ವಿಜಯದನ್ ದೆತ
ವಿಜಯದನ್ ದೆತ
ವಿಜಯದನ್ ದೆತ | |
---|---|
ಜನನ | ಬೊರುಂಡ, ಬ್ರಿಟೀಷ್ ಇಂಡಿಯ (ಈಗಿನ ರಾಜಸ್ಥಾನ, ಭಾರತ) | ೧ ಸೆಪ್ಟೆಂಬರ್ ೧೯೨೬
ಮರಣ | 10 November 2013 | (aged 87)
ಕಾವ್ಯನಾಮ | ಬಿಜ್ಜಿ |
ವೃತ್ತಿ | ಬರಹಗಾರರು |
ರಾಷ್ಟ್ರೀಯತೆ | ಭಾರತೀಯ |
ವಿಷಯ | ಸಾಮಾಜಿಕ ಕಾರ್ಯಕರ್ತ. |
ಬಾಳ ಸಂಗಾತಿ | ಸಯರ್ ಕನ್‍ವರ್ |
ಮಕ್ಕಳು | ಕುಬರ್ದನ್, ಮಹೇಂದ್ರ |
ಪ್ರಭಾವಗಳು
|
ವಿಜಯದನ್ ದೆತ (೧ ಸೆಪ್ಟೆಂಬರ್ ೧೯೨೬ - ೧೦ ನವೆಂಬರ್ ೨೦೧೩), "ಬಿಜ್ಜಿ" ಎಂಬ ಹೆಸರಿನಿಂದ ಪ್ರಖ್ಯಾತರಾಗಿದ್ದ ಇವರು ರಾಜಸ್ಥಾನದವರು ಹಾಗು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು[೧]. ಇವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ಇನ್ನು ಹಲವಾರು ಪುರಸ್ಕಾರಗಳಿಗೆ ಬಾಜನರಾಗಿದ್ದಾರೆ.
ಇವರ ೮೦೦ಕ್ಕೂ ಹೆಚ್ಚು ಸಣ್ಣ ಕಥೆಗಳು ಆಂಗ್ಲ ಮತ್ತು ಇತರೆ ಭಾಷೆಗಳಿಗೆ ಅನುವಾದಗೊಂಡಿವೆ. ಕೊಮಲ್ ಕೊಥಾರಿಯವರೊಂದಿಗೆ "ರುಪಾಯನ್ ಸಂಸ್ಥನ್" ಎಂಬ ಜನಪದ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದರು. ಇದು ರಾಜಸ್ಥಾನಿ ಜನಪದ ಕಥೆಗಳು, ಕಲೆ ಹಾಗು ಸಾಹಿತ್ಯವನ್ನು ಉಳಿಸಿ ಬೆಳೆಸುವ ಸಂಸ್ಥೆಯಾಗಿದೆ. ಇವರ ಸಾಹಿತ್ಯ ಕೊಡುಗೆಗಳಲ್ಲಿ ಒಂದಾದ "ಬತಾನ್ ರಿ ಫುಲ್ವರಿ" (ಕಥೆಗಳ ತೋಟ) ೧೪ ಸಂಕಲನಗಳು ರಾಜಸ್ಥಾನಿ ಆಡು ಭಾಷೆಯನ್ನು ಬಿಂಬಿಸಿದೆ. ಇವರ ಹಲವು ಕಥೆಗಳು, ಕಾದಂಬರಿಗಳು ಮತ್ತು ನಾಟಕಗಳು, ಚಿತ್ರಕಥೆಗಳಾಗಿ ಮೂಡಿ ಬಂದಿವೆ. ಹಬಿಬ್ ತನ್ವಿರ್‍ರವರ "ಚರಣ್ ದಾಸ್ ಚೊರ್", ಪ್ರಕಾಶ್ ಜ ರವರ "ಪರಿನತಿ", ಅಮೊಲ್ ಪಲೆಕರ್‍ರವರ "ಪಹೆಲಿ" ಮತ್ತು ಮನಿ ಕೌಲ್‍ರವರ "ದುವಿದ" ಪ್ರಮುಖ ಚಿತ್ರಗಳಾಗಿವೆ.
ಜೀವನ ಚರಿತ್ರೆ
ಬದಲಾಯಿಸಿವಿಜಯದನ್ ದೆತ "ಚರನ್" ಜಾತಿಗೆ ಸೇರಿದವರು. ಅವರ ತಂದೆ ಶೊಬಲ್ದನ್‍ದೆತ ಹಾಗು ತಾತ ಜುಗ್ತಿದನ್‍ದೆತರವರು ಪ್ರಖ್ಯಾತ ರಾಜಸ್ಥಾನಿ ಸಾಹಿತಿಗಳಾಗಿದ್ದವರು. ದೆತರವರು ತಮ್ಮ ತಂದೆ ಹಾಗು ಇಬ್ಬರು ತಮ್ಮಂದಿರನ್ನು ತಮ್ಮ ನಾಲ್ಕನೇ ವಯಸ್ಸಿನಲ್ಲೇ ಕಳೆದುಕೊಂಡರು. ಆರನೇ ವಯಸ್ಸಿನಲ್ಲಿ ತಮ್ಮ ಅಣ್ಣ ಸಿವಿಲ್ ನ್ಯಾಯಲಯದಲ್ಲಿ ಕೆಲಸ ನಿರ್ವಹಿಸುತಿದ್ದರಿಂದ, ಜೈತರನ್ ನಗರಕ್ಕೆ (ಬೊರುಂದ ದಿಂದ ೨೫ ಕೀ.ಮಿ.) ಸ್ಥಳಾಂತರಗೊಂಡರು. ಅಲ್ಲಿ ಅವರು ಐದನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದರು. ನಂತರ ಅವರ ಅಣ್ಣನದ್ದು ವರ್ಗಾವಣೆ ಕೆಲಸವಾದ್ದರಿಂದ ಅವರು ಸ್ಥಳಾಂತರಗೊಳ್ಳುವ ಪರಿಸ್ಥಿತಿ ಬರುತ್ತಿತ್ತು. ವಿಜಯದನ್‍ರವರು ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಬಿಹಾರ ಮತ್ತು ಬರ್ಮೆರ್‍ನಲ್ಲಿ ಮುಗಿಸಿದರು. ದೆತ ತಮ್ಮ ಶಾಲಾ ದಿನಗಳಲ್ಲಿ ಆಂಗ್ಲ ಭಾಷೆಯಲ್ಲಿ ಅಷ್ಟು ಪರಿಣತಿ ಹೊಂದಿರಲಿಲ್ಲ. ಆದ್ದರಿಂದ ಅವರು ಎಷ್ಟೋ ಅವಮಾನಗಳನ್ನು ಕಂಡಿದ್ದರು. ಬರ್ಮೆರ್‍ನಲ್ಲಿ ನರ್ಸಿಂಗ್ ರಾಜಪುರೋಹಿತ್ ಎಂಬ ವಿದ್ಯಾರ್ಥಿಯೊಂದಿಗೆ ಸ್ಪರ್ಧಿಸುತ್ತಿರುವಾಗ ನಾನೊಬ್ಬ ಬರಹಗಾರನಾಗಬೇಕೆಂಬ ಚಲ ಮೂಡಿತು. ಅನಂತರ ತಮ್ಮ ಅಣ್ಣ ಜೊದ್‍ಪುರಕ್ಕೆ ವರ್ಗಾವಣೆಗೊಂಡರು ಹಾಗು ದೆತ ಅಲ್ಲೇ ದರ್ಬರ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು.[೨]. ವಿಜಯದನ್ ದೆತ, ಸರತ್ ಚಂದ್ರ ಚಟ್ಟೋಪಾಧ್ಯಾಯ್‍ರವರನ್ನು ತಮ್ಮ ಮೊದಲ ಸ್ಪೂರ್ತಿಯನ್ನಾಗಿ ಸ್ವೀಕರಿಸಿದರು. ದೆತ ಆಂಟನ್ ಚೆಕೊವ್ ಅವರ ದೊಡ್ಡ ಅಭಿಮಾನಿ. ಮೊದಲು ಟಾಗೊರ್ ಅವರ ದೋಷದರ್ಶಿಯಾಗಿದ್ದ ದೆತ, ಅವರ "ಸ್ತ್ರೀಪತ್ರ" ಕೃತಿ ಓದಿದ ಬಳಿಕ ಅವರ ಅಭಿಮಾನಿಯಾಗಿದರು. ದೆತ ರವರು ೧೯೪೪ರಲ್ಲಿ ಕಾಲೇಜು ಸೇರಿದರು. ಅಷ್ಟರಲ್ಲಿ ಕವಿಯಾಗಿ ಹೆಸರು ಗಳಿಸಿದ್ದ ದೆತ, ೧೦ನೇ ತರಗತಿಯಲ್ಲಿ ಶಾಲೆ ತ್ಯಜಿಸಿದ್ದ ತಮ್ಮ ಅಣ್ಣ ಕುಬೆರ್ದನ್ ದೆತಗೆ ಅಭಿನಂದನೆ ಸಲ್ಲಿಸುತ್ತಾರೆ. ವಿಜಯದನ್ ಮೊದಲು ತಮ್ಮ ಅಣ್ಣ ಬರೆಯುತಿದ್ದ ಪದ್ಯಗಳನ್ನು ತಮ್ಮ ಹೆಸರಿನಲ್ಲಿ ಪ್ರಕಟಿಸುತ್ತಿದ್ದರು. ಅದರಿಂದ ಬಂದ ಜನರ ಮೆಚ್ಚುಗೆಗಳನ್ನು ಕಂಡ ನಂತರ ತಾವೆ ಸ್ವಂತವಾಗಿ ಬರೆಯಲು ಪ್ರಾರಂಭಿಸಿದರು. ದೊಡ್ಡ ನಿರೀಕ್ಷೆಯನ್ನು ಹುಟ್ಟು ಹಾಕಿದ ಅವರ ಮೊದಲ ಕೃತಿ ಎಂದರೆ "ಬಪು ಕೆ ತೀನ್ ಹತ್ಯರೆ". ಈ ಪುಸ್ತಕವು ಹರಿವನ್ಶರೈ ಬಚ್ಚನ್, ಸುಮಿತ್ರಾನಂದನ ಪಂತ್ ಮತ್ತು ನರೇಂದ್ರ ಶರ್ಮರ ವಿಮರ್ಶೆಯಾಗಿತ್ತು. ಇವು ಮಹಾತ್ಮ ಗಾಂಧಿ ಸತ್ತು ಹೋದ ಎರಡು ತಿಂಗಳಲ್ಲಿ ಬಂದ ಪುಸ್ತಕಗಳು.
" ನಾತುರಾಮ ಗೊಡ್ಸೆ ಗಾಂಧಿಯವರನ್ನು ಶಾರೀಕವಾಗಿ ಕೊಂದರೆ, ಈ ಮೂರು ಬರಹಗಾರರು ಅವರ ಆತ್ಮವನ್ನು ಕೊಂದರು" - ವಿಜಯದನ್ ದೆತ, ಬಪು ಕೆ ತೀನ್ ಹತ್ಯರೆ
೧೯೫೦- ೫೨ರಲ್ಲಿ ದೆತರವರು ೧೯ನೇ ಶತಮಾನದ ರಷಿಯಾ ಸಾಹಿತ್ಯದಿಂದ ಸ್ಪೂರ್ತಿ ಪಡೆದಿದ್ದರು. ಈ ಸಂದರ್ಭದಲ್ಲಿ ಅವರು, "ನೀನು ಮಧ್ಯಮ ವರ್ಗದ (ಸಾಧಾರಣ) ಬರಹಗಾರನಾಗ ಬಾರದೆಂದರೆ, ನಿನ್ನ ಹಳ್ಳಿಗೆ ಹಿಂದಿರುಗಿ ರಾಜಸ್ತಾನಿಯಲ್ಲಿ ಬರೆಯಬೇಕು" ಎಂದು ಆಲೋಚಿಸಿದರು. ಆ ಸಮಯದಲ್ಲಾಗಲೆ ಅವರು ೧೩೦೦ ಪದ್ಯಗಳು ಹಾಗು ೩೦೦ ಸಣ್ಣ ಕಥೆಗಳನ್ನು ಬರೆದಿದ್ದರು. ೧೯೭೩ರಲ್ಲಿ ಪ್ರಸಿದ್ಧ ಚಿತ್ರ ನಿರ್ದೆಶಕ ಮನಿ ಕೌಲ್, ದೆತಾ ರ ಕಥೆ "ದುವಿಧ" ಆಧರಿತ "ದುವಿಧ" ಎಂಬ ಚಿತ್ರ ನಿರ್ದೇಶಿಸಿದರು. ಈ ಚಿತ್ರಕ್ಕೆ ಪ್ರಂಪಚದಾದ್ಯಂತ ಮೆಚ್ಚುಗೆ ದೊರೆಯಿತು. ಈ ಚಿತ್ರದ ಬಹುತೇಕ ಭಾಗ ದೆತಾರವರ ಊರಾದ ಬೊರುಂದಯಲ್ಲಿಯೇ ಚಿತ್ರಿಸಲಾಗಿತ್ತು. ನಂತರ ಶಾರುಖ್ ಖಾನ್ (ಹಿಂದಿ ನಟ), ಇದೇ ಕಥೆಯನ್ನು ಅಮೊಲ್ ಪಲೆಕರ್ ನಿರ್ದೇಶಿಸಿದ "ಪಹೆಲಿ" ಎಂಬ ಚಿತ್ರ ಮಾಡಿದರು. ಪಹೆಲಿ ಚಿತ್ರವು ಕೂಡ ಅಕಾಡೆಮಿ ಪ್ರಶಸ್ತಿ ಸಾಲಿನಲ್ಲಿತ್ತು. ಪ್ರಕಾಶ್ ಝ ರವರು ದೆತರವರ ಒಂದು ಕಥೆ ಆಧರಿತ "ಪರಿನತಿ" ಎಂಬ ಚಿತ್ರವನ್ನು ಮಾಡಿದರು. ಹಬೀಬ್ ತನ್ವೀರ್, ದೆತ ರವರ ಒಂದು ಕಥೆಯನ್ನು ತಮ್ಮ ನಾಟಕ "ಚರನ ದಾಸ್ ಚೊರ್"ಗೆ ಅಳವಡಿಸಿಕೊಂಡರು ನಂತರ ಅದು ಶ್ಯಾಮ್ ಬೆನಗಲ್ ರವರ ಚಲನಚಿತ್ರವಾಗಿಯು ಮೂಡಿ ಬಂತು. ಹೀಗೆ ದೆತರವರ ಹಲವು ಕಥೆಗಳು ಹಾಗು ನಾಟಕಗಳು ಚಲನಚಿತ್ರವಾಗಿ ಮೂಡಿ ಬಂದಿವೆ. ಮಹೇಂದ್ರ ಲಲಸ್ ಇಂಡಿಯ ಟುಡೆಯೊಂದಿಗೆ ಮಾತನಾಡುವಾಗ, "ನನ್ನ ನಾಡು ರಾಜಸ್ಥಾನ ಕಥೆಗಳಿಂದ ತುಂಬಿದೆ, ನಾನು ಬರೆದಿರುವುದು ಆ ಸಾಗರದ ಒಂದು ಹನಿ ಅಷ್ಟೆ" ಎಂದು ಹೇಳಿದ್ದಾರೆ. ದೆತರವರು ರಾಜಸ್ತಾನಿ ಭಾಷೆಯಲ್ಲಿ ಬರೆಯಲು ಷ ಗೊವರ್ದನ್ ಲಾಲ್ ರವರೆ ಸ್ಪೂರ್ತಿ. ಇವತ್ತಿನವರೆಗೂ ನಾನು ರಾಜಸ್ತಾನಿ ಬಿಟ್ಟರೆ, ಬೇರೆ ಯಾವ ಭಾಷೆಯಲ್ಲೂ ಬರೆದಿಲ್ಲವೆಂದು ಹೇಳುವುದರ ಮೂಲಕ ಭಾಷೆ ಬಗೆಗಿನ ತಮ್ಮ ಆಭಿಮಾನ ಹಾಗು ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾರೆ. ಅವರ ನೆಚ್ಚಿನ ಲೇಖಕರೆಂದರೆ ಶರತ್ ಚಂದ್ರ ಚಟ್ಟೊಪಾದ್ಯಯ, ಆಂಟನ್ ಚೆಕೊವ್ ಮತ್ತು ರವೀಂದ್ರನಾಥ ಠಾಗೋರ್ . ದೆತರವರು ತಮ್ಮ ಬರಹಗಳಲ್ಲಿ ಬಡವರ ನೋವನ್ನು ಪ್ರತಿಬಿಂಬಿಸುತ್ತಿದ್ದರು. ದೆತರವರು ಈ ಪ್ರಪಂಚ ಕಂಡ ಒಬ್ಬ ಅದ್ಭುತ ಲೇಖಕ ಎಂದರು ಪ್ರೊಫೆಸರ್ ಗೊಪಲ್ ಭಾರದ್ವಾಜ (ಸಮಾಜ ಶಾಸ್ತ್ರ ವಿಭಾಗ, ಜಯ ನಾರಯನ ವ್ಯಾಸ ವಿಶ್ವವಿದ್ಯಾಲಯ, ಜೊದ್ ಪುರ). ದೆತರವರು ೨೦೧೧ ಸಾಲಿನ ನೊಬೆಲ್ ಪ್ರಶಸ್ತಿಗೆ ಆಯ್ಕೆ ಆಗಿದ್ದರು. ಆದರೆ ಪ್ರಶಸ್ತಿಯನ್ನು ತೊಮಸ್ ತ್ರನ್ಸ್ತ್ರೊಮೆರ್‍ಗೆ ನೀಡಲಾಯಿತು. ದೆತರವರಿಗೆ ಮೆಹ್ರನ್ಗರ್ಹ್ ವಸ್ತು ಸಂಗ್ರಹಾಲಯದ ರವ್ ಸಿಹ ಪ್ರಶಸ್ತಿಯನ್ನು ೨೪ ನವೆಂಬರ್ ೨೦೧೧ರಂದು ನೀಡಿ ಗೌರವಿಸಲಾಯಿತು. ದೆತಾರವರಿಗೆ ನಾಲ್ಕು ಜನ ಗಂಡು ಮಕ್ಕಳು ಹಾಗು ಒಬ್ಬ ಮಗಳು - ಪ್ರೆಮ್ ದನ್ ದೆತ, ಕೈಲಾಶ್ ಕಬಿರ್, ಕೌಶಲ್ಯ (ಮಗಳು), ಸತ್ಯದೆವ್ ದೆತ, ಮಹೇಂದ್ರ ದೆತ.
ಪ್ರಶಸ್ತಿಗಳು ಹಾಗು ಗೌರವಗಳು
ಬದಲಾಯಿಸಿ- ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೪)
- ಭಾರತೀಯ ಭಾಷಾ ಪರಿಷತ್ ಅವಾರ್ಡ್ (೧೯೯೨)
- ಮರುಧಾರ ಪುರಸ್ಕಾರ್ (೧೯೯೫)
- ಬಿಹಾರಿ ಪುರಸ್ಕಾರ್ (೨೦೦೨)
- ಸಾಹಿತ್ಯ ಚೂಡಾಮಣಿ ಅವಾರ್ಡ್ (೨೦೦೬)
- ಪದ್ಮಶ್ರೀ (೨೦೦೭)
- ರಾಜಸ್ಥಾನ್ ರತ್ನ (೨೦೧೨)
ಹೊರಗಿನ ಸಂಪರ್ಕಗಳು
ಬದಲಾಯಿಸಿ- http://www.imdb.com/name/nm0221880/
- http://www.wordswithoutborders.org/contributor/vijay-dan-detha/
- http://arts.gov/writers-corner/bio/christi-merrill?id=02_12 Archived 2016-03-11 ವೇಬ್ಯಾಕ್ ಮೆಷಿನ್ ನಲ್ಲಿ.
- http://archive.tehelka.com/story_main16.asp?filename=hub012106The_English.asp[ಶಾಶ್ವತವಾಗಿ ಮಡಿದ ಕೊಂಡಿ]
- http://www.indianautographs.com/productdetail-111098.html Archived 2012-02-06 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
ಬದಲಾಯಿಸಿ- ↑ "ಪದ್ಮಶ್ರೀ ಪ್ರಶಸ್ತಿ" (PDF). Archived from the original (PDF) on 2015-10-15. Retrieved 2015-11-04.
- ↑ "ಬಯೋ ಡಾಟಾ". Archived from the original on 2008-03-27. Retrieved 2015-11-04.