ಭಾರತದಲ್ಲಿ ಸಕ್ಕರೆ ಉತ್ಪಾದನೆ ಮತ್ತು ಬಳಕೆ

ಭಾರತ ಮತ್ತು ವಿಶ್ವದ ಸಕ್ಕರೆ ಬಳಕೆಸಂಪಾದಿಸಿ

ವೇಗವಾಗಿ ನಡೆಯುತ್ತಿರುವ ನಗರೀಕರಣ ಮತ್ತು ಬದಲಾಗು¬ತ್ತಿರುವ ಜನರ ಆಹಾರ ಪದ್ಧತಿಯನ್ನು ಗಮನಿಸಿದರೆ ದೇಶದಲ್ಲಿ ಸಕ್ಕರೆ ಬಳಕೆ ಪ್ರಮಾಣ ಮುಂದಿನ ಐದು ವರ್ಷ¬ಗಳಲ್ಲಿ 290 ಲಕ್ಷ ಟನ್‌ಗಳಿಗಿಂತಲೂ ಅಧಿಕವಾಗಿರಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಅಂದಾಜು ಮಾಡಿದೆ.
  • ವಿಶ್ವದ ಒಟ್ಟಾರೆ ಸಕ್ಕರೆ ಬಳಕೆ ಪ್ರಮಾಣ 1687.30 ಲಕ್ಷ ಟನ್‌ಗಳಷ್ಟಿದೆ. ಇದರಲ್ಲಿ ಶೇ 15ರಷ್ಟು ದೊಡ್ಡ ಪಾಲನ್ನು ಹೊಂದುವ ಮೂಲಕ ಅತಿ ಹೆಚ್ಚು ಸಕ್ಕರೆ ಬಳಕೆ ಮಾಡುವ ದೇಶವಾಗಿ ಭಾರತ ಹೊರಹೊಮ್ಮಿದೆ ಎಂದು ಅಸೋಚಾಂ ಅಧ್ಯಯನದಿಂದ ತಿಳಿದು¬ಬಂದಿದೆ.
  • ದೇಶದ ಸಕ್ಕರೆ ಬಳಕೆ ಪ್ರತಿವರ್ಷ ಸರಾಸರಿ ಶೇ 2ರಷ್ಟು ಪ್ರಮಾಣ¬ದಲ್ಲಿ ಏರಿಕೆ ಕಾಣುತ್ತಲೇ ಇದೆ. ಸದ್ಯ ವರ್ಷಕ್ಕೆ 260 ಲಕ್ಷ ಟನ್‌ ಸಕ್ಕರೆ ಬಳಕೆಯಾಗುತ್ತಿದ್ದು, 2019–20ರ ವೇಳೆಗೆ 293.50 ಲಕ್ಷ ಟನ್‌ಗಳಿಗೆ ತಲುಪಲಿದೆ ಎಂದು ವರದಿ ತಿಳಿಸಿದೆ.ಮೇರೆ ಮೀರಿರುವ ನಗರೀಕರಣ ಮತ್ತು ಆಹಾರ ಸಂಸ್ಕರಣಾ ವಲಯದಲ್ಲಿ ವಿಪರೀತ ಸಿಹಿ ಬಳಕೆಯಿಂದಾಗಿ ದೇಶದ ಒಟ್ಟಾರೆ ಸಕ್ಕರೆ ಬಳಕೆ ಪ್ರಮಾಣ ಹೆಚ್ಚುತ್ತಿದೆ ಎಂದು ವರದಿ ವಿವರಿಸಿದೆ.
  • ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕೃಷಿ ಪ್ರದೇಶದಲ್ಲಿ ಕಬ್ಬು ಬೆಳೆಯಬೇಕಿದೆ. ಜತೆಗೆ, ಅಧಿಕ ಇಳುವರಿಯ ಕಬ್ಬು ಬೆಳೆಯುವ ಮೂಲಕ ಸಕ್ಕರೆ ಉತ್ಪಾದನೆಯನ್ನು ಹೆಚ್ಚಿಸಬೇಕಾದ ಅಗತ್ಯವೂ ಇದೆ ಎಂದು ಅಸೋಚಾಂ ಅಧ್ಯಯನ ಸಲಹೆ ನೀಡಿದೆ.

-(ವರದಿ : ಪ್ರಜಾವಾಣಿ :11-11-2014)

  • ಭಾರತ ಮತ್ತು ವಿಶ್ವದ ಸಕ್ಕರೆ ಬಳಕೆ
ವರ್ಷ ಭಾರತದ ಬಳಕೆ .
  • ಲಕ್ಷ ಟನ್`ಗಳಲ್ಲಿ
!ವಿಶ್ವದ ಬಳಕೆ
  • ಲಕ್ಷ ಟನ್`ಗಳಲ್ಲ
2008-09 235.00, 1546.27
2009-10 225.00. 155160
2010=11 230.50 56182
2011-12 241.80 159899
2012-13 250.00 165664
2013-14 260.00 168734
2019-20 (293.50)? ?
  • 2014-15-ಭಾರತದಲ್ಲಿ ಸಕ್ಕರೆ ಉತ್ಪಾದನೆ ಅಕ್ಟೋಬರ್‌–ಡಿಸೆಂಬರ್‌ ಅವಧಿಯಲ್ಲಿ ಶೇ 27.3ರಷ್ಟು ಹೆಚ್ಚಳವಾಗಿದ್ದು, 74.60 ಲಕ್ಷ ಟನ್‌ಗಳಿಗೆ ಮುಟ್ಟಿದೆ. 2013–14ರ ಅಕ್ಟೋಬರ್‌–ಡಿಸೆಂಬರ್‌ನಲ್ಲಿ ಸಕ್ಕರೆ ಉತ್ಪಾದನೆ 58.60 ಲಕ್ಷ ಟನ್‌ಗಳಷ್ಟಿತ್ತು,ಎಂದು ಭಾರತೀಯ ಸಕ್ಕರೆ ಕಾರ್ಖಾನೆ­ಗಳ ಒಕ್ಕೂಟ (ಐಎಸ್‌ಎಂಎ) ಹೇಳಿದೆ.(ಪ್ರಜಾವಾಣಿವರದಿ ೬-೧-೨೦೧೫)

ಉತ್ಪಾದನೆಸಂಪಾದಿಸಿ

  • ವಿಶ್ವದ ಒಟ್ಟಾರೆ ಸಕ್ಕರೆ ಬಳಕೆ ಪ್ರಮಾಣ 1687.30 ಲಕ್ಷ ಟನ್‌ಗಳಷ್ಟಿದೆ. ಇದರಲ್ಲಿ ಶೇ 15ರಷ್ಟು ದೊಡ್ಡ ಪಾಲನ್ನು ಹೊಂದುವ ಮೂಲಕ ಅತಿ ಹೆಚ್ಚು ಸಕ್ಕರೆ ಬಳಕೆ ಮಾಡುವ ದೇಶವಾಗಿ ಭಾರತ ಹೊರಹೊಮ್ಮಿದೆ ಎಂದು ಅಸೋಚಾಂ ಅಧ್ಯಯನದಿಂದ ತಿಳಿದು­ಬಂದಿದೆ.ದೇಶದ ಸಕ್ಕರೆ ಬಳಕೆ ಪ್ರತಿವರ್ಷ ಸರಾಸರಿ ಶೇ 2ರಷ್ಟು ಪ್ರಮಾಣ­ದಲ್ಲಿ ಏರಿಕೆ ಕಾಣುತ್ತಲೇ ಇದೆ. ಸದ್ಯ ವರ್ಷಕ್ಕೆ 260 ಲಕ್ಷ ಟನ್‌ ಸಕ್ಕರೆ ಬಳಕೆಯಾಗುತ್ತಿದ್ದು, 2019–20ರ ವೇಳೆಗೆ 293.50 ಲಕ್ಷ ಟನ್‌ಗಳಿಗೆ ತಲುಪಲಿದೆ.[೧]

ನೋಡಿಸಂಪಾದಿಸಿ

  1. 2019ಕ್ಕೆ ಸಕ್ಕರೆ ಬಳಕೆ 294 ಲಕ್ಷ ಟನ್‌ಗೆ11 Nov, 2014