್ಯುದಯದ ಪ್ರಸ್ತಾಪ ಮಾತ್ರಾ ಇದೆ. ಪುನರ್ಜನ್ಮವಿಲ್ಲ ದಿರುವುದೇ ಮೋಕ್ಷವೆಂದು ಕುಮಾರಿಲರು; ಕರ್ಮಶೇಷವಿಲ್ಲದಾಗ , ಶರೀರ , ಇಂದ್ರಿಯ, ಪದಾರ್ಥಗಳಿಂದ ಬಿಡುಗಡೆಯಾದಾಗ, ಮೋಕ್ಷ . ಮೋಕ್ಷದ ಸ್ಥಿತಿಯಲ್ಲಿ ಆನಂದಾನುಭವಗಳಿಲ್ಲ. ಇಂದ್ರಿಯಗಳಿಲ್ಲದಾಗ, ಭೋಗ ಸಾಧನವಿಲ್ಲದೆ ಆನಂದವಿಲ್ಲ.
ಮೋಕ್ಷಕ್ಕೆ ಜ್ಞಾನವು ನೇರ ಸಾಧನವಲ್ಲ . ನಿತ್ಯ ನೈಮಿತ್ತಿಕ ಕರ್ಮಗಳನ್ನು ಆಚರಿಸಿ, ಜ್ಞಾನ ಮತ್ತು ಕರ್ಮದಿಂದ ಮೋಕ್ಷ. ಮೀಮಾಂಸಕರು ಜ್ಞಾನ -ಕರ್ಮ ಸಂಯೋಗವನ್ನು ಪ್ರತಿಪಾದಿಸುತ್ತಾರೆ.
== ಈಶ್ವರ :==
ಈದರ್ಶನದಲ್ಲಿ ಈಶ್ವರನಿಗೆ ಯಾವ ಸ್ಥಾನವೂ ಇಲ್ಲ. ಪ್ರಪಂಚವು ಅನಾದಿ, ಅನಂತ ; ವೇದವೂ ಅನಾದಿ , ಅನಂತ.ಅವುಗಳಿಗೆ ಅವನನ್ನು (ಈಶ್ವರನನ್ನು) Pರ್ತೃವೆಂದು ಹೇಳುವಂತಿಲ್ಲ. ಕರ್ಮಫಲವನ್ನು ವಿತರಿಸಲೂ, ಅವನ ಅವಶ್ಯಕತೆ ಇಲ್ಲ . ಅಪೂರ್ವವೆನ್ನುವ ಶಕ್ತಿಯೇ ಆ ಕೆಲಸ ಮಾಡುತ್ತದೆ. ಪ್ರಾಚೀನ ಮೀಮಾಂಸಕರು ಈಶ್ವರನ ಪ್ರಸ್ತಾಪವನ್ನು ಎತ್ತುವುದಿಲ್ಲ. ಕುಮಾರಿಲರು ,ಶ್ಲೋಕ ವಾರ್ತಿಕದಲ್ಲಿ ಈಶ್ವರನ ಅಸ್ತಿತ್ವವನ್ನು ನಿರಾಕರಿಸುತ್ತಾರೆ.
ಹಾಗಾದರೆ ವೇದಗಳಲ್ಲಿ ಹೇಲಿದ ದೇವತೆಗಳ ವಿಚಾರವೇನು ಎಂದು ಕೇಳಿದರೆ- ದೇವತೆಗಳಿಗೆ ದೇಹವಿಲ್ಲ, ಏಕೆಂದರೆ ಅನೇಕ ಕಡೆ ಯಾಗ ಮಾಡಿದಾಗ, ಅನೇಕ ಕಡೆ ಅವರು ಇರುವುದು (ಒಂದೇ ದೇಹವಿದ್ದಲ್ಲಿ ) ಸಾದ್ಯವಿಲ್ಲ. ,ಅಗ್ನಿ, ಇಂದ್ರ, ಮೊದಲಾದ ದೇವತಗಳು ಶಬ್ದಗಳೇ ವಿನಃ ರೂಪವಲ್ಲ. ಯಜ್ಞದಲ್ಲಿ ಕೊಡುವುದು, ತ್ಯಾಗ ಬುದ್ಧಿ, ದ್ರವ್ಯವನ್ನು ಯಜ್ಞದಲ್ಲಿ ಕೊಟ್ಟು ತ್ಯಾಗವನ್ನು ಮಾಡಬೇಕು. ದೇವತೆಗಳು ಅಪ್ರಧಾನ ; ಇದ್ದರೂ ಅವರಿಗೆ ಮಹತ್ವವಿಲ್ಲ.
ನಂತರದ ಮೀಮಾಂಸಕರು, ಈಶ್ವರನನ್ನು ಈ ಸಿದ್ಧಾಂತದಲಿ ಸೇರಿಸಲು ಪ್ರಯತ್ನಿಸಿದ್ದಾರೆ. ಆದರೆ ಕುಮಾರಿಲರು, ತಮ್ಮ ವಾರ್ತಿಕದ ಆರಂಭದಲ್ಲಿ ಶಿವನನ್ನು ಸ್ತುತಿಸಿರುವುದು ವಿಶೇಷ.
 
 
 
:ಮುಂದುವರೆಯುವುದು/ಮುಂದುವರೆಸಿದೆ-
"https://kn.wikipedia.org/wiki/ಮೀಮಾಂಸ_ದರ್ಶನ" ಇಂದ ಪಡೆಯಲ್ಪಟ್ಟಿದೆ