ಗೋವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 3 sources and tagging 0 as dead.) #IABot (v2.0.8
೩೩ ನೇ ಸಾಲು:
 
==ಮೇಲ್ಮೈ ಲಕ್ಷಣ==
*ಗೋವ ಉತ್ತರದಲ್ಲಿ ತೇರೇಖೋಲ್ ನದಿಯಿಂದಾಗಿ [[ಮಹಾರಾಷ್ಟ್ರ]]ದಿಂದ ಪ್ರತ್ಯೇಕಿಸಲ್ಪಟ್ಟಿದೆ. [[ಸಹ್ಯಾದ್ರಿ]]ಯ ಸೆರಗಿನಲ್ಲಿರುವ ಗೋವದ ಪೂರ್ವಭಾಗ [[ಮಲೆನಾಡು]]. ಪೂರ್ವದಿಂದ ಪಶ್ಚಿಮಕ್ಕೆ ಹಲವಾರು ನದಿ ತೊರೆಗಳು ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತವೆ. ಇವುಗಳಲ್ಲಿ ಮುಖ್ಯವಾದವು ಮಾಂಡವೀ, ಜ಼ುವಾರೀ (ಅಘನಾಶಿನೀ), ತೇರೇಖೋಲ್, ಚಪೋರ್ ಮತ್ತು ಬೆತುಲ್. ಇವುಗಳಿಂದ ಒಟ್ಟು ಸು. 270 ಕಿಮೀಗಳಷ್ಟು [[ಜಲಮಾರ್ಗಗಳು]] ಏರ್ಪಟ್ಟಿವೆ.
* [[ಮಾಂಡವೀ]] ಗೋವದ ಈಶಾನ್ಯ ಭಾಗದಲ್ಲಿರುವ ಪರ್ವತ ಭೀಮಗಡದಲ್ಲಿ ಹುಟ್ಟಿ ಅಗ್ವಾದ ಕಿಲ್ಲೆಯ ಹತ್ತಿರ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಜವಾರೀ ನದಿ ಹೇಮಾಡ್ ಬಾರ್ಸೆ ಮತ್ತು ಅಷ್ಟಾಗ್ರಹಾರ ಎಂಬ ಭಾಗದಲ್ಲಿ ಹುಟ್ಟಿ ಮುರ್ಗಾಂವ್ ಕೊಲ್ಲಿಯಲ್ಲಿ ಸಮುದ್ರವನ್ನು ಸೇರುತ್ತದೆ. ತೇರೇಖೋಲ್ ಮೂರನೆಯ ದೊಡ್ಡ ನದಿ. ಮಣೇರಿಯ ಹತ್ತಿರ ಹುಟ್ಟಿ ತೇರೇಖೋಲ್ ಕಿಲ್ಲೆಯ ಹತ್ತಿರ ಸಮುದ್ರವನ್ನು ಸೇರುತ್ತದೆ. ಈ ನದಿಯ ದಡಗಳಲ್ಲಿ [[ತೆಂಗು]] [[ಅಡಿಕೆ]]ಗಳ ತೋಟಗಳನ್ನು ವಿಶೇಷವಾಗಿ ಕಾಣಬಹುದು.
*ಸಹ್ಯಾದ್ರಿಯ ಕವಲುಗಳು ಗೋವದಲ್ಲಿವೆ. ಇವುಗಳಲ್ಲಿ ಪುರ್ವಕ್ಕಿರುವ ಸೊಂಸೋಗಡ ಬೆಟ್ಟ ಪ್ರಸಿದ್ಧವಾಗಿದೆ. ಅದರ ಉತ್ತರಕ್ಕೆ ಸತ್ತರೀ ಮಹಾಲದಲ್ಲಿ ವಾಘೇರಿ ಬೆಟ್ಟವಿದೆ. ಇನ್ನೊಂದು ಬೆಟ್ಟ ಮೋರ್ಲೆಗಡ. ಸಮಪಾತಳಿಯ ಮೇಲೆ ಇರುವ [[ಚಂದ್ರನಾಥ ಬೆಟ್ಟ]] ಸೃಷ್ಟಿಸೌಂದರ್ಯ ವೀಕ್ಷಣೆಗೆ ಪ್ರಸಿದ್ಧವೆನಿಸಿದೆ. ಗೋವದ ಶೇ.29 ಪ್ರದೇಶ ಅರಣ್ಯಾವೃತ.
"https://kn.wikipedia.org/wiki/ಗೋವ" ಇಂದ ಪಡೆಯಲ್ಪಟ್ಟಿದೆ