ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ====ಸಾಹಿತ್ಯಶ್ರೀ ಪ್ರಶಸ್ತಿ==== ಕನ್ನಡ ಸಾಹಿತ್ಯಕ್ಕೆ ನೀಡಿರುವ ಈವರೆಗಿನ ಗಮನಾ...
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
( ಯಾವುದೇ ವ್ಯತ್ಯಾಸವಿಲ್ಲ )

೧೩:೦೬, ೧೩ ಏಪ್ರಿಲ್ ೨೦೨೧ ನಂತೆ ಪರಿಷ್ಕರಣೆ

ಸಾಹಿತ್ಯಶ್ರೀ ಪ್ರಶಸ್ತಿ

ಕನ್ನಡ ಸಾಹಿತ್ಯಕ್ಕೆ ನೀಡಿರುವ ಈವರೆಗಿನ ಗಮನಾರ್ಹವಾದ ಸೇವೆಯನ್ನು ಪರಿಗಣಿಸಿ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2017ನೇ ವರ್ಷದಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಹೊಸದಾಗಿ ನೀಡಲಾಗುತ್ತಿದೆ. ಈ ಪ್ರಶಸ್ತಿಗೆ ₹25,000 ನಗದು ಹಾಗೂ ಪ್ರಮಾಣಪತ್ರದೊಂದಿಗೆ ಶಿಲಾಶಾಸನ ಬರೆಯುವ ಮಹಿಳೆಯ ಪುತ್ತಿಗೆಯನ್ನು ನೀಡುವುದಲ್ಲದೆ ಶಾಲು, ಹಾರಗಳೊಂದಿಗೆ ಸನ್ಮಾನಿಸಲಾಗುತ್ತದೆ.

ವರ್ಷ ಪುರಸ್ಕೃತರು
2017 ಧರಣೇಂದ್ರ ಕುರಕುರಿ
ಫಕೀರ ಮಹಮದ್ ಕಟ್ಪಾಡಿ
ವಿಜಯಶ್ರೀ ಸಬರದ
ವಿ. ಮುನಿವೆಂಕಟಪ್ಪ
ನಟರಾಜ್ ಹುಳಿಯಾರ್
ಕೆ. ಕೇಶವ ಶರ್ಮ
ಕರೀಗೌಡ ಬೀಚನಹಳ್ಳಿ
ತೇಜಸ್ವಿ ಕಟ್ಟೀಮನಿ
ಕಮಲಾ ಹೆಮ್ಮಿಗೆ
ಶರಣಪ್ಪ ಕಂಚ್ಯಾಣಿ

ಗೌರವ ಪ್ರಶಸ್ತಿ

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಐವರು ಹಿರಿಯ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷವೂ ಗೌರವ ಪ್ರಶಸ್ತಿಯನ್ನು ₹50,0000 ನಗದು, ಫಲಕ, ಶಾಲು ಹಾರ ಹಾಗೂ ಪ್ರಮಾಣ ಪತ್ರದೊಂದಿಗೆ ನೀಡುತ್ತದೆ. ಕೆಲವೊಮ್ಮೆ ಗಮಕ ಕಲೆಯ ಬೆಳವಣಿಗೆಗೆ ಕೊಡುಗೆ ನೀಡಿದ ಗಮಕಿಗಳಿಗೂ ಈ ಗೌರವ ನೀಡಲಾಗಿದೆ.