ನಾಗರಹೊಳೆ ರಾಷ್ಟ್ರೀಯ ಉದ್ಯಾನವನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಪತ್ರಿಕಾಮಾಹಿತಿ
೧ ನೇ ಸಾಲು:
ಬೆಂಗಳೂರಿನಿಂದ ೨೩೬ ಕಿಲೋಮೀಟರ್ ಹಾಗೂ ಮೈಸೂರಿನಿಂದ ೯೬ ಕಿಲೋಮೀಟರ್ ದೂರವಿರುವ 'ನಾಗರಹೊಳೆ' ಕರ್ನಾಟಕದ ಅತ್ಯಂತ ಸುಂದರ ಮತ್ತು ದಟ್ಟವಾದ ಅರಣ್ಯಗಳಲ್ಲಿ ಒಂದಾಗಿದೆ.ದಟ್ಟ ಹಸಿರು ವರ್ಣದಿಂದ ಕಂಗೊಳಿಸುವ ಬೆಟ್ಟ,ಗುಡ್ಡ,ಕಣಿವೆಗಳಿಂದ ಮತ್ತು ತೇಗ,ಗಂಧ,ಬೀಟೆ,ಸಿಲ್ವರ್ ಓಕ್ ಮುಂತಾದ ಅಮೂಲ್ಯ ವೃಕ್ಷಗಳಿಂದ ಈ ಅರಣ್ಯ ನಳನಳಿಸುತ್ತಿದೆ.ವಿನಾಶದ ಅಂಚಿನಲ್ಲಿರುವ ಅನೇಕ ಪ್ರಾಣಿ,ಪಕ್ಷಿ ಮತ್ತು ಸಸ್ಯ ಪ್ರಭೇಧಗಳನ್ನುಪ್ರಭೇದಗಳನ್ನು ಈ ಕಾಡುಗಳು ಪೋಷಿಸುತ್ತಿವೆ. ಭಾರತದ ರಾಷ್ಟ್ರೀಯ ಪ್ರಾಣಿಯಾದ 'ಹುಲಿ' ಮತ್ತು ರಾಷ್ಟ್ರಪಕ್ಷಿ 'ನವಿಲು'ಗಳು ಇಲ್ಲಿ ವಿನಾಶದಂಚಿನಲ್ಲಿವೆ.೫೧೧ ಚದರ ಕಿ.ಮೀ.ವಿಸ್ತೀರ್ಣದಲ್ಲಿ ಹರಡಿರುವ ಈ ಕಾಡು ಜಿಂಕೆ,ಬೊಗಳುವ ಜಿಂಕೆ(Barking deer)ಕರಡಿ,ಚಿರತೆ,ಆನೆ,ಕಾಡುಪಾಪ,ನೀರುನಾಯಿ,ಮೊಸಳೆ,ಹೆಬ್ಬಾವು,ಮರಕುಟುಕ,ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್,ಗಿಡುಗ,ಹದ್ದು,ಡೇಗೆ,ಪ್ಯಾಂಗೋಲಿನ್,ಹಾರುವ ಅಳಿಲುಗಳಿಗೆ ತಾಣವಾಗಿದೆ.ಜೇನು ಕುರುಬರು,ಬೆಟ್ಟ ಕುರುಬರು ಹಾಗೂ ಹಕ್ಕಿಪಿಕ್ಕಿಗಳ ನೆಲೆವೀಡು ಕೂಡಾ ಆಗಿದೆ.ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವಿಶಾಲವಾಗಿ ಹಬ್ಬಿರುವ ಈ ಕಾಡುಗಳು ಕರ್ನಾಟಕ, ಭಾರತವೇ ಅಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ವಿಶೇಷ ಜೀವಿ ವೈವಿಧ್ಯಗಳನ್ನು ಪೋಷಿಸುತ್ತಿವೆ. ನಾಗರಹೊಳೆ,ವೈನಾಡು, ಬಂಡೀಪುರ ಮತ್ತು ಮುದುಮಲೈ ಕಾಡುಗಳನ್ನು ಒಂದು ಸಂರಕ್ಷಿತ ವಲಯವನ್ನಾಗಿ ಗುರುತಿಸಲಾಗಿದೆ.