ಕೃತಕ ಉಪಗ್ರಹ: ಇದು ಒಂದು ಅಂತರಿಕ್ಷ ಕಾಯದ ಸುತ್ತ ಪ್ರದಕ್ಷಣೆ ಹಾಕುವಂತಹ ಮಾನವ ನಿರ್ಮಿತ ವಸ್ತು.

ಭಾರತದ ಇನ್ಸಾಟ್-೪ಎ ಉಪಗ್ರಹ

ಬಾಹ್ಯಾಕಾಶ ಹಾರಾಟದ ಸಂದರ್ಭದಲ್ಲಿ, ಒಂದು ಉಪಗ್ರಹವು ಉದ್ದೇಶಪೂರ್ವಕವಾಗಿ ಕಕ್ಷೆಗೆ ಇಡುವ ಕೃತಕ ವಸ್ತುವಾಗಿದೆ. ಅಂತಹ ವಸ್ತುಗಳು ಕೆಲವೊಮ್ಮೆ ಕೃತಕ ಉಪಗ್ರಹಗಳನ್ನು ಭೂಮಿಯ ಚಂದ್ರನಂತಹ ನೈಸರ್ಗಿಕ ಉಪಗ್ರಹಗಳಿಂದ ಪ್ರತ್ಯೇಕಿಸಲು ಕರೆಯಲಾಗುತ್ತದೆ.1957 ರಲ್ಲಿ ಸೋವಿಯತ್ ಒಕ್ಕೂಟವು ವಿಶ್ವದ ಮೊದಲ ಕೃತಕ ಉಪಗ್ರಹವಾದ ಸ್ಪುಟ್ನಿಕ್ 1 ಅನ್ನು ಪ್ರಾರಂಭಿಸಿತು. [] ೨೦೨೩ ನವೆಂಬರ್ ವರೆಗೆ ೧೦೫ ವಿವಿಧ ದೇಶಗಳ ೭೮೩೨ ಕೃತಕ ಉಪಗ್ರಹಗಳು ಭೂಮಿಯ ಸುತ್ತ ತಿರುಗುತ್ತಿವೆ.[]

ಬಗೆಗಳು

ಬದಲಾಯಿಸಿ

ಕೃತಕ ಉಪಗ್ರಹಗಳನ್ನು ಭೂಮಿಯಿಂದ ಇರುವ ಅಂತರದಿಂದ ವಿಂಗಡನೆ ಮಾಡುವರು.

  1. ಕೆಳ ಭೂಪಥ (Low Earth Orbit - LEO) ಅಥವಾ ಮಧ್ಯಮ-ಭೂ ಕಕ್ಷೆ: ಸಾಗರದ ಮಟ್ಟದಿಂದ ೧.೬ ಲಕ್ಷ ಮೀಟರ್ (೧೬೦ ಕಿಮೀ)ರಿಂದ ೨೦ ಲಕ್ಷ ಮೀಟರ್ (೨೦೦೦ ಕಿಮೀ) ಎತ್ತರದಲ್ಲಿ ಭೂಮಿಯನ್ನು ಸುತ್ತುವ ಕೃತಕ ಉಪಗ್ರಹಗಳನ್ನು ಕೆಳ ಭೂಪಥ ಕೃತಕ ಉಪಗ್ರಹಗಳು ಎಂದು ಕರೆವರು. ೬೫೦೦ಕ್ಕಿಂತಳು ಹೆಚ್ಚು ಕೃತಕ ಉಪಗ್ರಹಗಳು ಈ ಎತ್ತರದಲ್ಲಿಯೇ ಇವೆ. ಈ ಉಪಗ್ರಹಗಳು ಇಡೀ ಭೂಮಿಯನ್ನು ೧.೫ ಘಂಟೆಯಿಂದ ೨ ಘಂಟೆಯೊಳಗೆ ಸುತ್ತು ಹಾಕುತ್ತವೆ. ಇಂತಹ ಕೃತಕ ಉಪಗ್ರಹಗಳು ಈ ಕೆಳಕಂಡ ಕೆಲಸಗಳಿಗೆ ಸೂಕ್ತ.
    1. ದೂರ ಸಂವೇದನೆ (Remote Sensing)
    2. ಹವಾಮಾನ ಅಧ್ಯಯನ
    3. ದೂರ ಸಂಪರ್ಕ
    4. ಅಂತರಜಾಲ ಸೇವೆಗಳು
    5. ಭೂಮಿಯ ವೀಕ್ಷಣೆ
  2. ಮಧ್ಯಮ ಭೂಪಥ (Medium Earth Orbit - MEO): ಸಾಗರದ ಮಟ್ಟದಿಂದ ೨೦೦೦ ಕಿಮೀ ನಿಂದ ೩೫೭೮೬ ಕಿಮೀ ಎತ್ತರದಲ್ಲಿ ಭೂಮಿಯನ್ನು ಸುತ್ತುವ ಕೃತಕ ಉಪಗ್ರಹಗಳನ್ನು ಮಧ್ಯಮ ಭೂಪಥ ಉಪಗ್ರಹಗಳು ಎಂದು ಕರೆವರು. ಇವುಗಳ ಸಂಖ್ಯೆ ಅಂದಾಜು ೨೦೦. ಇವುಗಳ ಉಪಯೋಗ, ಬಹು ದೊಡ್ಡ ಪ್ರದೇಶಗಳನ್ನು ನಿಖರವಾಗಿ ವೀಕ್ಷಿಸುವುದು.
  3. ಭೂ ಸ್ಥಿರಪಥ ಅಥವಾ ಭೂಸ್ಥಾಯೀ ಕಕ್ಷೆ: (Geostationary Orbit) ಸಾಗರದ ಮಟ್ಟದಿಂದ ೩೫೭೮೬ ಕಿಮೀ ಎತ್ತರದಲ್ಲಿ ಭೂಮಿಯನ್ನು ಸುತ್ತುವ ಕೃತಕ ಉಪಗ್ರಹಗಳನ್ನು ಭೂ ಸ್ಥಿರಪಥ ಉಪಗ್ರಹಗಳು ಎಂದು ಕರೆವರು. ಇವುಗಳು, ಭೂ ಸಮಭಾಜಕದ ನೇರದಲ್ಲಿಯೇ ವೃತ್ತಾಕಾರದಲ್ಲಿ, ಭೂಮಿಯ ಸಮವೇಗ ಮತ್ತು ಸಮದಿಕ್ಕಿನಲ್ಲಿಯೇ ಚಲಿಸುತ್ತವೆ. ಹೀಗಾಗಿ, ಇವು ಸ್ಥಿರವಾಗಿ ಒಂದೇ ಜಾಗದಲ್ಲಿ ನಿಂತಂತೆ ಭಾಸವಾಗುತ್ತವೆ. ಇಂತಹ ಕೃತಕ ಉಪಗ್ರಹಗಳು ಈ ಕೆಳಕಂಡ ಕೆಲಸಗಳಿಗೆ ಸೂಕ್ತ. []
    1. ಮಳೆ, ಪ್ರವಾಹ ಮತ್ತು ಚಂಡಮಾರುತಗಳ ಮುನ್ಸೂಚನೆ
    2. ಗಾಳಿಯ ಶುದ್ಧತೆಯ ಅಂದಾಜು
 
ಸಾಗರದ ಮಟ್ಟದಿಂದ ೩೫೭೮೬ ಕಿಮೀ ಎತ್ತರದಲ್ಲಿ ಭೂಮಿಯನ್ನು ಸುತ್ತುವ ಭೂ ಸ್ಥಿರಪಥ ಉಪಗ್ರಹ


ಕೆಲವು ದೊಡ್ಡ ಉಪಗ್ರಹಗಳನ್ನು ಭಾಗಗಳಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ಕಕ್ಷೆಯಲ್ಲಿ ಜೋಡಿಸಲಾಗಿದೆ. ಚಂದ್ರ, ಶುಕ್ರ, ಮಂಗಳ, ಗುರು, ಶನಿ, ಕೆಲವು ಕ್ಷುದ್ರಗ್ರಹಗಳು, ಮತ್ತು ಸೂರ್ಯಕ್ಕೆ ಹನ್ನೆರಡು ಬಾಹ್ಯಾಕಾಶ ಶೋಧಕಗಳನ್ನು ಇತರ ಕಾಯಗಳ ಸುತ್ತ ಕಕ್ಷೆಗೆ ಇರಿಸಲಾಗುತ್ತದೆ ಮತ್ತು ಕೃತಕ ಉಪಗ್ರಹಗಳಾಗಿ ಮಾರ್ಪಡಿಸಲಾಗಿದೆ.

ಉಲ್ಲೇಖ

ಬದಲಾಯಿಸಿ
  1. https://blog.ucsusa.org/syoung/how-many-satellites-are-in-space-the-spike-in-numbers-continues/
  2. https://www.space.com/where-will-millions-of-proposed-satellites-go
  3. https://www.nesdis.noaa.gov/our-satellites/currently-flying/geostationary-satellites