ಕರ್ವಾಲೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
'''ಕರ್ವಾಲೋ''' [[ಪೂರ್ಣಚಂದ್ರ ತೇಜಸ್ವಿ]]ಯವರ ಒಂದು ಕೃತಿ. ಇದು ಒಂದು ಹಾರುವ [[ಓತಿ]]ಯ ಬೆನ್ನು ಹತ್ತಿದ [[ವಿಜ್ಞಾನಿ]]ಯ ಕಥೆ. ಇದರಲ್ಲಿ ತೇಜಸ್ವಿಯವರೂ ಒಂದು ಪಾತ್ರ. ಈ ಕೃತಿಯನ್ನು ಓದುತ್ತಿದ್ದರೆ ಕಣ್ಣಮುಂದೆ ಒಂದು ಚಿತ್ರದಂತೆ ಬರುತ್ತದೆ. ವಿಶೇಷವಾಗಿ ಮಂದಣ್ಣ ಮತ್ತು ಅವನ ಮದುವೆಯ ಸನ್ನಿವೇಶಗಳು ಹಾಸ್ಯದ ಹೊನಲನ್ನೆ ಹರಿಸುತ್ತವೆ.
 
ಈ ಕತೆಯ ನಿರೂಪಕ, ಮಂದಣ್ಣ ಮತ್ತು ಕರ್ವಾಲೋ ಎಂಬ ಸಂಶೋಧಕ ಈ ಮೂವರು ತಮ್ಮ ಪರಿಸರದಲ್ಲಿ ಕಂಡುಕೊಂಡ ವಿಸ್ಮಯಕರ ಸಂಗತಿಗಳೇ ‘ಕರ್ವಾಲೋ’ ಕಾದಂಬರಿಯ ವಸ್ತು; ಇದರ ಸರಳ ಸುಂದರ ಹಂದರ.
 
ಅಕಸ್ಮಾತ್ತಾಗಿ ಪರಿಚಯವಾದ ಮಂದಣ್ಣ ಎಂಬ ಬಡ ಹಳ್ಳಿಗನ ಬದುಕು ಮತ್ತು ಅವನಲ್ಲಿ ಹುದುಗಿರುವ ಪ್ರತಿಭೆ ಈ ಕಾದಂಬರಿಯ ತಳಪಾಯ; ಈತನ ಗೆಳೆತನದಿಂದ ಮತ್ತು ಕರ್ವಾಲೋ ಅವರ ಮಾರ್ಗದರ್ಶನದಿಂದ ಕತೆಗಾರರು ಕಂಡುಕೊಂಡ ಅರಣ್ಯ ಮಧ್ಯದ ಜೀವರಾಶಿಯ ನಿಗೂಢ ಬದುಕು ಈ ಕಾದಂಬರಿಯ ಇನ್ನೊಂದು ಸ್ತರ.
 
ಅತ್ಯಂತ ಸ್ಪಷ್ಟ ಭಾಷೆಯಲ್ಲಿ ಮುಗ್ಧ ಕುತೂಹಲದಿಂದ ಹೇಳಲಾಗಿರುವ ಈ ಕತೆ ಸಮಾಜದ ನಿರ್ಲಕ್ಷ್ಯದಿಂದ ನಾಶವಾಗುತ್ತಿರುವ ಮಂದಣ್ಣಗಳು, ಕ್ರಮೇಣ ಇಲ್ಲವಾಗುತ್ತಿರುವ ಸೃಜನಶೀಲ ಕರ್ವಾಲೋಗಳು ಮತ್ತು ನಾಗರೀಕತೆಯ ತುಳಿತಕ್ಕೆ ಧ್ವಂಸಗೊಂಡು ಮಾಯವಾಗುತ್ತಿರುವ ಅರಣ್ಯ ಮತ್ತು ಜೀವರಾಶಿ - ಈ ಎಲ್ಲವನ್ನೂ, ಎಲ್ಲರನ್ನೂ ಕುರಿತದ್ದು.
 
{{ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳು}}
"https://kn.wikipedia.org/wiki/ಕರ್ವಾಲೋ" ಇಂದ ಪಡೆಯಲ್ಪಟ್ಟಿದೆ