ಪಾಣಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು replaced [[Category: → [[ವರ್ಗ: , general fixes enabled
ಚುNo edit summary
೨೫ ನೇ ಸಾಲು:
ಪಾಣಿನಿಗಿಂತ ಹಿಂದೆಯೇ ಆಪಿಶಲಿ ಮತ್ತು ಕಾಶಕ್ರತ್ಸ್ನರ ವ್ಯಾಕರಣಗಳು ಪ್ರಚಲಿತವಾಗಿದ್ದುವೆಂದು ಹೇಳಿದೆವು. ಕಾಶಕೃತ್ಸ್ನವ್ಯಾಕರಣದಲ್ಲಿ ಮೂರು ಅಧ್ಯಾಯಗಳೂ ಆಪಿಶಲಿ ವ್ಯಾಕರಣದಲ್ಲಿ ಎಂಟು ಅಧ್ಯಾಯಗಳೂ ಇದ್ದುವು. ಆಪಿಶಲಿ ವ್ಯಾಕರಣ ಕ್ಲಿಷ್ಟ, ಕಾಶಕೃತ್ಸ್ನ ವ್ಯಾಕರಣ ಕಾತಂತ್ರವ್ಯಾಕರಣಕ್ಕೆ ಮೂಲವಾಗಿದ್ದಂತೆ, ಆಪಿಶಲಿಯ ಅಷ್ಟಾಧ್ಯಾಯಿ ಪಾಣಿನಿಯ ಅಷ್ಟಾಧ್ಯಾಯಿಗೆ ಮೂಲವೆನಿಸಿಕೊಂಡಿದೆ. ವಿಭಕ್ತ್ಯಂತಂ ಪದಂ ಎಂಬ ಆಪಿಶಲಿಯ ಸೂತ್ರವೇ ಸುಪ್ತಿಙಂತಂ ಪದಂ ಎಂದು ಪಾಣಿನಿಯಿಂದ ರೂಪಾಂತರಗೊಂಡಿರುವುದು. ಆಪಿಶಲಿಯೇ ಪಂಚಪಾದಿ ಉಣಾದಿ ಸೂತ್ರಕರ್ತಾ ಎಂಬುದು ಅಭಿಜ್ಞರ ಮತ. ಪಾಣಿನಿಯ ಪ್ರತ್ಯಾಹಾರಸೂತ್ರಗಳಿಗೂ ಆಪಿಶಲಿಯೇ ಮಾರ್ಗದರ್ಶಿ ಎಂದು ತೋರುತ್ತದೆ. ಹೀಗೆ ಸಂಸ್ಕøತ ವ್ಯಾಕರಣ ಗ್ರಂಥಗಳಲ್ಲಿ ಆಪಿಶಲಿ ಮೂಲವಾದ ಪಾಣಿನೀಯ ಪದ್ಧತಿ ಮತ್ತು ಕಾಶಕೃತ್ಸ್ನ ಮೂಲವಾದ ಕಾತಂತ್ರಪದ್ಧತಿ ಎಂಬ ಎರಡು ಪದ್ಧತಿಗಳು ಕಂಡುಬರುತ್ತವೆ. ಚಾಂದ್ರ, ಜೈನೇಂದ್ರ, ಸರಸ್ವತೀ ಕಂಠಾಭರಣಗಳು ಪಾಣಿನೀಯ ಪದ್ಧತಿಗೂ ಹೈಮ ಶಬ್ಬಾನುಶಾಸನ, ಮುಗ್ಧಬೋಧ, ಸಂಕ್ಷಿಪ್ತಸಾರ, ಸಾರಸ್ವತ, ಸುಪದ್ಮ, ಪ್ರಯೋಗ ರತ್ನಮಾಲಾಗಳು ಕಾತಂತ್ರಪದ್ಧತಿಗೂ ಸೇರಿದುವು. ಕಾಲಕ್ರಮದಲ್ಲಿ ಪಾಣಿನಿಯ ಅಷ್ಟಾಧ್ಯಾಯಿಯಲ್ಲಿ ತಮಗೆ ಕಂಡುಬಂದ ಕೆಲವು ಲೋಪದೋಷಗಳನ್ನು ಕ್ರಮಪಡಿಸುವುದಕ್ಕಾಗಿಯೂ ಕೆಲವು ಕಡೆ ಕ್ಲಿಷ್ಟವಾದ ಸೂತ್ರಗಳ ಅರ್ಥವನ್ನು ವಿವರಿಸುವುದಕ್ಕಾಗಿಯೂ ಅನಾವಶ್ಯಕವಾದುವನ್ನು ಪರಿಹರಿಸುವುದಕ್ಕಾಗಿಯೂ ಹೆಚ್ಚು ಲಾಘವವನ್ನು ಸಾಧಿಸುವುದಕ್ಕಾಗಿಯೂ ಕಾತ್ಯಾಯನ, ಭಾರದ್ವಾಜ, ಸುನಾಗ ಮುಂತಾದವರು ಪಾಣಿನಿಯ ಸೂತ್ರಗಳಿಗೆ ವಾರ್ತಿಕ ಎಂಬ ಅಡಕವಾದ ಟಿಪ್ಪಣಿಗಳನ್ನು ಬರೆದರು. ಇವರಲ್ಲಿ ಕಾತ್ಯಾಯನನೇ (ಕ್ರಿ. ಪೂ. ಮೂರನೆಯ ಶತಮಾನ) ಪ್ರಧಾನ. ಇವನಿಗೆ ವರರುಚಿ ಎಂಬುದು ಅಂಕಿತನಾಮ. ಕಾತ್ಯಾ ಎಂಬ ವಂಶದವನಾದುದರಿಂದ ಕಾತ್ಯಾಯನ ಎಂಬ ಹೆಸರೂ ರೂಢಿಯಲ್ಲಿದೆ. ಇವನನ್ನೇ ವಾರ್ತಿಕಾಚಾರ್ಯ, ವೃತ್ತಿಕಾರ ಎನ್ನುವುದು. ಈ ಕಾತ್ಯಾಯನನ ವಾರ್ತಿಕವನ್ನು ಆಧಾರವಾಗಿಟ್ಟುಕೊಂಡು ಪಾಣಿನಿಯ ಸೂತ್ರಗಳನ್ನು ಮಥಿಸಿ (ವ್ಯಾಕರಣ) ಮಹಾಭಾಷ್ಯವನ್ನು ಅನಂತರ ರಚಿಸಿದವ ಪತಂಜಲಿ. ಈತ ಕ್ರಿ.ಪೂ 144-142ರಲ್ಲಿ ಗುಹಾಭಾಷ್ಯ ರಚಿಸಿರಬೇಕೆಂದು ನಂಬಲಾಗಿದೆ. ಸಂಸ್ಕøತ ವ್ಯಾಕರಣದಲ್ಲಿ ಈತನದೇ ಕೊನೆಯ ಮಾತೆಂದು ಈಗಲೂ ಪರಿಗಣಿಸಲಾಗುತ್ತಿದೆ. ಪಾಣಿನಿ, ವರರುಚಿ, ಪತಂಜಲಿ-ಈ ಮೂವರನ್ನೂ ವ್ಯಾಕರಣ ಶಾಸ್ತ್ರದಲ್ಲಿ ಧುರೀಣರಾದ ಮುನಿತ್ರಯರೆಂದು ಭಾವಿಸಲಾಗಿದೆ. ಈ ಮೂವರೂ ಮುನಿಗಳೇ ಆಗಿದ್ದರೆಂಬುದು ಸಾಂಪ್ರದಾಯಿಕ ನಂಬಿಕೆ.
 
ಪಾಣಿನಿಯ ಸೂತ್ರಗಳಿಗೆ ರಚಿತವಾಗಿರುವ ಟೀಕೆಗಳಲ್ಲಿ ಅತ್ಯಂತ ಪ್ರಾಚೀನವೂ ಪ್ರಧಾನವೂ ಆದುದು ಕಾಶಿಕಾವೃತ್ತಿ. ಇದನ್ನು [[ಜಯಾದಿತ್ಯ]], ವಾಮನ ಎಂಬ ಇಬ್ಬರು ಜೈನಪಂಡಿತರು ಕ್ರಿ.ಶ. ಏಳನೆಯ ಶತಮಾನದ ಪೂರ್ವಾರ್ಧದಲ್ಲಿ ರಚಿಸಿದರು.
 
ಪಾಣಿನಿಯ ಅಷ್ಟಾಧ್ಯಾಯಿ ಸೂತ್ರಗಳ ಮೂಲಕ ವ್ಯಾಕರಣಶಾಸ್ತ್ರ ಅಭ್ಯಸಿಸುವುದು ಇತ್ತೀಚಿನವರೆಗೂ ತುಂಬ ಕಷ್ಟಕರವಾಗಿತ್ತು. ಕ್ರಿ.ಶ. ಹದಿನೇಳನೆಯ ಶತಮಾನದಲ್ಲಿ ಭಟ್ಟೋಜಿ ದೀಕ್ಷಿತ ಬೇರೆ ಬೇರೆ ಪ್ರಕರಣಗಳಿಗೆ ಸಂಬಂಧಿಸಿದ ಸೂತ್ರಗಳನ್ನೆಲ್ಲ ಬೇರೆಬೇರೆ ಒಟ್ಟುಗೂಡಿಸಿ ಸಿದ್ಧಾಂತ ಕೌಮುದಿಯನ್ನು ರಚಿಸಿದ ಮೇಲೆ ಅದು ತುಂಬ ಜನಪ್ರಿಯವಾಗಿ ಆಸೇತುಹಿಮಾಚಲದವರೆಗೆ ಅದರ ಮೂಲಕವಾಗಿಯೇ ಶಾಸ್ತ್ರಾಭ್ಯಾಸ ಮಾಡುವ ಕ್ರಮ ಆರಂಭವಾಯಿತು.
"https://kn.wikipedia.org/wiki/ಪಾಣಿನಿ" ಇಂದ ಪಡೆಯಲ್ಪಟ್ಟಿದೆ