ಯಶವಂತಪುರ
ಯಶವಂತಪುರ ನಗರವು ಬೆಂಗಳೂರು ಜಿಲ್ಲೆಯ ಬೆಂಗಳೂರು ತಾಲ್ಲೂಕಿನ ಒಂದು ಹೋಬಳಿ ಕೇಂದ್ರ.
ಯಶವಂತಪುರ | |
---|---|
ನಗರ | |
Coordinates: 13°01′43″N 77°32′46″E / 13.0285°N 77.54620°E | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಬೆಂಗಳೂರು |
ತಾಲ್ಲೂಕು | ಬೆಂಗಳೂರು |
ಹೋಬಳಿ | ಯಶವಂತಪುರ |
Languages | |
• Official | Kannada |
Time zone | UTC+5:30 (IST) |
PIN | 560022 |
Vehicle registration | KA 04 |
ಇದು ಬೆಂಗಳೂರು ರೈಲು ನಿಲ್ದಾಣ ದಿಂದ ಪಶ್ಚಿಮ ಭಾಗಕ್ಕೆ ೬ ಕಿ.ಮೀ ದೂರದಲ್ಲಿದೆ. ಜನವಸತಿಯ ಪ್ರದೇಶವಷ್ಟೇ ಅಲ್ಲದೆ ಕೈಗಾರಿಕಾ ಪ್ರದೇಶವನ್ನೂ ಒಳಗೊಂಡಿರುವ ಯಶವಂತಪುರವು ಕೃಷಿ ನಿಯಂತ್ರಿತ ಮಾರುಕಟ್ಟೆಯನ್ನು (APMC) ಸಹ ಒಳಗೊಂಡಿದೆ. ಮಲ್ಲೇಶ್ವರ,ಮಹಾಲಕ್ಷ್ಮಿಬಡಾವಣೆ,ನಂದಿನಿ ಬಡಾವಣೆ,ಮತ್ತಿಕೆರೆ ಇದರ ಸುತ್ತಮುತ್ತಲಿರುವ ಇನ್ನಿತರ ಬಡಾವಣೆಗಳು.
ಯಶವಂತಪುರ ವಿಧಾನಸಭಾ ಕ್ಷೇತ್ರವೂ ಹೌದು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಒಡಲಲ್ಲಿರುವ ಯಶವಂತಪುರ ವಿಧಾನಸಭಾ ಕ್ಷೇತ್ರದ ಸದ್ಯದ ಶಾಸಕರು ಎಸ್.ಟಿ.ಸೋಮಶೇಖರ್[೧].
ಸಾರಿಗೆ
ಬದಲಾಯಿಸಿ- ಬೆಂಗಳೂರಿನಿಂದ ೧೮ ಜಿಲ್ಲೆಗಳಿಗೆ ಸಾಗುವ ಕ.ರಾ.ರ.ಸಾ.ಸಂ ಬಸ್ ಗಳು ಯಶವಂತಪುರ ಮಾರ್ಗವಾಗಿಯೆ ಹೋಗಬೇಕು.
- ಬೆಂಗಳೂರು ಮಹಾನಗರ ಸಾರಿಗೆ ಸಂಸ್ತೆ ಬಸ್ ಗಳು ಯಶವಂತಪುರದಿಂದ ಹೆಸರಘಟ್ಟ, ಚಿಕ್ಕಬಾಣವರ,ನೆಲಮಂಗಲ,ಪೀಣ್ಯ,ಕೆಂಗೇರಿ,ವಿಜಯನಗರ,ಕೃ.ರಾ. ಮಾರುಕಟ್ಟೆ,ಜಯನಗರ,ಕೆಂಪೇಗೌಡ ಬಸ್ ನಿಲ್ದಾಣ,ಶಿವಾಜಿ ನಗರ,ಕೃಷ್ಣರಾಜ ಪುರ,ಯಲಹಂಕ ಗಳಿಗೆ ಉತ್ತಮ ಬಸ್ ಸೌರ್ಕರ್ಯಗಳನ್ನು ಹೊಂದಿದೆ.
- ಮೆಟ್ರೋ ರೈಲು ನಿಲ್ದಾಣವಿದೆ.
- ಯಶವಂತಪುರದಲ್ಲಿ ಪ್ರಮುಖ ರೈಲು ನಿಲ್ದಾಣವಿದೆ, ಇಲ್ಲಿಂದ ಮಂಗಳೂರಿಗೆ ೨ ರೈಲುಗಳಿವೆ, ಒಂದು ಬೆಳಗ್ಗೆ ಇನ್ನೊಂದು ರಾತ್ರಿ ಹೊರಡುತ್ತದೆ,
ಉಲ್ಲೇಖಗಳು
ಬದಲಾಯಿಸಿ- ↑ "ಕರ್ನಾಟಕ ವಿಧಾನಸಭಾ ಚುನಾವಣೆ - ೨೦೧೩ರ ಫಲಿತಾಂಶ". Archived from the original on 2014-09-22. Retrieved 2014-10-08.