ಕಲ್ಯಾಣ್ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೧ ನೇ ಸಾಲು:
* ಇಂಥ ಕಠಿಣ ಪರಿಸ್ಥಿತಿಯಲ್ಲಿದ್ದ ಕಲ್ಯಾಣ್ ಕುಮಾರ್ ಗೆ ಮತ್ತೆ ಪಾತ್ರವಿತ್ತು ಜೀವದಾನ ಮಾಡಿದ್ದು ನಿರ್ಮಾಪಕ [[ಅಬ್ಬಯ್ಯ ನಾಯ್ಡು]] ತಮ್ಮ [[ತಾಯಿಯ ನುಡಿ]] ಚಿತ್ರದ ಮೂಲಕ ಕಲ್ಯಾಣ್‌ ಕುಮಾರ್ ಚಿತ್ರರಂಗದ ಮರುಪ್ರವೇಶಕ್ಕೆ ಕಾರಣರಾದರು. ಆದರೆ ನಾಯಕನಾಗಿ ಅಲ್ಲ, ತಮ್ಮ ವಯಸ್ಸಿಗೊಪ್ಪುವ ಚಾರಿತ್ರಿಕ ಪಾತ್ರಗಳಲ್ಲಿ. ಆದೇ ಭಾವಪೂರ್ಣ ಅಭಿನಯ ನೀಡಿದ ಕಲ್ಯಾಣ್‌ ಕುಮಾರ್ ತಮ್ಮಲ್ಲಿನ್ನೂ ಅಭಿನಯ ಸಾಮರ್ಥ್ಯ ಕುಗ್ಗಿಲ್ಲ ಎಂದು ನಿರೂಪಿಸಿದರು ಮತ್ತು ನಾಯಕನ ಪಾತ್ರಗಳಲ್ಲಿ ಅಲ್ಲದಿದ್ದರೂ ಚಾರಿತ್ರಿಕ ಪಾತ್ರಗಳಿಂದ ಮತ್ತೊಮ್ಮೆ ಜನ ಮನ ಗೆದ್ದರು. ಮತ್ತೆ ಚಿತ್ರರಂಗ ಅವರನ್ನು ಒಪ್ಪಿಕೊಂಡಿತು. ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿತು.
* [[ನಟಿ ರೇವತಿ]]ಯವರನ್ನು ಕಲ್ಯಾಣ ಕುಮಾರ್ ಮದುವೆಯಾದರು, [[ನಟಿ ಕಲ್ಪನಾ]]ಳ ಪ್ರೇಮ ಪಾಶಕ್ಕೆ ಸಿಲುಕಿ, ನಿರಾಕರಿಸಲ್ಪಟ್ಟು ನಿರಾಶೆ ಹೊಂದಿದ್ದು, ಅವರ ಖಾಸಗಿ ಜೀವನದ ಒಂದು ಘಟನೆ. 'ಮದ್ಯಪಾನ ವ್ಯಸನ'ಕ್ಕೆ ಅವರು ಬಲಿಯಾದರು.
 
ಚಿತ್ರರಂಗ ಹಾಗೂ ರಂಗಭೂಮಿಯಲ್ಲಿ ದುಡಿದು ಹಣ್ಣಾದ , ಸಂದರ್ಭ -ಸನ್ನಿವೇಶಗಳಿಂದ ಅಶಕ್ತರಾದ ಕಲಾವಿದರ ಬಗ್ಗೆ ಕಲ್ಯಾಣ್ ಕುಮಾರ್ ಅಪಾರ ಗೌರವ ಅನುಕಂಪ ಹೊಂದಿದ್ದರು . ಹೇಗಾದರೂ , ಎಂತಾದರೂ ಅವರ ಬದುಕಿನಲ್ಲಿ ನೆರವಾಗುವ ಅದಮ್ಯ ಆಸೆ. ೧೯೬೯ ರಲ್ಲಿ "ಅಶಕ್ತ ಕಲಾವಿದರ ಕಲ್ಯಾಣ ಸಮಿತಿ"ಯನ್ನು ಸಹ ಆರಂಭಿಸಿ , ಸ್ಥಾಪಕ ಅಧ್ಯಕ್ಷರಾಗಿ ಮೂರು ವರ್ಷಕಾಲ ದುಡಿದರು . ತಮ್ಮ ಅಭಿನಯದ ಚಿತ್ರಗಳ ಪ್ರದರ್ಶನವೇರ್ಪಡಿಸಿ ಕನ್ನಡ ಚಳವಳಿ ನೇತಾರ ಮ. ರಾಮಮೂರ್ತಿಯವರ ಕುಟುಂಬಕ್ಕೆ ನೆರವೊದಗಿಸುವಂತಹ ಹೃದಯ ವೈಶಾಲ್ಯ ಕಲ್ಯಾಣ್‍ರದ್ದು. ಕನ್ನಡ ಚಿತ್ರರಂಗದಲ್ಲಿ ಸ್ವಂತ ಕಾರು ಹೊಂದಿದ್ದ ಮೊದಲ ಕಲಾವಿದನೆಂಬ ಹೆಗ್ಗಳಿಕೆ ,ಮುಂದೆ ರಾಜಕೀಯ ನಾಯಕಿಯಾದ ಜಯಲಲಿತ ಅವರೊಂದಿಗೆ ಅಭಿನಯಿಸಿದ ಹೆಗ್ಗಳಿಕೆಯೂ ಇವರಿಗಿದೆ."ನಮನ"
 
==ನಿಧನ==
ನಂತರ '[[ಮನೆತನ]]' ಎಂಬ [[ದೂರದರ್ಶನ]]ದ ಧಾರಾವಾಹಿಯ ಮುಖಾಂತರ ಮನರಂಜನೆಯ ಮತ್ತೊಂದು ಮಾಧ್ಯಮಕ್ಕೆ ಕಾಲಿಟ್ಟ [[ಕಲ್ಯಾಣ್‌ ಕುಮಾರ್]] ಅತ್ಯಂತ ಜನಪ್ರಿಯರಾದರು. ಈ ಧಾರಾವಾಹಿಯ ಚಿತ್ರೀಕರಣ ಇನ್ನೂ ನಡೆಯುತ್ತಿದ್ದಾಗಲೇ, ಅವರು ತಮ್ಮ ೭೦ನೇ ವಯಸ್ಸಿನಲ್ಲಿ, 'ಇಹಲೋಕ ಯಾತ್ರೆ' ಮುಗಿಸಿದರು.
"https://kn.wikipedia.org/wiki/ಕಲ್ಯಾಣ್_ಕುಮಾರ್" ಇಂದ ಪಡೆಯಲ್ಪಟ್ಟಿದೆ