ವಿಲ್ಫ್ರೆಡ್ ಎಡ್ವರ್ಡ್ ಸಾಲ್ಟರ್ ಓವನ್

ವಿಲ್ಫ್ರೆಡ್ ಎಡ್ವರ್ಡ್ ಸಾಲ್ಟರ್ ಓವನ್ (೧೮ ಮಾರ್ಚ್, ೧೮೯೩ - ೪ ನವೆಂಬರ್, ೧೯೧೮ ). ಇವರು ಇಂಗ್ಲೀಷ್ ಕವಿ ಹಾಗು ಸೈನಿಕರಾಗಿದ್ದರು. ಮೊದಲ ಜಾಗತಿಕ ಯುದ್ಧದ ಪ್ರಮುಖ ಕವಿಗಳಲ್ಲಿ ಒಬ್ಬರು. ಇವರ ವಾಸ್ತವಿಕ ಯುದ್ಧ ಕವನ, ಕಾಲುವೆ ಮತ್ತು ಅನಿಲ ಯುದ್ಧ ಭೀತಿಯ ಮೇಲೆ ತಮ್ಮ ಸ್ನೇಹಿತ ಮತ್ತು ಮಾರ್ಗದರ್ಶಿಯಾಗಿದ್ದ, ಸೈಗ್ಫ್ರೈಡ್ ಸ್ಯಾಸೂನ್ ರಿ೦ದ ಪ್ರಭಾವಿತರಾಗಿ ಬರೆದದ್ದು. ಇದರಿಂದ, ಯುದ್ಧದ ಸಮಯದಲ್ಲಿದ್ದ ಸಾರ್ವಜನಿಕ ಗ್ರಹಿಕೆ ಮತ್ತು ದೇಶಭಕ್ತಿಯ ಪದ್ಯಗಳನ್ನು ಬರೆಯಲು ಪ್ರಭಾವಿತರಾದರು.

ವಿಲ್ಫ್ರೆಡ್ ಎಡ್ವರ್ಡ್ ಸಾಲ್ಟರ್ ಓವನ್
ವಿಲ್ಫ್ರೆಡ್ ಓವನ್
ಜನನ೧೮ ಮಾರ್ಚ್ ೧೮೯೩
ಓಸ್ವೆಸ್ಟ್ರಿ, ಶ್ರಾಪ್ಷೈರ್, ಇಂಗ್ಲೆಂಡ್
ಮರಣ೪ ನವೆಂಬರ್ ೧೯೧೮
ಸಾಂಬ್ರೇ–ಓಇಸೆ ಕೆನಾಲ್, ಫ್ರ್ಯಾನ್ಸ್
ರಾಷ್ಟ್ರೀಯತೆಬ್ರಿಟಿಷ್
ಪ್ರಕಾರ/ಶೈಲಿಯುದ್ಧ ಕವಿತೆ

ಪ್ರಭಾವಗಳು
  • ಸೈಗ್ಫ್ರೈಡ್ ಸ್ಯಾಸೂನ್, ಜಾನ್ ಕೀಟ್ಸ್, ವಿಲಿಯಮ್ ವರ್ಡ್ಸ್‌ವರ್ತ್, ಹಾರೆಸ್

ವಿಲ್ಫ್ರೆಡ್ ಓವನ್ಅವರು ೧೮ ಮಾರ್ಚ್, ೧೮೯೩ ರಂದು ಪ್ಲಾಸ್ ವಿಲ್ಮೊಟ್, ವೆಸ್ಟನ್ ಲೇನ್‌ಬಳಿಯ, ಶ್ರಾಪ್‌ಶೈರ್ ಇಂಗ್ಲೆಂಡ್ಡಿನಲ್ಲಿ ಜನಿಸಿದರು. ಇವರ ವಂಶಸ್ತರು, ಇಂಗ್ಲೀಷ್ ಮತ್ತು ವೆಲ್ಶ್‌ಭಾಷೆಗಳಿಗೆ ಸೇರಿದವರಾಗಿದ್ದರು. ಇವರ ತಂದೆ ಥಾಮಸ್ ಮತ್ತು ತಾಯಿ ಹ್ಯಾರಿಯೆಟ್ ಸುಸಾನ್. ಇವರ ಪೋಷಕರಿಗೆ ನಾಲ್ಕು ಮಕ್ಕಳು. ಅವರಲ್ಲಿ ಇವರೇ ಜೇಷ್ಟ ಪುತ್ರ. ಇವರ ಒಡಹುಟ್ಟಿದವರು- ಹೆರಾಲ್ಡ್, ಕಾಲಿನ್, ಮತ್ತು ಮೇರೀ ಮಿಲರ್ಡ್ ಓವನ್. ಇವರು ತಮ್ಮ ಬಾಲ್ಯದಲ್ಲಿ, ತಮ್ಮ ಕುಟುಂಬದವರೊಡನೆ, ಇವರ ಅಜ್ಜ, ಎಡ್ವರ್ಡ್ ಶಾ ರವರ ಮನೆಯಲ್ಲಿ ವಾಸಿಸುತ್ತಿದ್ದರು. [] ಆದರೆ ಜನವರಿ, ೧೮೯೭ರಂದು ಎಡ್ವರ್ಡ್ ಶಾ ರವರ ಮರಣದಿಂದಾಗಿ ಮಾರ್ಚ್‌ ತಿಂಗಳಿನಲ್ಲಿ ಆ ಮನೆಯ ಮಾರಾಟವಾದ ಕಾರಣದಿಂದ, ವಿಲ್ಫ್ರೆಡ್‌ನ ತಂದೆ-ತಾಯಿ ಆ ಮನೆಯನ್ನು ತೊರೆದು ಬಿರ್ಕೆನ್‌ಹೆಡ್‌ನ ಹಿಂದಿನ ಬೀದಿಯಲ್ಲಿ ವಾಸಿಸತೊಡಗಿದರು. ನಂತರ, ಥಾಮಸ್ ತಾತ್ಕಾಲಿಕವಾಗಿ ರೈಲು ಕಂಪನಿಯಲ್ಲಿ ಕೆಲಸಮಾಡುತ್ತಿದ್ದರು. ಏಪ್ರಿಲ್‌ ತಿಂಗಳಿನಲ್ಲಿ, ಥಾಮಸ್‌ರಿಗೆ ಶ್ರೆವ್ಸ್‌ಬರಿಗೆ ವರ್ಗಾವಣೆಯಾಯಿತು. ಅಲ್ಲಿಯ ಕ್ಯಾನನ್ ಸ್ಟ್ರೀಟ್‌ನಲ್ಲಿ ಅವರ ಕುಟುಂಬ ವಾಸಿಸತೊಡಗಿತು.

೧೮೯೮ರಲ್ಲಿ ಥಾಮಸ್ ರೈಲು ನಿಲ್ದಾಣದ ಆಡಳಿತಾಧಿಕಾರಿಯಾದಾಗ, ಅವರನ್ನು ಮತ್ತೆ ಬಿರ್ಕೆನ್‌ಹೆಡ್ ವರ್ಗಾಯಿಸಲಾಯಿತು. [] ಓವನ್ ಬಿರ್ಕೆನ್‌ಹೆಡ್ ಇನ್ಸ್ಟಿಟ್ಯೂಟ್[] ಮತ್ತು ಶ್ರೂಸ್‌ಬರಿ ತಾಂತ್ರಿಕ ಶಾಲೆ(ನಂತರ ವೇಕ್ಮ್ಯಾನ್ನನ್ನು ಸ್ಕೂಲ್ ಎಂದು ಕರೆಯಲಾಗುತ್ತದೆ)ಯಲ್ಲಿ ಶಿಕ್ಷಣವನ್ನು ಪಡೆದರು.

ಅವರಿಗೆ ಕಾವ್ಯದಬಗ್ಗೆ ಇದ್ದ ಒಲವನ್ನು, ೧೯೦೩ ಮತ್ತು ೧೯೦೪ ರಲ್ಲಿ ಚೆಷೈರ್ನಲ್ಲಿ ಕಳೆದ ರಜಾ ಸಮಯದಲ್ಲಿ ತಿಳಿದುಕೊಂಡರು. ಓವನ್, ಇವ್ಯಾಂಜೆಲಿಕಲ್ ಶಾಲೆಯ ಆಂಗ್ಲಿಕನ್ ಆಗಿ ಬೆಳೆದರು. ಅವರ ಆರಂಭಿಕ ಜೀವನದಲ್ಲಿ ಬೈಬಲ್ ಮತ್ತು ಜಾನ್ ಕೀಟ್ಸ್ ಅವರ "ಬಿಗ್ ಸಿಕ್ಸ್" ಪ್ರಣಯಕವನ ತುಂಬ ಪ್ರಭಾವಿತವಾಯಿತು.

ಓವನ್ ಕೊನೆಯ ಎರಡು ವರ್ಷಗಳ ಸಾಂಪ್ರದಾಯಿಕ ಶಿಕ್ಷಣವೂ, ಶ್ರೆವ್ಸ್‌ಬರಿಯ ವೈಲೆ ಕಾಪ್ ಶಾಲೆಯಲ್ಲಿ ವಿದ್ಯಾರ್ಥಿ-ಶಿಕ್ಷಕ ದೃಷ್ಟಿಯಿಂದ ನಡೆಯಿತು.[] ೧೯೧೧ರಲ್ಲಿ ಇವರು ಮೆಟ್ರಿಕ್ಯುಲೇಷನ್ನನ್ನು ಯೂನಿವರ್ಸಿಟಿ ಆಫ್ ಲಂಡನ್ನಿನಿಂದ ಪಡೆದರು, ಆದರೆ ಇವರು ಮೊದಲ ದರ್ಜೆಯಲ್ಲಿ ಉತ್ತೀಣ౯ರಾಗದ ಕಾರಣದಿಂದ, ವಿದ್ಯಾರ್ಥಿವೇತಕ್ಕೆ ಅಹ౯ರಾಗಲಿಲ್ಲ. ಆದರೆ ಈ ವಿದ್ಯಾರ್ಥಿವೇತನವೊಂದೇ ಆ ಸಂದರ್ಭಗಳಲ್ಲಿ ಅವರು ಕಾಲೇಜಿಗೆ ಹಾಜರಾಗಲು ಸಹಾಯಮಾಡುತ್ತಿದ್ದದ್ದು, ಆದರೆ, ಓವನ್‌ರವರು ಇದನ್ನು ಪಡೆಯಲು ವಿಫಲರಾದರು.

ಓವನ್ ಪ್ರತಿಯಾಗಿ ಉಚಿತ ಊಟಕ್ಕೆ ಮತ್ತು ಪ್ರವೇಶ ಪರೀಕ್ಷೆಯ ಓದಿಗಾಗಿ ರೀಡಿಂಗ್‌ನ, ವಿಕರ್ ಆಫ್ ಡುನ್ಸ್‌ಡನ್‌ನ ಸಹಾಯಕನಾಗಿ ಕೆಲಸವನ್ನು ಮಾಡಿದರು. ಈ ಸಮಯದಲ್ಲಿ ಅವರು, ವಿಶ್ವವಿದ್ಯಾಲಯದ ಕಾಲೇಜಿನ ಸಸ್ಯಶಾಸ್ತ್ರವಿಭಾಗಕಕ್ಕೆ ಹಾಜರಾಗುತ್ತಿದ್ದರು ಹಾಗೆ, ಇಂಗ್ಲೀಷ್ ವಿಭಾಗದ ಮುಖ್ಯಸ್ಥರ ಒತ್ತಾಯದ ಮೇರೆಗೆ ಪ್ರಾಚೀನ ಇಂಗ್ಲೀಷ್ ಅಭ್ಯಾಸವನ್ನು ಉಚಿತವಾಗಿ ಪಡೆದರು.

೧೯೧೨ರಿಂದ ಅವರು ಇಂಗ್ಲೀಷ್ ಮತ್ತು ಫ್ರೆಂಚ್ ಖಾಸಗಿ ಶಿಕ್ಷಕರಾಗಿ ಬೋರ್‌ಡಿಯಾ‌ದ ಬರ್‌ಲಿಟ್ಸ್ ಸ್ಕೂಲ್ ಆಫ್ ಲ್ಯಾಂಗ್ವೇಜಸ್, ಫ್ರ್ಯಾನ್ಸ್‌ನಲ್ಲಿ ಕೆಲಸ ಮಾಡಿದರು. ಅಲ್ಲಿ ಅವರು ಹಳೆಯ ಫ್ರೆಂಚ್ ಕವಿ, ಲಾರೆಂಟ್ ಟೈಳ್‌ಹೇಡ್ ಅವರನ್ನು ಭೇಟಿಯಾದರು. ನಂತರ ಅವರ ಜೊತೆಯಲ್ಲಿ ಪತ್ರವ್ಯವಹಾರವನ್ನು ಹೊಂದಿದರು. ಯುದ್ಧ ಪ್ರಾರಂಭವದಾಗ, ಓವನ್ ಅದರಲ್ಲಿ ಭಾಗವಹಿಸದೆ, ಇಂಗ್ಲೆಂಡ್‌ಗೆ ಮರಳಿದರು.

ಯುದ್ಧ ಸೇವೆ

ಬದಲಾಯಿಸಿ

೨೧ ಅಕ್ಟೋಬರ್, ೧೯೧೫ರಲ್ಲಿ ಅವರು ಆರ್ಟಿಸ್ಟ್‌ಸ್ ರೈಫಲ್ಸ್ ಆಫೀಸರ್ಸ್ ಟ್ರೇನಿಂಗ ಕಾರ್ಪ್ಸ್ ಗೆ ಸೇರಿದರು. ಮುಂದಿನ ಏಳು ತಿಂಗಳುಗಳ ಕಾಲ, ಅವರು ಎಸೆಕ್ಸ್‌ನ, ಹೇರ್ ಹಾಲ್ ಕ್ಯಾಂಪ್‌ನಲ್ಲಿ ತರಬೇತಿ ಪಡೆದರು. ೪ ಜೂನ್, ೧೯೧೬ ರಂದು ಅವರು ಮ್ಯಾಂಚೆಸ್ಟರ್ ರೆಜಿಮೆಂಟ್‌ನಲ್ಲಿ, ಎರಡನೇ ಸೇನಾಧಿಕಾರಿಯಾಗಿ ಅಧಿಕಾರ ಪಡೆದರು.[] ಮೊದಲಿಗೆ, ಅವರು ತಮ್ಮ ಪಡೆಗಳ ಮುಖ್ಯಸ್ಥನಾಗಿ, ಅವರ ವರ್ತನೆಯನ್ನು ನಿಂದಿಸುತ್ತಿದ್ದರು ಹಾಗೆ, ತನ್ನ ತಾಯಿಗೆ ಬರೆದ ಪತ್ರದಲ್ಲಿ, ಇವರು ತನ್ನ ಪಡೆಯನ್ನು "ಭಾವವಿಲ್ಲದ ಗಡ್ಡೆ" ಎಂದು ವಿವರಿಸಿದ್ದರು. ಆದರೆ, ತನ್ನ ಕಾಲ್ಪನಿಕ ಅಸ್ತಿತ್ವದ ಆಘಾತಕಾರಿ ಅನುಭವಗಳನ್ನು ನಾಟಕೀಯವಾಗಿ ಬದಲಾಯಿಸಿದರು. ಅವರು ಒಂದು ಶೆಲ್ ಹಳ್ಳಕ್ಕೆ ಬಿದ್ದು, ಆಘಾತದಿಂದ ನರಳಿದರು. ಇದಾದ ಕೂಡಲೇ, ಓವನ್ ನರದೌರ್ಬಲ್ಯದಿಂದ ಬಳಲುತಿದ್ದಾರೆಂದು ತಿಳಿದು ಚಿಕಿತ್ಸೆಗಾಗಿ ಎಡಿನ್ ಕ್ರೈಗ್ಲಾಕ್‌ಹಾರ್ಟ್‌ವಾರ್ ಆಸ್ಪತ್ರೆಗೆ ಕಳುಹಿಸಲಾಯಿತು. ಅವರು ಕ್ರೈಗ್ಲಾಕ್‌ಹಾರ್ಟ್ನಲ್ಲಿ ಚೇತರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ, ಸೈಗ್ಫ್ರೈಡ್ ಸ್ಯಾಸೂನನ್ನು ಭೇಟಿಯಾದರು, ಇದು ಓವನ್ ಜೀವನದಲ್ಲಿ ಒಂದು ರೂಪಾಂತರ ಪಡೆಯಿತು. ಇನ್ನೊಂದೆಡೆ ಕ್ರೈಗ್ಲಾಕ್‌ಹಾರ್ಟ್‌ನಲ್ಲಿ ಇದ್ದಾಗ, ಎಡಿನ್‌ಬರ್ಗ್‌‌ನ ಕಲಾತ್ಮಕ ಮತ್ತು ಸಾಹಿತ್ಯಕ ವಲಯಗಳಲ್ಲಿದ್ದವರ ಜೊತೆ ತಮ್ಮ ಸ್ನೇಹವನ್ನು ಬೆಳೆಸಿದರು ಮತ್ತು ಟೈನ್ಕ್ಯಾಸಲ್ ಪ್ರೌಢಶಾಲೆಯಲ್ಲಿ ಬೋಧನೆ ಮಾಡಿದರು. ನವೆಂಬರ್‌ತಿಂಗಳಿನಲ್ಲಿ, ಅವರನ್ನು ಕ್ರೈಗ್ಲಾಕ್‌ಹಾರ್ಟ್‌ನಿಂದ ಬಿಡುಗಡೆ ಮಾಡಲಾಯಿತು. ಅವರು ಸ್ಕಾರ್ಬರೊ, ಉತ್ತರ ಯೊಕ್‌ಷಯರ್‌ನಲ್ಲಿ ಚಳಿಗಾಲವನ್ನು ಕಳೆದು, ನಂತರ ಮಾರ್ಚ್ ೧೯೧೮ ರಿಪ್ಪನ್‌ನಲ್ಲಿ ಅವರನ್ನು ನಾರ್ತರ್ನ್ ಕಮಾಂಡ್ ಡಿಪೋಗೆ ಕಳುಹಿಸಲಾಯಿತು. ರಿಪ್ಪನ್ ಸಂದರ್ಭದಲ್ಲಿ ಅವರು " ಫ್ಯುಟಿಲಿಟಿ " ಮತ್ತು " ಸ್ಟ್ರೇಂಜ್ ಮೀಟಿಂಗ್ " ಸೇರಿದಂತೆ ಕೆಲವು ಕವನಗಳನ್ನು ಸಂಯೋಜಿಸಿದರು.

ಜುಲೈ ೧೯೧೮ ರಲ್ಲಿ, ಓವನ್ ಫ್ರಾನ್ಸ್ ಸಕ್ರಿಯ ಸೇವೆಗೆ ಮರಳಿದರು. ೧ ಅಕ್ಟೋಬರ್, ೧೯೧೮ ರಂದು ಓವನ್ ಜಾಂಗ್‌ಕೋರ್ಟ್ ಗ್ರಾಮದ ಬಳಿ ಎರಡನೇ ಮ್ಯಾನ್‌ಚೆಸ್ಟರ್ಸ್ ಘಟಕಗಳಿಂದ ಶತ್ರುಗಳನ್ನು ಸದೆಬಡಿದರು. ಜಾಂಗ್‌ಕೋರ್ಟ್ ಕ್ರಿಯೆಯಲ್ಲಿ ತನ್ನ ಧೈರ್ಯ ಮತ್ತು ನಾಯಕತ್ವವನ್ನು ಮೆಚ್ಚಿ ಅವರಿಗೆ ಮಿಲಿಟರಿ ಕ್ರಾಸ್ ಪ್ರಶಸ್ತಿಯನ್ನು ನೀಡಲಾಯಿತು. ಅವರು ಯಾವಾಗಲೂ ತನ್ನನ್ನು ಒಂದು ಯುದ್ಧ ಕವಿಯಾಗಿ ಸಮರ್ಥಿಸಲು ಬಯಸಿದ್ದರು. ಆದರೆ ಪ್ರಶಸ್ತಿ ೧೫ ಫೆಬ್ರವರಿ ೧೯೧೯ ರವರೆಗೆ ಸರ್ಕಾರಿ ಗೆಜೆಟ್ಟಿನಲ್ಲಿ ಪ್ರಕಟಿಸಿರಲಿಲ್ಲ.[]

ಓರ್ಸ್ ಕಮ್ಯೂನಲ್ ಸ್ಮಶಾನದಲ್ಲಿ ಓವನ್ ರ ಸಮಾಧಿ
 

ಓವನ್‌ರ ಮರಣ ೪ ನವೆಂಬರ್, ೧೯೧೮ರಂದು ಸಾಂಬ್ರೇ - ಓಇಸೆ ಕೆನಾಲ್ ಅಲ್ಲಿ ಸಂಭವಿಸಿತು. ಅವರ ತಾಯಿ ಕದನವಿರಾಮದ ದಿನ ಓವನ್ ಸಾವಿನ ಮಾಹಿತಿಯನ್ನು ಟೆಲಿಗ್ರಾಮಿನ ಮೂಲಕ ಸ್ವೀಕರಿಸಿದರು. ಅವರ ಸಮಾಧಿ ಓರ್ಸ್ ಕಮ್ಯೂನಲ್ ಸ್ಮಶಾನದಲ್ಲಿದೆ.[]

ಕೃತಿಗಳು

ಬದಲಾಯಿಸಿ
  • "ದುಲ್ಸೆ ಎಟ್ ಡಿಕಾರಮ್ ಎಸ್ಟ್"
  • "ಇನ್‌ಸೆನ್‌ಸಿಬಿಲಿಟೀ"
  • "ಆಂತಮ್ ಫಾರ್ ಡೂಮ್ಡ್ ಯೂತ್"[]
  • "ಫ್ಯೂಟಿಲಿಟೀ"
  • "ಸ್ಟ್ರೇಂಜ್ ಮೀಟಿಂಗ್".

ಉಲ್ಲೇಖಗಳು

ಬದಲಾಯಿಸಿ
  1. Wilfred Owen, A Biography. pp. 13–14.
  2. Wilfred Owen, A Biography. pp. 35–36.
  3. "Wilfred Owen - Spirit of Birkenhead Institute". Retrieved 25 July 2012.
  4. Dickins, Gordon (1987). An Illustrated Literary Guide to Shropshire. Shropshire Libraries. p. 54. ISBN 0-903802-37-6.
  5. The London Gazette: (Supplement) no. 29617. p. 5726. 6 June 1916. Retrieved 3 June 2009.
  6. The London Gazette: (Supplement) no. 31183. p. 2378. 14 February 1919. Retrieved 11 November 2009.
  7. Owen's grave, www.1914–18.co.uk. Accessed 5 December 2008.
  8. "Poetry Season – Poems – Anthem For Doomed Youth by Wilfred Owen". BBC. Retrieved 2 April 2012.


ಹೊರಗಿನ ಸಂಪರ್ಕಗಳು

ಬದಲಾಯಿಸಿ