ವಿಜಯಾ ದಬ್ಬೆ :- ಕನ್ನಡದ ಮೊಟ್ಟ ಮೊದಲ ಸ್ತ್ರೀವಾದಿ ಪ್ರವರ್ತಕ ಲೇಖಕಿ ಎಂಬ ಅಗ್ಗಳಿಕೆ ಇವರದು. ವಿಜಯಾ ದಬ್ಬೆಯವರು ಹಾಸನ ಜಿಲ್ಲೆಯ ಬೇಲೂರಿನ ದಬ್ಬೆಯಲ್ಲಿ ೧೯೫೧ ಜೂನ್ ೧ ರಂದು ಜನಿಸಿದರು[೧].[೨] ದಿನಾಂಕ 23.02.2018 ಸಂಜೆ ನಿಧನರಾದರು[೩][೪].[೫][೬]

ಇವರು ೧೨ಕ್ಕೂ ಹೆಚ್ಚು ಕೃತಿಗಳನ್ನು ಹಾಗು ೬೦ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಇರುತ್ತವೆ ಕವನ ಸಂಕಲನಕ್ಕೆ ಉದಯೋನ್ಮುಖ ವರ್ಧಮಾನ ಪ್ರಶಸ್ತಿ ಲಭಿಸಿದೆ. ಇವರ ಇತಿಗೀತಿಕೆ ಕವನಸಂಕಲನಕ್ಕೆ ಧಾರವಾಡಕರ್ನಾಟಕ ವಿದ್ಯಾವರ್ಧಕ ಸಂಘ೧೯೯೬ರ ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ನಿಧಿಯ ತೃತೀಯ ಬಹುಮಾನ ಲಭಿಸಿದೆ.[೭]

ವಿಜಯಾ ದಬ್ಬೆಯವರು ಮೈಸೂರು ವಿಶ್ವವಿದ್ಯಾಲಯಮಾನಸ ಗಂಗೋತ್ರಿಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕಿಯಾಗಿದ್ದು, ಪುಸ್ತಕ ಪ್ರಕಟಣೆ ಸಾಹಿತ್ಯ ಪತ್ರಿಕೆಯ ಸಂಪಾದಕಿ ಸಹ ಆಗಿದ್ದರು.

ಪ್ರಶಸ್ತಿಗಳು ಬದಲಾಯಿಸಿ

 • ಕರ್ನಾಟಕ ಸರ್ಕಾರದ "ಅತ್ತಿಮಬ್ಬೆ ಪ್ರಶಸ್ತಿ"
 • ಕರ್ನಾಟಕ ಲೇಖಕಿಯರ ಸಂಘದ "ಅನುಪಮಾ ಪ್ರಶಸ್ತಿ"
 • ಕರ್ನಾಟಕ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ
 • ವರ್ಧಮಾನ ಪ್ರಶಸ್ತಿ
 • ರತ್ನಮ್ಮ ಹೆಗಡೆ ಪ್ರಶಸ್ತಿ
 • ಕನ್ನಡ ಸಾಹಿತ್ಯ ಪರಿಷತ್ತಿನ ಹಲವಾರು ದತ್ತಿ ಪ್ರಶಸ್ತಿಗಳು[೮]

ಕವನ ಸಂಕಲನಗಳು ಬದಲಾಯಿಸಿ

 • ಇರುತ್ತವೆ.(೧೯೭೫)
 • ನೀರು ಲೋಹದ ಚಿಂತೆ.(೧೯೮೫)
 • ತಿರುಗಿ ನಿಂತ ಪ್ರಶ್ನೆ.(೧೯೯೫)

ಪ್ರವಾಸ ಕಥನ ಬದಲಾಯಿಸಿ

 • ಉರಿಯ ಚಿಗುರು ಉತ್ಕಲೆ.

ಸಂಶೋಧನೆ ಬದಲಾಯಿಸಿ

 • ನಯಸೇನ
 • ನಾಗಚಂದ್ರ ಒಂದು ಅಧ್ಯಯನ -(ಪಿಎಚ್ ಡಿ ಪ್ರಬಂಧ)
 • ಹಿತೈಷಿಯ ಹೆಜ್ಜೆಗಳು
 • ಸಾರಸರಸ್ವತಿ
 • ಹಿತೋಫಿಯಾ ಹೆಜ್ಜೆಗಳು.

ವಿಮರ್ಶನ ಸಾಹಿತ್ಯ ಬದಲಾಯಿಸಿ

 • ಮಹಿಳಾ ಸಾಹಿತ್ಯ ಸಮಾಜ
 • ನಾರಿ ದಾರಿ ದಿಗಂತ(೧೯೭೭)
 • ಮಹಿಳೆ ಮತ್ತು ಮಾನವತೆ
 • ಸಂಪ್ರತಿ

ಸಂಪಾದನೆಗಳು ಬದಲಾಯಿಸಿ

 • ಶ್ಯಾಮಲಾ ಸಂಚಯ
 • ಹಿತೈಷಿಣಿಯ ಹೆಜ್ಜೆಗಳು
 • ಸಾರಸರಸ್ವತಿ
 • ವಿಜಯಾದಬ್ಬೆಯವರ ಸಮಗ್ರ ಸಾಹಿತ್ಯವನ್ನು ಅವರ ಶಿಷ್ಯೆ ಪ್ರೊ.ಎಸ್.ಡಿ.ಶಶಿಕಲಾ ಅವರು ಸಂಪಾದಿದ್ದಾರೆ.

ಅನುವಾದಗಳು ಬದಲಾಯಿಸಿ

 • ಮೇರಿ ಮೆಕ್ಲಿಯಾದ್ ಬೆಥೂನೆ
 • ವಿಮೋಚನೆಯೆಡೆಗೆ
 • ಗುರುಜಾಡ

ಉಲ್ಲೇಖಗಳು ಬದಲಾಯಿಸಿ