ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೨೦

ಮುಂದಿನ ವಿಶೇಷ ಬರಹಕ್ಕೆ ಶಿವರಾಮ ಕಾರಂತ ಅಥವಾ ಮುದ್ದಣ ಲೇಖನವನ್ನು ಹಾಕುವ ಪ್ರಸ್ತಾವನೆ ಮುಂದಿಡುತ್ತಿದ್ದೇನೆ --ಮನ 21:47, ೭ April ೨೦೦೬ (UTC)

ಮುಂದಿನ ವಿಶೇಷ ಬರಹ ಮುಂದಿನ ವಾರಕ್ಕೇ ಇಟ್ಟುಕೊಳ್ಳಬಹುದು. ಹಾಗೆಯೇ ವಾರದ ಸಹಯೋಗ ಕೂಡ ಮತ್ತೆ rejuvenate ಮಾಡೋದರ ಕಡೆಗೂ ಸ್ವಲ್ಪ ಗಮನಹರಿಸಬಹುದು ಅನ್ಸುತ್ತೆ... ಸಾಕಷ್ಟು ಸದಸ್ಯರು ಈಗ ವಿಕಿಪೀಡಿಯದಲ್ಲಿ ಬರೆಯುತ್ತಿರುವುದರಿಂದ. ಶಿವರಾಮ ಕಾರಂತ ಮುಂದಿನ ವಾರಕ್ಕೆ ಸರಿ ಉಂಟು. ಮುದ್ದಣದ ಚಿತ್ರ ಯಾಕೋ ಸರಿ ಇದ್ದ ಹಾಗಿಲ್ಲ (ಸೊಟ್ಟ ಉಂಟು?) ಹಾಗೆಯೇ ಲೇಖನ ಕೂಡ ಒಂದಷ್ಟು ಸರಿಪಡಿಸಬೇಕಿದೆ. ಸರಿಪಡಿಸಿದ ನಂತರ ಈ ವಾರಕ್ಕೋ ಮುಂದಿನ ವಾರಕ್ಕೋ ಇಟ್ಟುಕೊಳ್ಳಲೂ ಬಹುದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 08:21, ೮ April ೨೦೦೬ (UTC)

ರಾಜ್ ಕುಮಾರ್

ಬದಲಾಯಿಸಿ

ಮುಂದಿನ ಸಂಚಿಕೆಗೆ ಡಾ.ರಾಜ್ ಕುಮಾರ್ ಕುರಿತ ಲೇಖನ ಇದ್ದರೆ ಒಳ್ಳೆಯದಲ್ಲವೇ --Ismail 13:28, ೧೨ April ೨೦೦೬ (UTC)

ಖಂಡಿತಾ. ನಾನೂ ಅದನ್ನೇ ಪ್ರಸ್ತಾಪಿಸೋಣ ಅಂತ ಬಂದೆ. ಡಾ. ರಾಜ್ ಚಿತ್ರಗಳ ಸಮಗ್ರ ಪಟ್ಟಿ, ನಡೆದು ಬಂದ ಹಾದಿ, ಗಾಯಕರಾಗಿ ಡಾ. ರಾಜ್, ಕನ್ನಡ/ಕರ್ನಾಟಕ ಪರ ಹೋರಾಟಗಳಲ್ಲಿ ಡಾ.ರಾಜ್, ವೀರಪ್ಪನ್ ಇಂದ ಡಾ. ರಾಜ್ ಅಪಹರಣ, ಡಾ. ರಾಜ್ ಅನಾರೋಗ್ಯ (ಮಂಡಿನೋವು ಮತ್ತು ಎದೆನೋವು), ಇವೇ ಮೊದಲಾದ ಅಂಶಗಳಿಗೆ ಮಾಹಿತಿ ತುಂಬಿಸುವ ಕಾರ್ಯವಾಗಬೇಕು. ಇದನ್ನು ವಾರದ ಸಹಯೋಗದಡಿಯಲ್ಲಿ ಮಾಡಿದರೆ ಇನ್ನೂ ಉತ್ತಮವೇ? --ಮನ 15:18, ೧೨ April ೨೦೦೬ (UTC)
ಹೌದು, ವಾರದ ಸಹಯೋಗ ಆಗಬಹುದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 04:27, ೧೩ April ೨೦೦೬ (UTC)
Return to the project page "ವಿಶೇಷ ಬರಹ/ಸಂಚಿಕೆ - ೨೦".