ಭಾರತದಲ್ಲಿ ದ್ವಿದಳ ಧಾನ್ಯಗಳು
ಭಾರತದಲ್ಲಿ ದ್ವಿದಳ ಧಾನ್ಯಗಳ ಕೃಷಿ ಮತ್ತು ಉತ್ಪಾದನೆ
ಬದಲಾಯಿಸಿ- ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ. ಕರ್ನಾಟಕ, ಮತ್ತು ಆಂಧ್ರಪ್ರದೇಶ ಈ ರಾಜ್ಯಗಳಲ್ಲಿ ದೇಶದಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ಬೆಳೆಯುವ ರಾಜ್ಯಗಳಾಗಿವೆ. ದೇಶದಲ್ಲಿ ಉತ್ಪಾದನೆ ಆಗುವ ಶೇಕಡ ೮೦(ಎಂಭತ್ತ)ರಷ್ಟನ್ನುಈಆರು ರಾಜ್ಯಗಳಲ್ಲಿಯೇ ಬೆಳೆಯಲಾಗುತ್ತದೆ.
- ಸಧ್ಯ ಭಾರತದಲ್ಲಿ ೨೨೨.೩೦ ಕೋಟಿ ಹೆಕ್ಟೇರುಗಳಲ್ಲಿ ಬೇಳೆ ಕಾಳುಗಳ ಉತ್ಪನ್ನವಾಗುತ್ತಿದೆ. ಇದು ವಿಶ್ವದ ಶೇ. ೩೩ ರಷ್ಟು
ಬೇಳೆಕಾಳು ಬೆಳೆಯುವ ಪ್ರದೇಶ .ಒಟ್ಟು ದೇಶದಲ್ಲಿ ವಾರ್ಷಿಕ ೧೩೧.೯ ಕೋಟಿ ಟನ್ ಬೇಳೆಕಾಳುಗಳ ಉತ್ಪಾದನೆ ಆಗುತ್ತಿದೆ. ಇದು ವಿಶ್ವದ ಶೇ. ೨೪ ರಷ್ಟಿದೆ. (೨೦೧೩-೨೦೧೪)
- ೨೦೧೪-೧೫ 'ಎಲ್ ನೈನೋ' ಹವಾಮಾನ ಮುನ್ಸೂಚನೆಯಂತೆ ಮಳೆಯ ಪ್ರಮಾಣ ಭಾರತದಲ್ಲಿ ಶೇ. ೫ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಅದರಿಂದ ಬೇಳೆಕಾಳುಗಳ ಭೆಳೆಯಲ್ಲಿ ಕೊರತೆ ಆಗಬಹುದೆಂದು ಅಂದಾಜುಮಾಡಲಾಗಿದೆ .ಅಲ್ಲದೆ ವರ್ಷದಿಂದ ವರ್ಷಕ್ಕೆ ಈ ಧಾನ್ಯಗಳ ಉಪಯೋಗ ಹೆಚ್ಚಾಗುತ್ತಿದೆ. ಹಾಗಾದರೆ ಈ ಧಾನ್ಯಗಳ ಕೊರತೆ ಹೆಚ್ಚಾಗಿ ಧಾರಣೆ ಮಿತಿಮೀರಿ ಹೆಚ್ಚಾಗುವ ಸಾಧ್ಯತೆ ಇದೆ. ಇದು ಅಸೋಚಾಂ ವರದಿ.
ಬೇಳೆಕಾಳುಗಳ ಉತ್ಪಾದನೆ ಮತ್ತು ಅಮದು
ಬದಲಾಯಿಸಿ- 2015-16 ಉತ್ಪಾದನೆ 17.33 ದಶಲಕ್ಷ ಟನ್. ಅಮದು 5.5 ಲಕ್ಷ ಟನ್.
ಸಾಲು | ಉತ್ಪಾದನೆ | ಅಮದು | ಒಟ್ಟು ಲಭ್ಯತೆ |
---|---|---|---|
2009 | 12748 | 3036 | 15784 |
2010 | 12827 | 2493 | 15320 |
2011 | 15960 | 2905 | 18965 |
2012 | 14954 | 3494 | 18448 |
2013 | 16048 | 3388 | 19436 |
2014 | 17308 | 4108 | 21418 |
೨೦೧೬-೨೦೧೭ ಬೇಳೆಕಾಳುಗಳು
ಬದಲಾಯಿಸಿ- ಪ್ರಸಕ್ತ ವರ್ಷ ಬೇಳೆಕಾಳುಗಳ ಉತ್ಪಾದನೆಯು ಸಮೃದ್ಧವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಬೇಳೆಕಾಳುಗಳ ಉತ್ಪಾದನೆಯು ಗರಿಷ್ಠ ಮಟ್ಟದಲ್ಲಿ ಇದ್ದರೂ, ದೇಶದಲ್ಲಿನ ಬೇಡಿಕೆ ಪೂರೈಸುವ ಮಟ್ಟದಲ್ಲಿ ಪೂರೈಕೆ ಇರುವುದಿಲ್ಲ. ಎರಡರಿಂದ ಮೂರು ವರ್ಷಗಳಲ್ಲಿ ಸ್ವಾವಲಂಬನೆ ಸಾಧ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
- ಪೂರ್ವಭಾವಿ ಅಂದಾಜಿನ ಪ್ರಕಾರ, ಬೇಳೆಕಾಳುಗಳ ಉತ್ಪಾದನೆಯು 2.21 ಕೋಟಿ ಟನ್‌ಗಳಷ್ಟು ಇರಲಿದೆ. ಇದು ದೇಶದಲ್ಲಿನ ಬೇಡಿಕೆ ಪೂರೈಸಲು ಸಾಲುವುದಿಲ್ಲ. ಹೀಗಾಗಿ ಆಮದು ಮಾಡಿಕೊಳ್ಳಬೇಕಾಗುತ್ತದೆ’ ಎಂದು ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ.ಬೇಳೆಕಾಳು ಸಮೃದ್ಧ ಬೆಳೆ ನಿರೀಕ್ಷೆ: ಕೇಂದ್ರ;ಪಿಟಿಐ;25 Mar, 2017
ಆಧಾರ
ಬದಲಾಯಿಸಿ- (ವಾಣಿಜ್ಯೋದ್ಯಮ ಮಹಾಸಂಸ್ಥೆ- ಅಸೋಚಾಮ್ ವರದಿ-ಪ್ರಜಾವಾಣಿ೨೯-೪-೨೦೧೪)
ಉಲ್ಲೇಖಗಳು
ಬದಲಾಯಿಸಿ- ↑ ಆಧಾರ:ಕೃಷಿ ಸಚಿವಾಲಯ ದೆಹಲಿ:13-6-2016:ಪ್ರಜಾವಾಣಿ