ಆಲ್ಫ್ರಡ್ ಫೊನ್ ಟಿರ್ಪಿಟ್ಸ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
 
೩ ನೇ ಸಾಲು:
 
== ಬದುಕು ಮತ್ತು ಸಾಧನೆ ==
[[ಪ್ರಷ್ಯ|ಪ್ರಷ್ಯನ್]] ನೌಕಾಪಡೆಯನ್ನು ಸೇರಿ (1865) ಅಲ್ಲೇ ಅಧಿಕಾರಿ ಆಗಿ ಬಡ್ತಿ ಪಡೆದ (1869). ಪಡೆಯ ಶ್ರೇಷ್ಠ [[ಟಾರ್ಪೀಡೊ]] ತಜ್ಞ ಎಂದು 1880ರಲ್ಲಿ ಪ್ರಸಿದ್ಧನಾದ. ನೌಕಾವರಿಷ್ಠ ವಿಭಾಗದ ಮುಖ್ಯಸ್ಥನಾಗಿ 1892ರಲ್ಲೂ ಇಂಪಿರಿಯಲ್ ನೌಕಾ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ 1897ರಲ್ಲೂ ನೇಮನ ಪಡೆದ. ಈ ಎರಡನೆಯ ಹುದ್ದೆಯಲ್ಲಿ ಹೆಚ್ಚುಕಡಿಮೆ 19 ವರ್ಷಗಳ ಕಾಲ ಅವಿಚ್ಛಿನ್ನವಾಗಿ ಸೇವೆ ಸಲ್ಲಿಸಿದ. ಈತನಿಗೆ ಲಭಿಸಿದ ಮುಂದಿನ ಬಿರುದುಗಳೆಂದರೆ ಅಡ್ಮಿರಲ್ (1903) ಮತ್ತು ಗ್ರ್ಯಾಂಡ್ ಅಡ್ಮಿರಲ್ (1911).
 
ಎರಡನೆಯ ವಿಲಿಯಮ್ ಚಕ್ರವರ್ತಿ (1859-1941, ಕೈಸರ್ ಎಂಬ ಹೆಸರಿನಿಂದ ಪ್ರಸಿದ್ಧನಾಗಿದ್ಧ) ಜರ್ಮನ್ ಹಿರಿಮೆಯ ವಿಚಾರ ಅದರಲ್ಲೂ ಸ್ವಂತ ಪ್ರತಿಷ್ಠೆಯ ವಿಚಾರ ಅಪಾರ ವಿಶ್ವಾಸ ಉಳ್ಳವನಾಗಿದ್ದ. ಈತ ರಾಜ್ಯಭಾರ ನಡೆಸುವಾಗ ನಾಗರಿಕ ಅಧಿಕಾರಿಗಳಿಗಿಂತಲೂ ಸೇನಾಧಿಕಾರಿಗಳನ್ನೇ ಹೆಚ್ಚಾಗಿ ನಂಬಿಕೊಂಡಿದ್ದ. ಇಂಥ ಸನ್ನಿವೇಶದಲ್ಲಿ ವಿಲಿಯಮನಿಗೂ ಟರ್ಪಿಟ್ಸ್‍ನಿಗೂ ಮೈತ್ರಿ ಬೆಳೆದದ್ದು ನಿರೀಕ್ಷಿತ ವಿದ್ಯಮಾನ. ಹಿಡಿದ ಪಟ್ಟನ್ನು ಬಿಡದ ಛಲವಂತ ನಾಯಕ ಟಿರ್ಪಿಟ್ಸ್ ಮತ್ತು ಅಧಿಕಾರಪ್ರಿಯ, ಗುಣವಂತ ಆದರೆ ಅಸ್ಥಿರಮನಸ್ಸಿನ ವಿಲಿಯಮ್ ಇವರ ನಡುವಿನ ಬಾಂಧವ್ಯ ಜರ್ಮನಿಯ ಭವ್ಯತೆಯನ್ನೂ ಪತನವನ್ನೂ ಏಕಕಾಲದಲ್ಲಿ ನಿರ್ಧರಿಸಿತು ಎಂಬುದಾಗಿ ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಬಿಸ್‍ಮಾರ್ಕ್ 1871ರಲ್ಲಿ ಕಟ್ಟಿದ ಜರ್ಮನ್ ಚಕ್ರಾಧಿಪತ್ಯ ಮಿಲಿಯಮ್-ಟಿರ್ಪಿಟ್ಸ್ ನಾಯಕತ್ವದಲ್ಲಿ ಪ್ರವರ್ಧಿಸಿದಂತೆ ಕಂಡರೂ ಮುಂದೆ ಆಂತರಿಕ ಅಸಾಂಗತ್ಯಗಳಿಂದಾಗಿ ಕುಸಿದುಬಿತ್ತು (1914-18).