೧೯೮೨ರಲ್ಲಿ ಕುಂದಾಪುರ ತಾಲೂಕಿನ ಕೋಟೇಶ್ವರದ ಬಳಿಯಿರುವ ಬೀಜಾಡಿಯೆಂಬ ಪುಟ್ಟ ಗ್ರಾಮದಲ್ಲಿ ಜನನ. ತಂದೆ ಜಗನ್ನಾಥ ಹತ್ವಾರ, ತಾಯಿ ಕುಸುಮ, ತಂಗಿ ಪ್ರಕೃತಿ. ಶಿವಾಜಿನಗರ, ಯಶವಂತಪುರ, ಅಲಸೂರು, ಮಲ್ಲೇಶ್ವರ, ಮಡಿಕೇರಿಕುಶಾಲನಗರ, ತಿರುವಂತಪುರ, ಮುಂಬಯಿ, ಅಮೇರಿಕಾನ್ಯೂಜೆರ್ಸಿಗಳಲ್ಲಿ ಅಷ್ಟಷ್ಟು ತಿಂಗಳ ಬದುಕು. ಅಲಸೂರು ಕೆರೆಯ ಎದುರಿರುವ ಎನ್.ಸಿ.ಎಸ್, ಶೇಷಾದ್ರಿಪುರಂ ಹೈಸ್ಕೂಲ್, ಕಾಲೇಜುಗಳಲ್ಲಿ ವಿದ್ಯಾಭ್ಯಾಸ, ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಟಾಟಾ ಕನ್ಸಲ್ಟೆನ್ಸಿಯಲ್ಲಿ ಕೆಲಸ. ಸಿನೆಮಾ ಹಾಗೂ ಸಂಗೀತದಲ್ಲಿ ಆಸಕ್ತಿ.

ಪ್ರಕಟವಾಗಿರುವ ಕೃತಿಗಳು

ಬದಲಾಯಿಸಿ

ಇದೇ ಇರಬೇಕು ಕವಿತೆ ಕವಿತೆ ಸಂಕಲನ ಕಟ್ ಸೀಟ್ ಮತ್ತು ಇತರೆ ಕತೆಗಳು ಸಂಕಲನದಲ್ಲಿ ಕತೆ ಪ್ರಕಟ ೨೦೦೯ ಹಾಗೂ ೨೦೧೦ ಕನ್ನಡ ಪ್ರಭ ಸಂಕ್ರಾಂತಿ ವಿಶೇಷಾಂಕದ ಕತಾ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಅಲ್ಲದೇ ಅನೇಕ ವಿಶೇಷಾಂಕಗಳಲ್ಲಿ ಕತೆಗಳು ಪ್ರಕಟವಾಗಿವೆ.

ಹೊರಗಿನ ಸಂಪರ್ಕಗಳು

ಬದಲಾಯಿಸಿ

೧. ವಿಕ್ರಮ ಹತ್ವಾರರ ಬ್ಲಾಗು: ನೀ ಮಾಯೆಯೊಳಗೋ
೨. ಕಥೆ: ಬೇಂದ್ರೆ ಗುಂಗಿನಲ್ಲಿ Archived 2006-05-04 ವೇಬ್ಯಾಕ್ ಮೆಷಿನ್ ನಲ್ಲಿ.
೩. ಕೆಂಡಸಂಪಿಗೆಯಲ್ಲಿ ವಿಕ್ರಮ ಹತ್ವಾರ ಅಂಕಣ ಹಾಗೂ ಕವಿತೆಗಳು Archived 2010-12-17 ವೇಬ್ಯಾಕ್ ಮೆಷಿನ್ ನಲ್ಲಿ.