ರಾ.ಶಿವರಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[Image:raashi.jpg|frame|ರಾ.ಶಿವರಾಂ]]
 
''''ರಾಶಿ'''' ಎಂದೇ ಪ್ರಸಿದ್ದರಾಗಿರುವ '''ರಾಮಸ್ವಾಮಯ್ಯ ಶಿವರಾಂ'''([[೧೯೦೪ ]]- [[೧೯೮೪]]) ರವರು ಕನ್ನಡ ಸಾಹಿತ್ಯದ ಹೆಸರಾಂತ ಹಾಸ್ಯ ಲೇಖಕರಲ್ಲಿ ಒಬ್ಬರು. ವೃತ್ತ್ತಿಯಿಂದ ವೈದ್ಯರಾದರೂ [[ಕೊರವಂಜಿ]] ಪತ್ರಿಕೆಯ ಸ್ಥಾಪಕರೂ ,ಸಂಪಾದಕರೂ ಆಗಿದ್ದರು.
 
==ವಿದ್ಯಾರ್ಥಿ ಜೀವನ==
 
ಬಡತನದಲ್ಲಿಯೇ [[೧೯೨೫]] ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮುಗಿಸಿದರು. ಬಿ.ಎ. ಮಾಡಿದ ನಂತರ ಎಂ.ಎ. ಮಾಡಿ ಮುಂದಕ್ಕೆ ಎಂ.ಬಿ.ಬಿ.ಎಸ್. ಮಾಡು ಎನ್ನುವ ಸಲಹೆ ಕನ್ನಡದ ಕಣ್ವ [[ಬಿ.ಎಂ.ಶ್ರೀಕಂಠಯ್ಯ]] ನವರು ಇತ್ತರು. ಶಿವರಾಂ ಮೆಡಿಕಲ್ ಕಾಲೇಜನ್ನೇ ಸೇರಿದರು. ವೈದ್ಯಕೀಯ ಓದುವಾಗ ತಮ್ಮ ಆರ್ಥಿಕ ಪರಿಸ್ಥಿತಿ ಅಷ್ಟಾಗಿ ಚೆನ್ನಾಗಿರಲಿಲ್ಲ. ಏತನ್ ಮದ್ಯೆ ತಂದೆಯನ್ನು ಕಳೆದುಕೊಂಡರು. ದೊಡ್ಡ ಪರಿವಾರದ ಜವಾಬ್ದಾರಿ ಹಿರಿ ಮಗನಾದ ಶಿವರಾಂ ಹೆಗಲಿಗೆ ಏರಿತ್ತು. ನಾಗಮ್ಮ ಎಂಬುವರೊದನೆ ವಿವಾಹವೂ ಜರುಗಿತ್ತು.
 
ಹಣದ ಬಿಕ್ಕಟ್ಟಿನಿಂದಾಗಿ ವೈದ್ಯಕೀಯ ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿ ಸಿನೆಮಾ ರಂಗಕ್ಕೆ ಸೇರಲು ಪ್ರಯತ್ನಿಸಿದರು. ವ್ಯಾಯಾಮ ಪಟು, ಸಾಹಿತಿ [[ಕೆ.ವಿ.ಅಯ್ಯರ್]] ರವರಿಂದ ಫೋಟೊ ತೆಗೆಸಿಕೊಂಡು 'ಮೃಚ್ಚಕಟಿಕಾ' ಎನ್ನುವ ಸಿನೆಮಾ ತೆಗೆಯುತ್ತಿದ್ದ ಭವನಾನಿಯವರಿಗೆ ಕೊಟ್ಟರು. ಒಂದು ಸಣ್ಣ ಪಾರ್ಟೂ ಸಿಕ್ಕಿತ್ತು. ಆದರೆ [[ಟಿ.ಪಿ.ಕೈಲಾಸಂ]] ರವರು ಶಿವರಾಂ ರವರಿಗೆಶಿವರಾಂರವರಿಗೆ ಬುದ್ದಿ ಹೇಳಿ ಮತ್ತೇ ವೈದ್ಯಕೀಯ ಶಿಕ್ಷಣ ಮುಂದುವರೆಸುವಂತೆ ಪ್ರೇರೇಪಿಸಿದರು. ಇದರ ಫಲವಾಗಿ ೧೯೩೦ ರಲ್ಲಿ ಶಿವರಾಂ ಡಾ.ಶಿವರಾಂ ಆದರು.
 
==ಕೊರವಂಜಿ==
 
[[ಪಂಚ್ ]] ಮೊಡಿಗೆ ಒಳಗಾಗಿ ಕೊರವಂಜಿ ಮಾಸಪತ್ರಿಕೆ ಶುರುವಾಗಿದ್ದು [[೧೯೪೨]] ರಲ್ಲಿ. ಆಗ ಅದಕ್ಕೆ ಬರೆಯುತ್ತಿದ್ದವರು ಮುಖ್ಯವಾಗಿ ರಾಶಿಯವರಲ್ಲದೇ [[ನಾ ಕಸ್ತೂರಿ]], [[ಜಿ.ಪಿ.ರಾಜರತ್ನಂ]], [[ಎಸ್.ಎನ್.ಶಿವಸ್ವಾಮಿ]] ಮುಂತಾದವರು. ಬರಹಗಾರರು ಕಡಿಮೆ ಇದ್ದದ್ದರಿಂದ ಒಬ್ಬರೇ ಲೇಖಕರು ಬೇರೆ ಬೇರೆ ಹೆಸರುಗಳಿಂದ ಬರೆಯುತ್ತಿದ್ದರು. ಉದಾಹರಣೆಗೆ ನಾಕ. ರೇವಣ್ಣ, ಪಾಟಾಳಿ, ಕರೀಂ ಖಾನ್ ಎಲ್ಲಾ ನಾ.ಕಸ್ತೂರಿಯೇ. ರಾಶಿಯವರು ಪಾಪಿ, ಬಚ್ಚಾ ಎನ್ನುವ ಹೆಸರುಗಳಿಂದಾಗಿ ಬರೆಯುತ್ತಿದ್ದರು. 'ಕುಹಕಿಡಿಗಳು' ಮತ್ತು 'ಉರಿಗಾಳು' ಎಂಬ ಅಂಕಣದಲ್ಲಿ ರಾಶಿಯವರು ವರ್ತಮಾನದ ವಿಷಯಗಳನ್ನು ಕುರಿತು ಚುಟುಕಾಗಿ ವಿಡಂಬನೆ ಮಾಡುತ್ತಿದ್ದರು. [[ತುಷಾರ]] ಮಾಸಪತ್ರಿಕೆಯಲ್ಲಿ ರಾಶಿಯವರು ಬರೆಯುತ್ತಿದ್ದ [[ತಿಂಗಳ ತಿಳಿಗಾಳು]] ಎಂಬ ಅಂಕಣ ಜನಪ್ರಿಯವಾಗಿತ್ತು.
 
ಕೊರವಂಜಿಯ ಪ್ರಾರಂಭದ ವರ್ಷಗಳಲ್ಲಿ ಆಗಿನ್ನೂ ವಿದ್ಯಾರ್ಥಿಯಾಗಿದ್ದ [[ಆರ್.ಕೆ.ಲಕ್ಷ್ಮಣ್]] ರ ವ್ಯಂಗ್ಯ ಚಿತ್ರಗಳು ಪ್ರಕಟವೂ ಆದವು. ಕಾಲಕ್ರಮೇಣ [[ಟಿ.ಸುನಂದಮ್ಮ]] , [[ದಾಶರಥಿ ದೀಕ್ಷಿತ್]], [[ಅರಾಸೆ]], [[ಕೇಫ]] ಅವರುಗಳ ಲೇಖನಗಳು ಬರತೊಡಗಿದವು.
೧೦೦ ನೇ ಸಾಲು:
* ೧೯೭೬ ರಲ್ಲಿ ಕೇಂದ್ರ ಸಾಹಿತ್ಯ ಅಕೆಡಮಿ ಪ್ರಶಸ್ತಿ
<br />
 
{{ಸಾಹಿತಿಗಳು}}
[[category : ಸಾಹಿತಿಗಳು]]
{{[[Category:ಹಾಸ್ಯ ಸಾಹಿತಿಗಳು}}]]
[[category : ಕನ್ನಡ ಸಾಹಿತ್ಯ]]
"https://kn.wikipedia.org/wiki/ರಾ.ಶಿವರಾಂ" ಇಂದ ಪಡೆಯಲ್ಪಟ್ಟಿದೆ