ವಿಪ್ರಚಿತ್ತಿ
ವಿಪ್ರಚಿತ್ತಿ ಹಿಂದೂ ಪಠ್ಯದಲ್ಲಿ ಕಾಣಿಸಿಕೊಂಡಿರುವ ದಾನವ. ಈತ ಕಶ್ಯಪ ಮತ್ತು ದನುವಿನ ಮಗ. [೧] ಮಹಾಭಾರತದ ಪ್ರಕಾರ, ಇಂದ್ರನು ವಿಪ್ರಚಿತ್ತಿಯ ಸಹೋದರನಾದ ಪುಲೋಮನನ್ನು ಕೊಂದ ನಂತರ ವಿಪ್ರಚಿತ್ತಿ ದಾನವರ ರಾಜನಾಗುತ್ತಾನೆ. ವಿಪ್ರಚಿತ್ತಿಯು ಹಿರಣ್ಯಕಶಿಪುವಿನ ಸಹೋದರಿ ಮತ್ತು ದಿತಿಯ ಮಗಳಾದ ಸಿಂಹಿಕಾಳನ್ನು ಮದುವೆಯಾಗುತ್ತಾನೆ. ಆದ್ದರಿಂದ, ಅವರು ಒಂದೇ ತಂದೆಯ (ಕಶ್ಯಪ) ಮತ್ತು ವಿಭಿನ್ನ ತಾಯಂದಿರ (ದಿತಿ - ಸಿಂಹಿಕಾ/ಹೋಲಿಕಾ ಮತ್ತು ದನು - ವಿಪ್ರಚಿತ್ತಿ) ಮಕ್ಕಳಾಗುತ್ತಾರೆ.
ಅವನಿಗೆ ಸ್ವರ್ಭಾನು ಎಂಬ ಮಗನಿದ್ದಾನೆ. ಅವನ ಸೈನ್ಯವು ಸ್ವರ್ಭಾನುವಿನ ಮಾರ್ಗದರ್ಶನದಲ್ಲಿ ದೇವತೆಗಳನ್ನು ಸೋಲಿಸಿತು ಎಂದು ಹೇಳಲಾಗುತ್ತದೆ.
ಅವನು ಮತ್ತು ಅವನ ೧೩ ಪುತ್ರರನ್ನು ಕಾಳಿಯ ಅವತಾರವಾದ ರಕ್ತದಂತಿಕಾ ದೇವಿಯು ಕೊಂದಳು.
ಅವತಾರ
ಬದಲಾಯಿಸಿವಿಪ್ರಚಿತ್ತಿಯು ಮಹಾಭಾರತದಲ್ಲಿ ಮುಂದೆ ಜರಾಸಂಧನಾಗಿ ಅವತರಿಸುತ್ತಾನೆ.
ಸಹ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ A Classical Dictionary of India, p. 173