ಭಾರತದಲ್ಲಿ ಸಕ್ಕರೆ ಉತ್ಪಾದನೆ ಮತ್ತು ಬಳಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೫ ನೇ ಸಾಲು:
==ಉತ್ಪಾದನೆ==
*ವಿಶ್ವದ ಒಟ್ಟಾರೆ ಸಕ್ಕರೆ ಬಳಕೆ ಪ್ರಮಾಣ 1687.30 ಲಕ್ಷ ಟನ್‌ಗಳಷ್ಟಿದೆ. ಇದರಲ್ಲಿ ಶೇ 15ರಷ್ಟು ದೊಡ್ಡ ಪಾಲನ್ನು ಹೊಂದುವ ಮೂಲಕ ಅತಿ ಹೆಚ್ಚು ಸಕ್ಕರೆ ಬಳಕೆ ಮಾಡುವ ದೇಶವಾಗಿ ಭಾರತ ಹೊರಹೊಮ್ಮಿದೆ ಎಂದು ಅಸೋಚಾಂ ಅಧ್ಯಯನದಿಂದ ತಿಳಿದು­ಬಂದಿದೆ.ದೇಶದ ಸಕ್ಕರೆ ಬಳಕೆ ಪ್ರತಿವರ್ಷ ಸರಾಸರಿ ಶೇ 2ರಷ್ಟು ಪ್ರಮಾಣ­ದಲ್ಲಿ ಏರಿಕೆ ಕಾಣುತ್ತಲೇ ಇದೆ. ಸದ್ಯ ವರ್ಷಕ್ಕೆ 260 ಲಕ್ಷ ಟನ್‌ ಸಕ್ಕರೆ ಬಳಕೆಯಾಗುತ್ತಿದ್ದು, 2019–20ರ ವೇಳೆಗೆ 293.50 ಲಕ್ಷ ಟನ್‌ಗಳಿಗೆ ತಲುಪಲಿದೆ.<ref>[http://www.prajavani.net/news/article/2014/11/11/279455.html 2019ಕ್ಕೆ ಸಕ್ಕರೆ ಬಳಕೆ 294 ಲಕ್ಷ ಟನ್‌ಗೆ11 Nov, 2014]</ref>
===ಕರ್ನಾಟಕದಲ್ಲಿ ಸಕ್ಕರೆ ಉದ್ಯಮ===
*ಕರ್ನಾಟಕ ರಾಜ್ಯದಲ್ಲಿ ಒಟ್ಟು 30 ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಕಟ್ಟಲಾಗಿದೆ. ಇವುಗಳಲ್ಲಿ 17 ಕಾರ್ಖಾನೆಗಳು ಹಾನಿ ಅನುಭವಿಸಿ ಸ್ಥಗಿತಗೊಂಡಿವೆ. ಈ ಪೈಕಿ, ದೀರ್ಘಕಾಲ ಸ್ಥಗಿತಗೊಂಡ 8 ಕಾರ್ಖಾನೆಗಳನ್ನು 40 ವರ್ಷಗಳ ಲೀಸ್‌ ಮೇಲೆ ನಡೆಸಲು ಖಾಸಗಿ ಉದ್ದಿಮೆಗಳಿಗೆ ಒಪ್ಪಿಸಲಾಗಿದೆ. ಮತ್ತೆ ಐದು ಕಾರ್ಖಾನೆಗಳನ್ನು ಗುತ್ತಿಗೆ ಕೊಡುವ ಬಗ್ಗೆ ಪರಿಶೀಲನೆ ನಡೆದಿದೆ. ನಾಲ್ಕು ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಕಾಯಂ ಆಗಿ ಸಮಾಪನೆ ಮಾಡಲಾಗಿದೆ. ರಾಜ್ಯದ 30 ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ಕೇವಲ 13 ಸಹಕಾರಿ ರಂಗದಲ್ಲಿ ಉಳಿದು ಉತ್ಪಾದನೆಯಲ್ಲಿ ತೊಡಗಿವೆ’.
*ರಾಜ್ಯದಲ್ಲಿ ಒಂದೇ ಕುಟುಂಬದ ಹಿಡಿತದಲ್ಲಿ ಸಹಕಾರಿ ಮತ್ತು ಖಾಸಗಿ ಕಾರ್ಖಾನೆಗಳಿರುವ ಬಹಳಷ್ಟು ಉದಾಹರಣೆಗಳಿವೆ. ಹೆಚ್ಚು ಸಕ್ಕರೆ ಇಳುವರಿಯ ಉತ್ತಮ ಗುಣಮಟ್ಟದ ಕಬ್ಬನ್ನು ತಮ್ಮ ಖಾಸಗಿ ಕಾರ್ಖಾನೆಗೆ ಕಳುಹಿಸಿ, ಕಳಪೆ ಗುಣಮಟ್ಟದ ಕಬ್ಬನ್ನು ಸಹಕಾರಿ ಕಾರ್ಖಾನೆಗಳಿಗೆ ಹಂಚಿಕೆ ಮಾಡುವ ಸಹಕಾರಿ ಮುಖಂಡರಿದ್ದಾರೆ.
*ಸಹಕಾರಿ ಸಕ್ಕರೆ ಕಾರ್ಖಾನೆಗಳ ನಿರ್ವಹಣೆಯಲ್ಲಿ ದೇಶಕ್ಕೆ ಗುಜರಾತ್ ರಾಜ್ಯ ಮಾದರಿಯಾಗಿದೆ. ಅಲ್ಲಿ 18 ಸಕ್ಕರೆ ಕಾರ್ಖಾನೆಗಳಿವೆ. ಇವೆಲ್ಲವೂ ಸಹಕಾರಿ ರಂಗಕ್ಕೆ ಸೇರಿವೆ. ಇಲ್ಲಿ ಒಂದೂ ಖಾಸಗಿ ಸಕ್ಕರೆ ಕಾರ್ಖಾನೆ ಇಲ್ಲವೆಂಬುದು ಗಮನಾರ್ಹ. ಈ ಕಾರ್ಖಾನೆಗಳು ಕಬ್ಬಿಗೆ ಅತೀ ಹೆಚ್ಚು ಬೆಲೆ ನೀಡುತ್ತಿರುವುದು ಬಹುದೊಡ್ಡ ಸಾಧನೆ. ಕಾರ್ಖಾನೆ ವಿಷಯದಲ್ಲಿ ಗುಜರಾತಿನಲ್ಲಿ ರಾಜಕೀಯ ಮೇಲಾಟ ನಡೆಯುವುದಿಲ್ಲ. ಆಡಳಿತವು ಪೂರ್ಣ ಪಾರದರ್ಶಕವಾಗಿ ನಡೆಯುತ್ತಿದೆ.
*ಕರ್ನಾಟಕದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಸಹಕಾರಿ ಇಲಾಖೆ ಉಪನಿಬಂಧಕರನ್ನು ಮ್ಯಾನೇಜಿಂಗ್ ಡೈರೆಕ್ಟರ್‌ ಎಂದು ನೇಮಕ ಮಾಡಲಾಗುತ್ತದೆ. ಆದರೆ ಗುಜರಾತಿನಲ್ಲಿ ಸಕ್ಕರೆ ಕೈಗಾರಿಕೆಯಲ್ಲಿ ಪರಿಣತಿ ಪಡೆದ ಹಿರಿಯ ತಜ್ಞರನ್ನು ಎಂ.ಡಿ. ಆಗಿ ನೇಮಿಸಲಾಗುತ್ತದೆ. ತಜ್ಞರೇ ಎಂ.ಡಿ. ಆಗುವುದರಿಂದ ಕಾರ್ಖಾನೆ ವ್ಯವಸ್ಥಿತ ವಾಗಿ ನಡೆಯಲು ಅನುಕೂಲವಾಗುತ್ತದೆ. ಆಡಳಿತ ಮಂಡಳಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಇನ್ನೊಂದು ವಿಶೇಷ. (ಸಕ್ಕರೆ ಸಚಿವ ಎಂ.ಟಿ.ಬಿ. ನಾಗರಾಜ್ ಈಚೆಗೆ ವಿಧಾನಮಂಡಲ ಅಧಿವೇಶನದಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ರಾಜ್ಯದ ಸಹಕಾರಿ ಸಕ್ಕರೆ ಕಾರ್ಖಾನೆಗಳ ಸ್ಥಿತಿಗತಿ ಕುರಿತು ನೀಡಿದ ಉತ್ತರ; ಮತ್ತು ಸಕ್ಕರೆ ಕಾರ್ಖಾನೆಗಳ ಶೋಚನೀಯ ಸ್ಥಿತಿ.)<ref>[https://www.prajavani.net/op-ed/opinion/co-operative-sugar-factories-set-to-be-rivals-to-private-factories-private-companies-worried-820362.html ಸಂಗತ: ಸಹಕಾರಿ ದುಡ್ಡು ಯಲ್ಲಮ್ಮನ ಜಾತ್ರೆ!-;-ಮಲ್ಲಿಕಾರ್ಜುನ ಹೆಗ್ಗಳಗಿ Updated: 08 ಏಪ್ರಿಲ್ 2021,]</ref>
 
==ನೋಡಿ==