ಸಿ. ರಾಜಗೋಪಾಲಚಾರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
ರಾಜಾಜಿ ತನ್ನ ಸ್ವಂತ ಲೇಖನಗಳೊಂದಿಗೇ , ಅನೇಕ ಮುಖ್ಯ ಭಾರತೀಯ ಹಾಗೂ ಹಿಂದೂ ಧಾರ್ಮಿಕ ಕೃತಿಗಳ ಆಂಗ್ಲ ಭಾಷೆಯ ಭಾಷಾಂತರವನ್ನೂ ಮಾಡಿದ್ದಾರೆ. ರಾಮಾಯಣ, ಮಹಾಭಾರತ, ಭಗವದ್ಗೀತೆ, ಉಪನಿಷತ್ತುಗಳು ಹಾಗೂ ಶಂಕರಾಚಾರ್ಯರ ಭಜ ಗೋವಿಂದಂ ಇವುಗಳ ಭಾಷಾಂತರಗಳು ಇಂದಿಗೂ ಬಳಕೆಯಲ್ಲಿವೆ. ಅವರು ರಾಮಾಯಣವನ್ನು ತಮಿಳಿಗೂ ತರ್ಜುಮೆ ಮಾಡಿದರು.
ಕರ್ನಾಟಕ ಸಂಗೀತದ ದೊಡ್ಡ ಪ್ರತಿಭೆ, ಎಂ.ಎಸ್. ಸುಬ್ಬುಲಕ್ಷ್ಮಿ ರಾಜಾಜಿ ರವರ ಕೆಲವು ಕವಿತೆಗಳನ್ನು ಸಂಗೀತಕ್ಕೆ ಅಳವಡಿಸಿ ಅನೇಕ ಮುಖ್ಯ ಕಾರ್ಯಕ್ರಮಗಳಲ್ಲಿ, ಅವುಗಳಲ್ಲಿ ಒಂದು ಸಂಯುಕ್ತ ರಾಷ್ಡ್ರ ಸಂಘದಲ್ಲಿ , ಹಾಡಿದ್ದಾರೆ. ಕುರೈ ಒನ್ರುಮ್ ಇಲ್ಲೈ (ಭಗವಂತಾ, ನನಗಿನ್ನೇನೂ ಅಪೇಕ್ಷೆ ಉಳಿದಿಲ್ಲ....) ಎಂಬ ಅರೆ-ಶಾಸ್ತ್ರೀಯ ಮಟ್ಟಿನಲ್ಲಿ ರಾಜಾಜಿ ಬರೆದ ಹಾಡು ಬಹಳ ಜನಪ್ರಿಯವಾಗಿದೆ. ಇದರ ಒಂದು ಹೃದಯಸ್ಪರ್ಶಿ ಆವೃತ್ತಿಯನ್ನು ಎಂ.ಎಸ್. ಸುಬ್ಬುಲಕ್ಷ್ಮಿ ಹಾಡಿದ್ದಾರೆ. ರಾಜಾಜಿ ಬರೆದ "Here under this Uniting Roof" ಸ್ತುತಿಯನ್ನು 1966ರಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಸಂಯುಕ್ತ ರಾಷ್ಡ್ರ ಸಂಘದಲ್ಲಿ ಹಾಡಿದ್ದರು.
ರಾಜಾಜಿಯವರನ್ನು ಬಹಳಷ್ಟು ಜನ ಧಾರ್ಮಿಕ ಹಾಗೂ ಆಧ್ಯಾತ್ಮಿಕ ರಂಗಗಳಲ್ಲಿ ಆಳವಾದ, ಸ್ವಂತಿಕೆಯ ಚಿಂತಕರೆಂದು ಪರಿಗಣಿಸುತ್ತಾರೆ. ರಾಜಾಜಿಯವರ ವಿದ್ಯಾರ್ಥಿ ಜೀವನದಲ್ಲಿ ನಡೆಯಿತೆನ್ನಲಾದ ಒಂದು ಘಟನೆ ಜನಪ್ರಿಯವಾಗಿದೆ. ಒಮ್ಮೆ ಸ್ವಾಮಿ ವಿವೇಕಾನಂದರು ಅವರ ವಿದ್ಯಾರ್ಥಿ ನಿಲಯಕ್ಕೆ ಬಂದಿದ್ದರಂತೆ. ಅಲ್ಲಿ ಗೋಡೆಯ ಮೇಲಿನ ವಿಷ್ಣುವಿನ ಚಿತ್ರ ನೋಡಿ , ವಿದ್ಯಾರ್ಥಿಗಳಿಗೆ ವಿಷ್ಣುವಿನ ಎಲ್ಲಾ ಚಿತ್ರಗಳಲ್ಲೂ ಮೈ ಬಣ್ಣ ನೀಲಿ ಯಾಕಿರುತ್ತದೆ ಎಂದು ಕೇಳಿದರಂತೆ. ವಿಷ್ಣು ನೀಲಿ ಆಕಾಶದಂತೆ, ನೀಲ ಸಮುದ್ರದಂತೆ ಅನಂತ. ಆದ್ದರಿಂದಲೇ ಅವನ ಮೈ ಬಣ್ಣ ನೀಲಿ ಎಂದು ಋಅಜಾಜಿ ಉತ್ತರ ಕೊಡ್ಡರಂತೆ. ವಿವೇಕಾನಂದರು ಈ ಉತ್ತರ ಕೇಳಿ ಬಹಳ ಸಂತೋಷ ಪಟ್ಟರಂತೆ.
ಸುಮಾರು ಎಂಟು ದಶಕಗಳನ್ನು ಸಾರ್ವಜನಿಕ ಜೀವನದಲ್ಲಿ ಸವೆಸಿದ ರಾಜಾಜಿಯವರ ಕೊಡುಗೆಯನ್ನು ಅರಿಯಲು ಗಾಂಧೀಜಿ ಅವರನ್ನು “ನನ್ನ ಅಂತಃ ಪ್ರಜ್ಞೆಯ ರಕ್ಷಕ " ಎಂದು ಬಣ್ಣಿಸಿದ ರೀತಿ ಸಾಕು.
 
"https://kn.wikipedia.org/wiki/ಸಿ._ರಾಜಗೋಪಾಲಚಾರಿ" ಇಂದ ಪಡೆಯಲ್ಪಟ್ಟಿದೆ