ವಿಕಿಪೀಡಿಯ ಚರ್ಚೆಪುಟ:ಸದ್ಬಳಕೆ
ಕನ್ನಡ ವಿಕಿಪೀಡಿಯದಲ್ಲಿ ಸದ್ಯಕ್ಕೆ ಸ್ಥಳೀಯ ಅಪ್ಲೋಡ್ ಕಾರ್ಯನೀತಿಯ ಕೊರತೆಯಿರುವುದರಿಂದ ಸ್ಥಳೀಯವಾಗಿ ಫೈಲುಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಆ ಕಾರ್ಯನೀತಿಗೆ ಅಗತ್ಯವಾದ ಸದ್ಭಳಕೆಯ ನಿಯಮಗಳನ್ನು ರೂಪಿಸುವುದು ಈ ಕಾರ್ಯನೀತಿಯ ಉದ್ದೇಶ
ಚರ್ಚೆ
ಬದಲಾಯಿಸಿಈ ಕೆಳಗಿನವು ನನ್ನ ಸಂದೇಹಗಳು.. ದಯವಿಟ್ಟು ಚರ್ಚಿಸಿ..
- ಸದ್ಬಳಕೆ ಕಾರ್ಯನೀತಿ ಪ್ಯಾರಾದಲ್ಲಿ ಉಚಿತವಲ್ಲದ ಮಾಹಿತಿಯನ್ನೂ , ಉಚಿತವಲ್ಲದ ದತ್ತಾಂಶಗಳನ್ನು/ಚಿತ್ರಗಳನ್ನು ಎಂದು ಬಳಸಲಾಗಿದೆ. ಉಚಿತಕ್ಕಿಂತ 'ಮುಕ್ತ' ಪದ ಬಳಕೆ ಒಳ್ಳೆಯದು ಅನ್ನಿಸುತ್ತದೆ.
- ನಾವು ಕನ್ನಡದಲ್ಲಿ ಉಚಿತ ಪದವನ್ನು ಬಳಸುವ ಬದಲು ಸ್ವತಂತ್ರ ಪದವನ್ನು ಬಳಸುವುದು ಸೂಕ್ತವೆನಿಸುತ್ತದೆ. ಉಲ್ಲೇಖಿಸಲಾಗಿರುವ ಕೊಂಡಿಯಲ್ಲಿರುವ ಅರ್ಥವಿವರಣೆಯನ್ನು ಕನ್ನಡದಲ್ಲಿ ನೀಡುವುದಾದರೆ ಉಚಿತ ಪದವನ್ನು ಬಳಸಲಾಗುವುದಿಲ್ಲ. ಆದ್ದರಿಂದ ಕೆಲ ಬದಲಾವಣೆಗಳನ್ನು ಮಾಡಿದ್ದೇನೆ. -- Csyogi (ಚರ್ಚೆ) ೧೫:೦೬, ೧೦ ಮಾರ್ಚ್ ೨೦೧೭ (UTC)
- ಆಗಬಹುದು --ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
- ನಿಯಮಗಳು ವಿಭಾಗದಲ್ಲಿ ಮುದ್ರಣವಾಗಿರುವ ಮಾಹಿತಿ ಬದಲು ಪ್ರಕಟವಾಗಿರುವ ಮಾಹಿತಿ ಅನ್ನಬಹುದಲ್ವಾ?
- ಆಗಬಹುದು. ಡಿಜಿಟಲ್ ಪ್ರಕಟಣೆ ಮತ್ತು ಅಂತರಜಾಲವೂ ಪ್ರಕಟಣೆಯೇ ಅಗಿರುವ ಕಾರಣ ಇದು ಒಪ್ಪತಕ್ಕದ್ದೇ --ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
- "ಕಾಪಿರೈಟ್ ಟ್ಯಾಗಿನ ಮೂಲಕ ವಿಕಿಪೀಡಿಯದ ಸದ್ಬಳಕೆ ನೀತಿ ಈ ಚಿತ್ರದ ಉದ್ದಾತ್ತ ಉದ್ದೇಶಗಳನ್ನು ಅನುಮತಿಸುತ್ತದೆ ಎಂದು ತಿಳಿಸಬೇಕು" ಎಂಬ ವಾಕ್ಯವಿದೆ. ಆದರೆ ಕಾಪಿರೈಟ್ ಟ್ಯಾಗ್ ಅಂದರೆ ಏನು? ಎಲ್ಲಿದೆ?
- ಖ್ಯಾತ ಪೈಂಟಿಗ್ ಮತ್ತು ಇತರೆ ನಮೂನೆಯ ಕಲಾಚಿತ್ರಗಳನ್ನು ಬಳಸಬಹುದು ಎಂದು ಹೇಳಲಾಗಿದೆ. ಖ್ಯಾತ ಪುರಾತನ ಪೈಟಿಂಗ್ ಮಾತ್ರವೋ ಅಥವಾ ಆಧುನಿಕ ಚಿತ್ರಕಲೆಯೂ ಆಗುತ್ತದಾ? ಉದಾ ಚಿತ್ರಸಂತೆಯಲ್ಲಿ ತೆಗೆದ ಈಗಿನ ಕಲಾವಿದರ ಪೈಟಿಂಗ್ ಗಳು.
- ಕಲಾಪ್ರಕಾರಗಳ ನಟನೆಯ ಭಾವಚಿತ್ರಗಳು .. ಇದರ ಔಚಿತ್ಯತೆ ಹೇಗೆ?. ಉದಾಹರಣೆ ಪ್ಲೀಸ್..
- ಉದಾಹರಣೆಗೆ ಚಿಟ್ಟಾಣಿಯವರ ಯಕ್ಷಗಾನದ ಭಂಗಿಗಳ ಫೋಟೋ, ಕಂಸಾಳೆಯ ಫೋಟೋ, ಆಟಿಕಳೆಂಜ ಕುಣತದ ಫೋಟೋ, ಇತ್ಯಾದಿ--ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
- ಪುಸ್ತಕದ ಮುಖಪುಟ ಹಾಕಬಹುದು ಎನ್ನಲಾಗಿದೆ. ಜೊತೆಗೆ ಸಾಂದರ್ಭಿಕವಾಗಿ ಲೇಖನಕ್ಕೆ ಪೂರಕವಾಗಿ ಬೇಕಾದಂತಹ ಪತ್ರಿಕೆ/ಪುಸ್ತಕದ ಕ್ಲಿಪ್ಪಿಂಗ್ಸ್ ಹಾಕಲು ಅನುಮತಿ ಇರುತ್ತದಾ? ಉದಾ: ಲೋಕಮಾನ್ಯ ತಿಲಕರ ಕೇಸರಿ ಪತ್ರಿಕೆ, ಕರ್ನಾಟಕ ಏಕೀಕರಣ ಸಮಯದ ಅನಕೃ ಲೇಖನ ತುಣುಕು, ವಿವಾದಕ್ಕೆ ಒಳಗಾದ ಪುಸ್ತಕದ ಬಗ್ಗೆ ಬರೆಯುವಾಗ ವಿವಾದಕ್ಕೆ ಕಾರಣವಾದ ಪ್ಯಾರಾಗಳ ಪುಟದ ತುಣುಕುಗಳು (ದುಂಢಿ, ವಾಲ್ಮೀಕಿಯಾರು ತರಹದ ಪುಸ್ತಕಗಳು) ಇತ್ಯಾದಿ.
- ಹೌದು. ಇವನ್ನೂ ಸೇರಿಸಬಹುದು. ಮತ್ತೊಮ್ಮೆ ಜ್ಞಾಪಿಸುವುದೇನೆಂದರೆ ಪಿಕ್ಸೆಲ್ ಮಿತಿ--ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
- ಇಮೇಜ್ ಕೆಟಗರಿಯಲ್ಲಿ ಕೈಬರಹದ ಮಾದರಿಗಳು, ಫಾಂಟುಗಳ ಚಿತ್ರಗಳು, ಧಾರ್ಮಿಕ/ಪಂಥದ ಸಂಕೇತಗಳು, ಚಿಹ್ನೆಗಳನ್ನೂ ಸೇರಿಸಬೇಕಲ್ವಾ? ಉದಾ: ಬ್ರಹ್ಮಕುಮಾರಿ ಸಂಸ್ಥೆಯ ಸಿಂಬಲ್ಲನ್ನು ಅವರ ಫಲಕದಿಂದ ಫೋಟೋ ತೆಗೆದು ಹಾಕುವುದು, ಖ್ಯಾತ ಸಾಹಿತಿಗಳ/ವ್ಯಕ್ತಿಗಳ ಕೈಬರಹದ ಮಾದರಿ ಹಾಕುವುದು ಇತ್ಯಾದಿ
- ಚಿತ್ರ ಗಾತ್ರದ ಮಿತಿ ೧ ಎಂಬಿ ಸಾಕಾ? ೨ ಎಂಬಿ ಇಟ್ಟರೆ ಒಳ್ಳೆಯದಲ್ವಾ?
- ೧೦೦೦ x ೧೦೦೦ ಪಿಕ್ಸೆಲ್, ೨೪ ಬಿಟ್ ಕಲರ್, ಚಿತ್ರ ಸುಮಾರು ೮೦೦ ಕಿಲೊಬೈಟ್ ಆಗುತ್ತದೆ. ಅಂತೆಯೇ ೧ ಎಂ.ಬಿ. ಮಿತಿ ಎಂದು ಬರೆದದ್ದು. ೨ ಎಂ.ಬಿ. ಅಡ್ಡಿಯಿಲ್ಲ--ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
- ದ್ವನಿ/ಬಹುಮಾಧ್ಯಮ ಫೈಲಿನ ಸೈಜ್ ಮಿತಿ ನಿಗದಿಪಡಿಸಲಾಗಿಲ್ಲ.
- ಇದು ಸ್ವಲ್ಪ ಕಷ್ಟ. ಯಾವ ತಂತ್ರಾಂಶದ ಫೈಲ್ ಎಂಬುದನ್ನು ಹೊಂದಿಕೊಂಡು ಅವುಗಳ ಗಾತ್ರ ಬದಲಾಗುತ್ತದೆ. ಅದಕ್ಕೆ ಸಮಯದ ಮಿತಿ ನಿಗದಿಪಡಿಸಿದ್ದು.--ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
- ನಿಯಮಗಳನ್ನು ಪಾಲಿಸದೇ ಮಾಡುವ ಲೋಕಲ್ ಅಪ್ಲೋಡ್ ಫೈಲ್ ಗಳನ್ನು ಅಳಿಸುವಿಕೆ ಮಾರ್ಕಿಂಗ್ ಮಾಡಲು ಒಂದು ವರ್ಗ ಮಾಡಬೇಕು.
- ಫೈಲನ್ನು ಅಪ್ಲೋಡ್ ಮಾಡುವಾಗ ಅದನ್ನು ಎಲ್ಲಿಂದ ತೆಗೆದುಕೊಂಡದ್ದು ಎಂಬ 'ಕ್ರೆಡಿಟ್ಸ್' ಕೊಟ್ಟು ಅದು ಕಾಣಿಸುವ ಪುಟದಲ್ಲಿಯೂ ಪ್ರದರ್ಶನ ಮಾಡಬೇಕಾಗುತ್ತದಾ?
--Vikas Hegde (ಚರ್ಚೆ) ೧೩:೫೬, ೨ ಮಾರ್ಚ್ ೨೦೧೭ (UTC)
- ಸದ್ಬಳಕೆಯ ಪುಟದಿಂದ ಕೊಟ್ಟಿರುವ ಇಂಗ್ಲಿಷ್ ಲೇಖನದ ಕೊಂಡಿಯು ಉಚಿತವಲ್ಲದ ಮಾಹಿತಿಗೆ (non-free content) ಸಂಬಂಧಿಸಿದೆ. ಸದ್ಬಳಕೆಗೆ ಇದರ ಕನ್ನಡ ಆವೃತ್ತಿಯೆ? ಹಾಗಿದ್ದರೆ ಪುಟದ ಹೆಸರು ಹಾಗೂ ಇದರ ಮಾಹಿತಿ ಬದಲಾಗಬೇಕಲ್ಲವೆ?
- ಸ್ಥಳೀಯ ಅಪ್ಲೋಡ್ ಎಂದರೇನು ನಿಖರವಾಗಿ ವಿವರಿಸಿಲ್ಲ. ಇದು ಎಲ್ಲರಿಗೂ ನೇರವಾಗಿ ಅರ್ಥವಾಗುವುದಿಲ್ಲ. ಹೆಚ್ಚು ವಿವರನೆ ಅವಶ್ಯಕ
- ಪರವಾನಗಿ ನಿಯಮದ ಕೊಂಡಿಯು "http://freedomdefined.org/Definition" ಇಲ್ಲಿಗೆ ಕೊಡಲಾಗಿದೆ. ಕಾರಣ?
- "ಉಚಿತ ಪರ್ಯಾಯ ಕಡತದ ಅಲಭ್ಯತೆ - ಹಕ್ಕುಸ್ವಾಮ್ಯ (ಕಾಪಿರೈಟ್) ಹೊಂದಿರುವ ಕಡತ ತಿಳಿಸುವ ಅಂಶಗಳನ್ನೇ ತಿಳಿಸುವ ಉಚಿತ ಕಡತ ಇಲ್ಲದಿದ್ದ ಸಂದರ್ಭದಲ್ಲಿ" ==> ಈ ವಾಕ್ಯ ಅಪೂರ್ಣವಿದ್ದಂತಿದೆ. ಏನು ಮಾಡಬೇಕು ಎಂಬುದು ನಿರ್ದಿಷ್ಟವಾಗಿ ತಿಳಿಸಿಲ್ಲ.
- "ವಿಶ್ವಕೋಶರೂಪದ ಮಾಹಿತಿ" ==> ಈ ನಿಯಮಕ್ಕೆ "ಸಾಮಾನ್ಯ ಅರ್ಹತೆಗಳ" ಕೊಂಡಿ ಕೊಟ್ಟರೆ ಅನುಕೂಲ.
- "ಅನಿವಾರ್ಯತೆ - ಲೇಖನದಲ್ಲಿ ಇರುವ ವಿಷಯಕ್ಕೆ ಪೂರಕವಾಗಿ ಕಡತವಿದ್ದರೆ ಓದುಗನಿಗೆ ವಿಷಯದ ಗ್ರಹಿಕೆ ಸುಲಭವಾಗಿ, ಕಡತವಿಲ್ಲದಿರುವಿಕೆ ವಿಷಯದ ಗ್ರಹಿಕೆಗೆ ತೊಂದರೆಯುಂಟುಮಾಡುವಂತಿದ್ದರೆ ಅಂತಹ ಕಡತಗಳನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಬಳಸಬಹುದು" ==> ಇದನ್ನು ಹೀಗೆ ಬರೆದರೆ ಸುಲಭವಲ್ಲವೆ? "ಉಚಿತವಲ್ಲದ ಕಡತದಿಂದ ಲೇಖನದ ವಿಷಯಗ್ರಹಿಕೆಗೆ ಪೂರಕವಾಗುವಂತಿದ್ದು ಮತ್ತು ಕಡತವಿಲ್ಲದೆ ವಿಷಯಗ್ರಹಿಕೆ ಕಷ್ಟಸಾಧ್ಯವಾಗುವಂತಿದ್ದರೆ ಮಾತ್ರ ಬಳಸಬಹುದು"
- "ಅಂಚೆ ಸ್ಟ್ಯಾಂಪ್‍ನ ಚಿತ್ರ" ==> "ಅಂಚೆಚೀಟಿಯ ಚಿತ್ರ"
- "ಹಣದ (ಕರೆನ್ಸಿ) ಚಿತ್ರ"==> ಕರೆನ್ಸಿ != ಹಣ; ಬರಹ ನಿಘಂಟಿನಲ್ಲಿ ನಾಣ್ಯ ಎಂದಿದೆ
--ವಿಶ್ವನಾಥ/Vishwanatha (ಚರ್ಚೆ) ೧೩:೧೬, ೬ ಮಾರ್ಚ್ ೨೦೧೭ (UTC)
- ರಸ್ತೆಯಲ್ಲಿ ಫೋಟೋ ಹಿಡಿದು, ಅದರಲ್ಲಿ ಹಕ್ಕುಸ್ವಾಮ್ಯದ ವಿಷಯಗಳು ಇದ್ದರೆ, ಅವನ್ನು ಕ್ರಿಯೇಟೀವ್ ಕಾಮನ್ಸ್ ಎಂದು ನಂಬಬಹುದೇ? Mallikarjunasj (ಚರ್ಚೆ) ೦೬:೨೬, ೧೩ ಮಾರ್ಚ್ ೨೦೧೭ (UTC)
- ಬಹುಮಾಧ್ಯಮ ತುಣುಕುಗಳ ರೆಸೊಲ್ಯೂಷನ್ ಎಷ್ಟಿರಬೇಕು ಎಂದು ಎಲ್ಲೂ ಸರಿಯಾಗಿ ವಿವರಿಸಿಲ್ಲ.
- ವಿಡಿಯೋ ತುಣುಕುಗಳು ೬೪೦ x ೪೮೦ ಪಿಕ್ಸೆಲ್‍ಗೆ ಕಡಿಮೆಯಾಗದಂತೆ ಮತ್ತು ೧೨೮೦ x ೭೮೦ ಪಿಕ್ಸೆಲ್‍ಗಳನ್ನು ಮೀರದಂತೆ ಇರಲಿ. ಆಕಾರದ ಅನುಪಾತ (Aspect ratio) ೪:೩ (4:3) ಅಥವಾ ೧೬:೯ (16:9) ಇರಲಿ. ಗೋಪಾಲಕೃಷ್ಣ ಎ (ಚರ್ಚೆ) ೧೮:೫೮, ೨೨ ಮಾರ್ಚ್ ೨೦೧೭ (UTC)
ಚಿತ್ರಗಳ ಅಳಿಸುವಿಕೆಗಾಗಿ ವರ್ಗ, Template
ಬದಲಾಯಿಸಿಸದ್ಬಳಕೆ ನಿಯಮಗಳನ್ನು ಪಾಲಿಸದ ಕಡತಗಳನ್ನು ಅಪ್ಲೋಡ್ ಮಾಡಿದಾಗ ಅದನ್ನು ಅಳಿಸುವಿಕೆಗೆ ಹಾಕಿದರೆ ಅವು 'ಅಳಿಸುವಿಕೆಗಾಗಿ ಹಾಕಿದ ಕಡತಗಳು' ಎಂಬ ವರ್ಗದ ಕೆಳಗೆ ಹೋಗಿ ಕೂರುವಂತೆ ಮಾಡಿದರೆ ಅನುಕೂಲವಾಗುತ್ತದೆ. ಈಗಿರುವ {{ಅಳಿಸುವಿಕೆ}} ಟೆಂಪ್ಲೇಟ್ ಸಾಕಾ ಅಥವಾ {{ಕಡತ ಅಳಿಸುವಿಕೆ}} ಅಂತ ಬೇರೊಂದು ಟೆಂಪ್ಲೇಟ್ ಮಾಡಿದರೆ ಒಳ್ಳೆಯದಾ? --Vikas Hegde (ಚರ್ಚೆ) ೧೦:೫೧, ೨೩ ಮಾರ್ಚ್ ೨೦೧೭ (UTC)
- ಬೇರೊಂದು ಟೆಂಪ್ಲೇಟು ಇದ್ದರೆ ಉತ್ತಮ ಎಂಬುದು ನನ್ನ ಅನಿಸಿಕೆ. ನಿರ್ವಾಹಕರಿಗೆ ಸುಲಭ ಆಗಬಹುದು. --GopalaKrishnaA ೧೨:೫೧, ೨೩ ಮಾರ್ಚ್ ೨೦೧೭ (UTC)