ವಿಕಿಪೀಡಿಯ ಚರ್ಚೆಪುಟ:ಜೀವಂತ ವ್ಯಕ್ತಿಗಳ ವ್ಯಕ್ತಿಚಿತ್ರ
Latest comment: ೫ ತಿಂಗಳುಗಳ ಹಿಂದೆ by Gangaasoonu in topic ಜಿಲ್ಲಾಮಟ್ಟ ಅಥವಾ ಅದಕ್ಕೂ ಹೆಚ್ಚಿನ ಮಟ್ಟದ ಪತ್ರಿಕೆಗಳಲ್ಲಿ ಕನಿಷ್ಠ ಐದು ಬಾರಿ ಆತನ ಬರೆವಣಿಗೆಯ ಸುದ್ದಿಗಳು ಪ್ರಕಟಿತವಾಗಿರಬೇಕು. ಜಿಲ್ಲಾಮಟ್ಟ ಅಥವಾ ಅದಕ್ಕೂ ಹೆಚ್ಚಿನ ಮಟ್ಟದ ಪತ್ರಿಕೆಗಳಲ್ಲಿ ಅಂಕಣ, ಲೇಖನ ಮುಂತಾದ ಪ್ರಕಟಣೆಗಳ ಮೂಲಕ ಬರೆವಣಿಗೆಯಲ್ಲಿ ತೊಡಗಿರಬೇಕು/ತೊಡಗಿದ್ದವರಾಗಿರಬೇಕು.
ಇದರಲ್ಲಿನ ಅಂಶಗಳಲ್ಲಿ ಅನೇಕ ಗೊಂದಲಗಳಿವೆ. ಅರಳಿಕಟ್ಟೆಯಲ್ಲಿ ಈ ಬಗ್ಗೆ ಸದಸ್ಯರು ಆಕ್ಷೇಪವೆತ್ತಿದ್ದಾರೆ. ಈ ವಿಷಯ ಮತ್ತೆ ಚರ್ಚೆಗೊಳಪಡಿಸಿ ರಚಿಸುವುದೊಳ್ಳೆಯದು--Vikas Hegde (ಚರ್ಚೆ) ೦೮:೦೯, ೨೩ ಜೂನ್ ೨೦೧೬ (UTC)
"ಚಲನಚಿತ್ರ ತಾರೆಯರು ಕನಿಷ್ಟ ೫ ಚಲನಚಿತ್ರದಲ್ಲಿ ಗಮನಾರ್ಹ ಪಾತ್ರಗಳಲ್ಲಿ ನಟಿಸಿರಬೇಕು. ಅವರು ಕನಿಷ್ಟ ಎರಡು ರಾಜ್ಯ ಅಥವಾ ರಾಷ್ಟ್ರ ಪ್ರಶಸ್ತಿ ಪಡೆದಿರಬೇಕು ಅಥವಾ ಜನಪ್ರಿಯತೆ ಹೊಂದಿರಬೇಕು."
ವರ್ಷಕ್ಕೆ ೪ ಮಂದಿ ಕಲಾವಿದರು (ನಟ, ನಟಿ, ಪೋಷಕ ನಟ, ನಟಿ) ರಾಜ್ಯ ಪ್ರಶಸ್ತಿ ಪಡೆವರು. ಈ ನಿಯಮದ ಸಡಲಿಕೆ ಅನಿವಾರ್ಯ. ಇಲ್ಲವೆಂದಲ್ಲಿ, ಬಹುತೇಕ ಲೇಖನಗಳು ಅಸಿಂಧುವಾಗುವುವು.
Mallikarjunasj ೦೪:೩೬, ೯ ಜುಲೈ ೨೦೧೮ (UTC)
ಜಿಲ್ಲಾಮಟ್ಟ ಅಥವಾ ಅದಕ್ಕೂ ಹೆಚ್ಚಿನ ಮಟ್ಟದ ಪತ್ರಿಕೆಗಳಲ್ಲಿ ಕನಿಷ್ಠ ಐದು ಬಾರಿ ಆತನ ಬರೆವಣಿಗೆಯ ಸುದ್ದಿಗಳು ಪ್ರಕಟಿತವಾಗಿರಬೇಕು. ಜಿಲ್ಲಾಮಟ್ಟ ಅಥವಾ ಅದಕ್ಕೂ ಹೆಚ್ಚಿನ ಮಟ್ಟದ ಪತ್ರಿಕೆಗಳಲ್ಲಿ ಅಂಕಣ, ಲೇಖನ ಮುಂತಾದ ಪ್ರಕಟಣೆಗಳ ಮೂಲಕ ಬರೆವಣಿಗೆಯಲ್ಲಿ ತೊಡಗಿರಬೇಕು/ತೊಡಗಿದ್ದವರಾಗಿರಬೇಕು.
ಬದಲಾಯಿಸಿಜಿಲ್ಲಾಮಟ್ಟ ಅಥವಾ ಅದಕ್ಕೂ ಹೆಚ್ಚಿನ ಮಟ್ಟದ ಪತ್ರಿಕೆಗಳ ಜಾಲತಾಣವೇ ಇರುವುದಿಲ್ಲ.. ಉಲ್ಲೇಖದ ಕೊಂಡಿ ಹಾಕುವ ಬಗೆ ಹೇಗೆ? Gangaasoonu (ಚರ್ಚೆ) ೦೬:೪೮, ೩೧ ಜುಲೈ ೨೦೨೪ (IST)