ಅಂತರ್ಜಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬ ನೇ ಸಾಲು:
 
==ಜಲ ಚಕ್ರ==
[[File:Groundwater flow.png|thumb|right|ಅಂತರ್ಜಲ ಚಲನೆಯ ಸಮಯಗಳ ಹೋಲಿಕೆ.]]
ನೀರಿನ ಪ್ರಮುಖ ಗುಣವೆಂದರೆ ಅದು ಘನ, ದ್ರವ, ಮತ್ತು ಅನಿಲ ಸ್ಥಿತಿಯಲ್ಲಿರುವುದು. ಇದರಲ್ಲಿ ಪ್ರಮುಖವಾಗಿ ಕಾಣುವುದು ದ್ರವ ರೂಪದಲ್ಲಿರುವ ನೀರು. ಭೂಮೇಲ್ಮೈ ಮೇಲೆ ಇದು ನದಿ, ಸಾಗರ, ಸರೋವರಗಳಲ್ಲೂ, ಕೆರೆಕಟ್ಟೆಗಳಲ್ಲೂ ಲಭ್ಯ. ಹಿಮದ ರೂಪದಲ್ಲಿರುವ ನೀರು ಪ್ರಮುಖವಾಗಿ ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಕಂಡುಬರುತ್ತದೆ. ಈ ಹಿಮರೂಪಿ ನೀರು ಪರಿಶುದ್ಧವಾದುದು. ಸಮುದ್ರದ ನೀರು ಬಾಷ್ಫೀಕರಣವಾಗಿ ಅನಂತರ ಸಾಂದ್ರೀಕರಣವಾಗಿ ಮೋಡಗಳು ಮೈದಳೆದು ಮಳೆರೂಪದಲ್ಲಿ ಮತ್ತೆ ಭೂಮಿಗೆ ಹಿಂತಿರುಗುವುದೇ `ಜಲಚಕ್ರ'.ಇದೊಂದು ನಿರಂತರವಾದ ಪ್ರಕ್ರಿಯೆ. ಇದರಲ್ಲಿ ಉಷ್ಣತೆ, ಗಾಳಿಯ ಗುಣ, ಒತ್ತಡ, ಗಾಳಿಯಲ್ಲಿ ತೇಲುವ ಸಣ್ಣ ಕಣಗಳು ಪ್ರಮುಖ ಪಾತ್ರ ವಹಿಸುತ್ತವೆ.ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿವರ್ಷ 370 ಮಿಲಿಯನ್ ಹೆಕ್ಟೇರು ಮೀಟರು ಮಳೆ ಬೀಳುತ್ತದೆ. ಇದರಲ್ಲಿ 120 ಮಿಲಿಯನ್ ಹೆಕ್ಟೇರು ಮೀಟರು ನದಿಯಾಗಿ ಹರಿಯುತ್ತದೆ. 120 ಮಿಲಿಯನ್ ಹೆಕ್ಟೇರು ಮೀಟರು ಬಾಷ್ಪೀಕರಣವಾಗಿ ವಾತಾವರಣ ಸೇರುತ್ತದೆ. 80 ಮಿಲಿಯನ್ ಹೆಕ್ಟೇರು ಮೀಟರು ಮಣ್ಣಿನಲ್ಲಿ ಜಿನುಗುತ್ತದೆ. ಅಂದಾಜು 26 ಮಿಲಿಯನ್ ಹೆಕ್ಟೇರು ಮೀಟರು ನೀರು ಅಂತರ್ಜಲ ಭಂಡಾರವಾಗಿ ನೆಲದಲ್ಲಿ ಸಂಗ್ರಹವಾಗುತ್ತದೆ.
 
"https://kn.wikipedia.org/wiki/ಅಂತರ್ಜಲ" ಇಂದ ಪಡೆಯಲ್ಪಟ್ಟಿದೆ