ಸರೀಸೃಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ದೋಷ ತಿದ್ದುಪಡಿ
೭ ನೇ ಸಾಲು:
 
==ಚರಿತ್ರೆ==
ಬಹುಶಃ 25ಕೋಟಿ೨೫ ಕೋಟಿ ವರ್ಷಗಳ ಹಿಂದೆ [[ಪೇಲಿಯೋಝೋಯಿಕ್ ಯುಗ]]ದ ಕೊನೆಯ ಕಲ್ಪದಲ್ಲಿ ಪ್ರಾರಂಭವಾಯಿತು. ಆರಂಭ ಸರಳ, ಆದರೆ ಮುಂದೆ ಆ ವರ್ಗದಿಂದ (ಕ್ಲಾಸ್) ಸರ್ವತೋಮುಖವಾಗಿ ವಿಕಸಿಸಿದ ಉಪವರ್ಗ, ಗಣ, ಕುಟುಂಬ ಮತ್ತು ಜಾತಿಗಳು (ಸಬ್ಕ್ಲಾಸ್, ಆರ್ಡರ್, ಫ್ಯಾಮಿಲಿ ಅಂಡ್ ಜೀನಸ್), ಅವುಗಳ ದೇಹರಚನೆಯ ವೈಶಿಷ್ಟ್ಯ, ಮಿಕ್ಕೆಲ್ಲ ಪ್ರಾಣಿಗಳಿಗಿಂತ ಭಿನ್ನವಾದ ಬೃಹದಾಕಾರದ ಇವು ಸೃಷ್ಟಿಯಲ್ಲೇ ಬಲು ಕುತೂಹಲಕಾರಿಗಳು. ಉರಗಗಳು ಬಾಳಿ ಮೆರೆದ ಭೂಚರಿತ್ರೆಯ [[ಮೀಸೊಝೋಯಿಕ್ ಯುಗ]]ದಲ್ಲಿ (225೨೨೫-65೬೫ ದ.ಲ.ವ. ಪ್ರಾಚೀನಾವಧಿ) ಅವು ಸಕಲ ಭೂಪ್ರದೇಶವನ್ನೂ ಆಕ್ರಮಿಸಿದ್ದುವು. ಇಷ್ಟು ಮಾತ್ರವಲ್ಲ, [[ನದಿ|ನದಿಗಳು]], [[ಸರೋವರ|ಸರೋವರಗಳು]], [[ವಾಯುಮಂಡಲ]] ಇವೆಲ್ಲವೂ ಉರಗಗಳ ಆವಾಸ ಸ್ಥಾನಗಳಾಗಿದ್ದವು. ಕೆಲವು ಸಸ್ಯಾಹಾರಿಗಳಾದರೆ ಮತ್ತೆ ಕೆಲವು ಅತಿಕ್ರೂರಿಗಳಾದ ಮಾಂಸಾಹಾರಿಗಳು; ಮಾಂಸಾಹಾರಿಗಳ ಹಾವಳಿಯನ್ನು ತಡೆಯಲಾರದೆ ಆತ್ಮ ಸಂರಕ್ಷಣೆಗಾಗಿ ಚಿತ್ರವಿಚಿತ್ರವಾದ ರಕ್ಷಾಕವಚಗಳನ್ನು ಬೆಳೆಸಿಕೊಂಡ ಉರಗಗಳು ಕೆಲವಾದರೆ, ಪುಷ್ಕಳವಾಗಿ ಬೆಳೆದಿದ್ದ ಸಸ್ಯವರ್ಗಗಳನ್ನು ತಿಂದು ಕೊಬ್ಬಿ ಬೃಹದಾಕಾರವಾಗಿ ಬೆಳೆದವು ಮತ್ತೆ ಕೆಲವು; ಕೆಲವು ದ್ವಿಪಾದಿಗಳಾದರೆ ಮತ್ತೆ ಕೆಲವು ಚತುಷ್ಪಾದಿಗಳು; ಭೂಮಿಯ ಮೇಲೆ ವೇಗವಾದ ಚಲನೆಗೆ ದೇಹದ ರಚನೆಯನ್ನು ಅಳವಡಿಸಿಕೊಂಡವು ಕೆಲವಾದರೆ ಮತ್ತೆ ಕೆಲವು ನೀರಿನಲ್ಲಿ ಈಜಲು, ಗಾಳಿಯಲ್ಲಿ ಹಾರಾಡಲು ಅನುಕೂಲಿಸುವಂತೆ ದೇಹವನ್ನು ಹೊಂದಿಸಿಕೊಂಡಂಥವು. ಈ ರೀತಿ ಬಹುಶಾಖೋಪಶಾಖೆಯಾಗಿ ವಿಸ್ತರಿಸುತ್ತಿದ್ದ ಸರೀಸೃಪದ ಕಾಂಡದಿಂದಲೇ ಇಂದಿನ [[ಸಸ್ತನಿ]] ಪ್ರಾಣಿಗಳು, [[ಪಕ್ಷಿಗಳು|ಪಕ್ಷಿಗಳ]] ಶಾಖೆಗಳು ವಿಕಸಿಸಿವೆ. (ಈ ಸಸ್ತನಿ ಶಾಖೆಯ ಅಂತ್ಯದಲ್ಲಿ ನಿಂತಿರುವ ಪ್ರಾಣಿ ಎಂದರೆ ಮನುಷ್ಯ). ದೇಹ ರಚನೆಯ ವೈಶಿಷ್ಟ್ಯದೊಂದಿಗೆ ಸಂಖ್ಯಾಪ್ರಾಬಲ್ಯವೂ ಸೇರಿ ಇವು ಪ್ರಪಂಚದ ಮೂಲೆಮೂಲೆಗಳಲ್ಲೂ ವ್ಯಾಪಿಸಿ ನಿರಂಕುಶಪ್ರಭುಗಳಾಗಿ ಮೆರೆದ ಕಾಲವನ್ನು (ಭೂಚರಿತ್ರೆಯ ಮಧ್ಯ ಜೀವಕಲ್ಪ) ಉರಗಗಳ ಸುವರ್ಣಯುಗ ಎಂದು ಕರೆಯಲಾಗಿದೆ. ವಿಸ್ಮಯ ಹುಟ್ಟಿಸುವಂಥ ಬೃಹದಾಕಾರದ ಅನೇಕಾನೇಕ ಉರಗಗಳು ನಿಸರ್ಗದ ಹೊಡೆತ ಹಾಗೂ ಬದಲಾವಣೆಗಳೊಂದಿಗೆ ಹೆಜ್ಜೆಯಿಡಲಾಗದೇ ಅಳಿದುಹೋದುವು. ಅತಿಪರಾಕ್ರಮಿಗಳು ಗತವಂಶಿಗಳಾದುವು. ಈ ಭವ್ಯ ಪೂರ್ವಜರ ಸಂತತಿಗೆ ಸೇರಿದ್ದು ಇಂದಿಗೂ ಉಳಿದಿರುವ ಉರಗಗಳು ಕೇವಲ ಕೆಲವೇ ಆದರೂ ಅವು ಸಾಕಷ್ಟು ಕೂತೂಹಲಕಾರಿಗಳಾಗಿವೆ.
 
==ಆಮ್ನಿಯೋಟಿ==
"https://kn.wikipedia.org/wiki/ಸರೀಸೃಪ" ಇಂದ ಪಡೆಯಲ್ಪಟ್ಟಿದೆ