ಸಿ. ರಾಜಗೋಪಾಲಚಾರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬ ನೇ ಸಾಲು:
 
== ಸ್ವತಂತ್ರ ಪಕ್ಷ ಸ್ಥಾಪನೆ==
 
ಕಾಂಗ್ರೆಸ್ ಸಕ್ರಿಯ ರಾಜಕೀಯದಿಂದ ನಿವೃತ್ತರಾದ ಮೇಲೆ, ರಾಜಾಜಿ, ನೆಹರೂ ಹಾಗೂ ಕಾಂಗ್ರೆಸ್ಸಿನ ಕಟು ಟೀಕಾಕಾರರಾದರು. 1950ರ ದಶಕದಲ್ಲಿ ಸ್ವತಂತ್ರ ಪಕ್ಷ ಸ್ಥಾಪಕರಲ್ಲಿ ಒಬ್ಬರಾದ ಅವರು, ನೆಹರೂರ ಸಮಾಜವಾದೀ ಧೋರಣೆಯು ಜನಪ್ರಯವಾಗಿದ್ದರೂ, ಲೈಸೆನ್ಸ್ ಪರ್ಮಿಟ್ ರಾಜ್ಯವನ್ನೂ ಹಾಗೂ ಅದರಿಂದ ಉಂಟಾಗುವ ಭ್ರಷ್ಟಾಚಾರ ಹಾಗೂ ದೇಶದ ಪ್ರಗತಿಯ ಧಕ್ಕೆಯನ್ನೂ ವಿರೋಧಿಸಿದರು. ತಮ್ಮ ಪತ್ರಿಕೆ ಸ್ವರಾಜ್ಯದಲ್ಲಿ ಅವರು ಹೀಗೆ ಬರೆಯುತ್ತಾರೆ:
" ಕೈಗಾರಿಕಾ ರಂಗದಲ್ಲಿ ಪೈಪೋಟಿಯನ್ನು ಪ್ರೋತ್ಸಾಹಿಸುವುದೂ, ಹೆಚ್ಚಿನ ಉತ್ಪತ್ತಿಗೆ ಕುಮ್ಮಕ್ಕು ಕೊಡುವುದೂ ಸರ್ಕಾರಿ ಹಾಗೂ ಖಾಸಗೀ ಹಿತಾಸಕ್ತಿ ಗಳೆರಡಕ್ಕೂ ಒಳ್ಳೆಯದು. ಸರ್ಕಾರಿ ಅಧಿಕಾರಿಗಳಿಗೂ, ಮಂತ್ರಿಗಳಿಗೂ ಪರವಾನಗಿಗಳಿಗಾಗಿ ಡೊಗ್ಗು ಸಲಾಮು ಹೊಡೆಯುವ ಅಗತ್ಯವಿರದ, ಪ್ರತಿಭೆ ಹಾಗೂ ಪರಿಶ್ರಮದಿಂದ ಕೆಲಸ ಮಾಡುವ, ಹಾಗೂ ಈ ಪ್ರಯತ್ನಗಳ ಫಲಾಫಲಗಳ ನಿಷ್ಕರ್ಷೆ ಭಾರತ ಹಾಗೂ ಭಾರತದ ಹೊರಗಿನ ಮುಕ್ತ ಮಾರುಕಟ್ಟೆಯಲ್ಲಿ ಆಗುವಂಥಾ ವಾತಾವರಣದ ಭಾರತ ನನಗೆ ಬೇಕಾಗಿದೆ.... ಸರಕಾರಿ ಕಾರುಭಾರಿನ ಅದಕ್ಷತೆಗಳು ಹೋಗಿ ಖಾಸಗೀ ಒಡೆತನದ ಪೈಪೋಟಿಯ ಆರ್ಥಿಕ ಪಧ್ಧತಿ ನನಗೆ ಬೇಕು. ... ಭ್ರಷ್ಟ ಲೈಸೆನ್ಸ್ ಪರ್ಮಿಟ್ ರಾಜ್ಯ ನಿರ್ಮೂಲವಾಗಬೇಕು.... ಸರಕಾರೀ ಕಾನೂನುಗಳು, ನೀತಿಗಳನ್ನು ಜಾರಿಗೆ ತರುವ ಹೊಣೆಹೊತ್ತ ಅಧಿಕಾರಿಗಳು ಆಡಳಿತ ಪಕ್ಷದ ನಾಯಕರ ಒತ್ತಡಗಳಿಂದ ಹೊರಬಂದು, ತಮ್ಮ ಮೊದಲಿನ ನಿರ್ಭೀತ ನಡವಳಿಕೆಗಳಿಗೆ ಮರಳಬೇಕಾಗಿದೆ.... ಎಲ್ಲಾ ನಾಗರೀಕರಿಗೂ ಸಮಾನ ಅವಕಾಶಗಳು ಸಿಗಬೇಕಾಗಿದೆ. ಲೈಸೆನ್ಸ್ ಪರ್ಮಿಟ್ ರಾಜ್ಯ ಖಾಸಗೀ ಏಕಸ್ವಾಮ್ಯಗಳನ್ನು ಸೃಷ್ಟಿಸಕೂಡದು.... ದೊಡ್ಡ ಕೈಗಾರಿಕೆಗಳ ಹಣಸಂಪತ್ತು ರಾಜಕೀಯಕ್ಕೆ ಪ್ರವೇಶ ಮಾಡಕೂಡದು.... ಭಾರತದಲ್ಲಿ ಜನರ ನಡವಳಿಕೆಗಳು ಧರ್ಮದಿಂದ ಪ್ರಭಾವಿತವಾಗಬೇಕೇ ವಿನಹ ದುರಾಸೆಯಿಂದ ಅಲ್ಲ”
 
ರಾಜಾಜಿ ಈ ಮಾತನ್ನು ಹೇಳಿದ ಅನೇಕ ದಶಕಗಳ ನಂತರ, 1950ರ ದಶಕದಲ್ಲಿ ಹಾಕಲಾಗಿದ್ದ ಆಡಳಿತಾತ್ಮಕ ಕಟ್ಟುಪಾಡುಗಳನ್ನು ಹಂತಹಂತವಾಗಿ ಸಡಿಲಗೊಳಿಸಲಾಗುತ್ತಿದೆ. ಭಾರತದ ಆರ್ಥಿಕ ಪರಿಸ್ಥಿತಿಯು ದಾಪುಗಾಲಿನಿಂದ ಸುಧಾರಣೆಯಾಗುತ್ತಿದ್ದು, ಬೆಳವಣಿಗೆಯ ಗತಿ ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಗತಿಗಳಲ್ಲೊಂದಾಗಿದೆ. ಈ ಎಲ್ಲ ವಿದ್ಯಮಾನಗಳ ದೆಸೆಯಿಂದ , ಅನೇಕರು ರಾಜಾಜಿ ಮತ್ತು ಸ್ವತಂತ್ರ ಪಕ್ಷದ ಆಗಿನ ನಿಲುವುಗಳನ್ನು ಪುನಃ ಪರಿಶೀಲನೆ ಮಾಡುತ್ತಿದ್ದಾರೆ.
 
== ಧರ್ಮ, ಸಾಹಿತ್ಯ ಮತ್ತು ಕಾವ್ಯ==
"https://kn.wikipedia.org/wiki/ಸಿ._ರಾಜಗೋಪಾಲಚಾರಿ" ಇಂದ ಪಡೆಯಲ್ಪಟ್ಟಿದೆ