ಆಂತರಿಕ್ಷನೌಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|[[ಆಟ್ಲಾಂಟಿಸ್ ಗಗನನೌಕೆಯು ರಷಿಯಾದ ಮಿರ್ [[ಅಂತರಿಕ್ಷನಿಲ...
( ಯಾವುದೇ ವ್ಯತ್ಯಾಸವಿಲ್ಲ )

೧೩:೨೪, ೨೭ ಸೆಪ್ಟೆಂಬರ್ ೨೦೦೯ ನಂತೆ ಪರಿಷ್ಕರಣೆ

ಆಂತರಿಕ್ಷನೌಕೆ ಅಥವಾ ಗಗನನೌಕೆಯು ಆಂತರಿಕ್ಷಯಾನ ಮಾಡಲು ವಿನ್ಯಾಸಗೊಳಿಸಿ, ತಯಾರಿಸಿದ ಯಂತ್ರ. ಇದರಲ್ಲಿ ಹಲವು ವಿಧಗಳಿವೆ. ಉಪಕಕ್ಷೀಯ ಆಂತರಿಕ್ಷಯಾನದಲ್ಲಿ ಗಗನನೌಕೆಯು ಅಂತರಿಕ್ಷವನ್ನು ಪ್ರವೇಶಿಸಿ ಮರಳಿ ಭೂಮಿಗೆ ಬರುತ್ತದೆ.ಕಕ್ಷೀಯ ಅಂತರಿಕ್ಷಯಾನದಲ್ಲಿ ಗಗನನೌಕೆಯು ಭೂಮಿಯ ಸುತ್ತ ಒಂದು ಸ್ಥಿರ ಕಕ್ಷೆಯಲ್ಲಿ ಸುತ್ತುತ್ತದೆ.ಮಾನವಸಹಿತ ಅಂತರಿಕ್ಷಯಾನದಲ್ಲಿ ಗಗನನೌಕೆಯು ತನ್ನೊಳಗೆ ಜನರನ್ನು ನೌಕೆಯ ಸಿಬ್ಬಂದಿ ಹಾಗು ಪ್ರಯಾಣಿಕರ ರೂಪದಲ್ಲಿ ಹೊತ್ತೊಯ್ಯುತ್ತದೆ.ರೋಬಾಟಿಕ್ ಅಂತರಿಕ್ಷಯಾನದಲ್ಲಿ ನೌಕೆಯ ಎಲ್ಲಾ ಕಾರ್ಯಾಚರಣೆಯು ಸ್ವಯಂಚಾಲಿತವಾಗಿರುತ್ತವೆ ಅಥವಾ ಭೂಮಿಯಲ್ಲಿರುವ ನಿಯಂತ್ರಣ ಕೊಠಡಿ(ಕಂಟ್ರೋಲ್ ರೂಂ)ಯಿಂದ ನಿಯಂತ್ರಿಸಲ್ಪಡುತ್ತದೆ.ಭೂಮಿಯನ್ನು ಬಿಟ್ಟು ಬೇರೆ ಗ್ರಹಗಳ ಅಧ್ಯಯನಕ್ಕೆ ತೆರಳುವ ರೋಬಾಟಿಕ್ ನೌಕೆಗಳಿಗೆ ಗ್ರಹಾಂತರ ಅಂತರಿಕ್ಷನೌಕೆ ಅಥವಾ ಸ್ಪೇಸ್ ಪ್ರೋಬ್ ಎನ್ನುತ್ತಾರೆ. ಭೂಮಿಯ ಸುತ್ತ ಸ್ಥಿರ ಕಕ್ಷೆಯಲ್ಲಿ ಸುತ್ತುವ ನೌಕೆಗಳಿಗೆ ಕೃತಕ ಉಪಗ್ರಹಗಳೆನ್ನುತ್ತಾರೆ. ನಮ್ಮ ಸೌರವ್ಯೂಹವನ್ನು ದಾಟಿ ನಕ್ಷತ್ರಾಂತರ ವಲಯಗಳಿಗೆ ತೆರಳುವ ನೌಕೆಗಳಿಗೆ ಸ್ಟಾರ್ ಶಿಪ್ಎನ್ನುತ್ತಾರೆ (ಉ.ದಾ ಪಯೋನಿಯರ್- ೧೦, ಪಯೋನಿಯರ್- ೧೧, ವೊಯೇಜರ್ ಮತ್ತು ನ್ಯೂ ಹೊರೈಝನ್ ನೌಕೆಗಳು).

ಚಿತ್ರ:Atlantis Docked to Mir.jpg
ಆಟ್ಲಾಂಟಿಸ್ ಗಗನನೌಕೆಯು ರಷಿಯಾದ ಮಿರ್ ಅಂತರಿಕ್ಷನಿಲ್ದಾಣಕ್ಕೆ ಆತುಕೊಂಡು ನಿಂತಿರುವುದರ ನೋಟ, ಈ ಚಿತ್ರವನ್ನು ಮಿರ್ ನ ಸಿಬ್ಬಂದಿ ಜುಲೈ ೪ ೧೯೯೫ ರಲ್ಲಿ ತೆಗೆದಿದ್ದಾರೆ
ಫೀನಿಕ್ಸ್ ಅಂತರಿಕ್ಷನೌಕೆಯು ಮಂಗಳಗ್ರಹದ ಮೇಲೆ ಇಳಿದಾಗಿನ ಸನ್ನಿವೇಶ,ಕಲಾವಿದನ ಕಲ್ಪನೆಯಲ್ಲಿ.