ಟಾರ್ಸಿಯರ್ ಕೋತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕನ್ನಡ ವಿಕಿಸೋರ್ಸ್ ನಿಂದ ಹೊಸಪುಟ, ಇಂಗ್ಲೀಷ್ ಪುಟದಿಂದ ಚಿತ್ರ ಸೇರ್ಪಡೆ
 
೧೦ ನೇ ಸಾಲು:
ಇದರ ಆಹಾರ ಮುಖ್ಯವಾಗಿ ಕೀಟಗಳು, ಕೆಲವೊಮ್ಮೆ ಸಣ್ಣಪುಟ್ಟ ಓತಿಕೇತಗಳನ್ನು, ಮರಗಪ್ಪೆಗಳನ್ನು, ಬಸವನಹುಳುಗಳನ್ನು ತಿನ್ನುತ್ತದೆ. ಹೊಂಚುಹಾಕಿ ತನ್ನೆರಡು ಕೈಗಳಿಂದ ಒಂದೇ ಸಲಕ್ಕೆ ಎರೆಯನ್ನು ಹಿಡಿದು ನಿಧಾನವಾಗಿ ತಿನ್ನುವುದು. ತಿನ್ನುವಾಗ ತನ್ನೆರಡು ಕಣ್ಣುಗಳನ್ನೂ ಬಲವಾಗಿ ಮುಚ್ಚಿಕೊಳ್ಳುವುದು ಇದರ ವಿಚಿತ್ರ ಲಕ್ಷಣ. ನಾಯಿಗಳ ರೀತಿಯಲ್ಲಿ ನೀರನ್ನು ಕುಡಿಯುತ್ತದೆ. ಟಾರ್ಸಿಯರ್ ಸಾಧುಸ್ವಭಾವದ ಪ್ರಾಣಿ. ಇದನ್ನು ಸುಲಭವಾಗಿ ಸಾಕಬಹುದು ಎಂದು ಹೇಳಲಾಗಿದ್ದರೂ ಪ್ರಾಣಿಸಂಗ್ರಹಾಲಯಗಳಲ್ಲಿ ಇದು ಅಪರೂಪ. ಬಹುಶಃ ಇದರ ಆಹಾರಕ್ರಮದ ಬಗ್ಗೆ ಹೆಚ್ಚು ಮಾಹಿತಿ ಇಲ್ಲದಿರುವುದೇ ಕಾರಣವಿರಬಹುದು. ಸಂತಾನೋತ್ಪತ್ತಿ ವರ್ಷದ ಯಾವ ಕಾಲದಲ್ಲಾದರೂ ನಡೆಯಬಹುದು. ಒಂದು ಸಲಕ್ಕೆ ಒಂದೇ ಒಂದು ಮರಿ ಹುಟ್ಟುತ್ತದೆ. ಆಗತಾನೇ ಹುಟ್ಟಿದ ಮರಿ ಪೂರ್ಣವಾಗಿ ರೂಪಗೊಂಡಿರುತ್ತದೆ. ಸಮತಟ್ಟಾದ ನೆಲದಲ್ಲಿ ನೆಗೆಯುತ್ತ ಓಡಾಡಲೂ ಬಲ್ಲುದು. ಮರ ಹತ್ತಬಲ್ಲದಾದರೂ ಒಂದೆರಡು ತಿಂಗಳವರೆಗೂ ತಾಯೊಂದಿಗೆ ಇದ್ದು ಅನಂತರ ಸ್ವತಂತ್ರ ಜೀವನ ನಡೆಸುತ್ತದೆ.
[[ಯುರೋಪ್|ಯೂರೋಪು]], [[ಉತ್ತರ ಅಮೇರಿಕ|ಉತ್ತರ ಅಮೆರಿಕ]]ಗಳಲ್ಲಿ ಪೇಲಿಯೊಸೀನ್ ಶಿಲೆಗಳಲ್ಲಿ (ಅಂದರೆ 65 ದಶಲಕ್ಷ ವರ್ಷಗಳ ಹಿಂದಿನ ಶಿಲೆಗಳಲ್ಲಿ) ಇದರ ಪಳೆಯುಳಿಕೆಗಳು ಸಿಕ್ಕಿವೆ.{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟಾರ್ಸಿಯರ್ ಕೋತಿ}}
 
[[ವರ್ಗ:ಪ್ರಾಣಿಗಳು]]
"https://kn.wikipedia.org/wiki/ಟಾರ್ಸಿಯರ್_ಕೋತಿ" ಇಂದ ಪಡೆಯಲ್ಪಟ್ಟಿದೆ