ವಿಕಿಪೀಡಿಯ:ಸಂಪಾದನೋತ್ಸವಗಳು/ಮಹಿಳಾ ಕೇಂದ್ರಿತ ಸಂಪಾದನೋತ್ಸವಗಳು-೨೦೧೮

ವಿಕಿಪೀಡಿಯದಲ್ಲಿ ಲಿಂಗ ಅಸಮಾನತೆ ಇದೆ. ಅಂದರೆ ಪುರುಷ ಸಂಪಾದಕರ ಸಂಖ್ಯೆ ಮಹಿಳಾ ಸಂಪಾದಕರ ಸಂಖ್ಯೆಗಿಂತ ಜಾಸ್ತಿ ಇದೆ. ಒಂದು ಅಂದಾಜಿನ ಪ್ರಕಾರ ಕನ್ನಡ ವಿಕಿಪೀಡಿಯದಲ್ಲಿ ಪುರುಷ ಮತ್ತು ಮಹಿಳಾ ಸಂಪಾದಕರ ಸಂಖ್ಯೆಯ ಅನುಪಾತ ೭:೧ ಇದೆ. ಸಹಜವಾಗಿಯೇ ವಿಕಿಪೀಡಿಯದಲ್ಲಿ ಮಹಿಳಾ ಸಂಬಂಧಿ ಲೇಖನಗಳೂ ಕಡಿಮೆಯಿವೆ. ಈ ಅಸಮಾನತೆಯನ್ನು ಹೋಗಲಾಡಿಸಲು ಮಹಿಳಾ ದಿನ ಮತ್ತು ತಿಂಗಳು ಸಂದರ್ಭದಲ್ಲಿ ಅಂದರೆ ಮಾರ್ಚ್ ೨೦೧೮ರಲ್ಲಿ ಪ್ರಾರಂಭಿಸಿ ಹಲವು ಸಂಪಾದನೋತ್ಸವಗಳನ್ನು ಆಯೋಜಿಸಲಾಗಿದೆ.

ಉದ್ದೇಶ ಬದಲಾಯಿಸಿ

  • ಹೊಸ ಮಹಿಳಾ ಸಂಪಾದಕರನ್ನು ತರುವುದು
  • ಈಗಾಗಲೇ ಇರುವ ಆದರೆ ಸಕ್ರಿಯವಾಗಿಲ್ಲದ ಮಹಿಳಾ ಸಂಪಾದಕರನ್ನು ಪುನಃ ಸಕ್ರಿಯಗೊಳಿಸುವುದು
  • ಮಹಿಳಾ ಸಂಬಂಧಿ ಲೇಖನಗಳನ್ನು ಸೇರಿಸುವುದು

ಸಂಪಾದನೋತ್ಸವಗಳು ಮತ್ತು ಸ್ಥಳಗಳು ಬದಲಾಯಿಸಿ

ಕ್ರಮ ಸಂಖ್ಯೆ ಸ್ಥಳ ದಿನಾಂಕಗಳು ಸೂಚಿಸಿದ ವಿಷಯ
ಮಂಗಳೂರು ಮಾರ್ಚ್ ೦೩-೦೪, ೨೦೧೮ ಕ್ರೀಡೆಯಲ್ಲಿ ಮಹಿಳೆ
ಉಜಿರೆ ಮಾರ್ಚ್ ೨೪ - ೨೫, ೨೦೧೮ ಮಹಿಳೆಯರ ಉಡುಪು ಮತ್ತು ಸೌಂದರ್ಯ ಸಾಧನಗಳು
ಉಡುಪಿ ಎಪ್ರಿಲ್ ೦೭-೦೮, ೨೦೧೮ ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆ
ಮೂಡುಬಿದಿರೆ ಎಪ್ರಿಲ್ ೧೪-೧೫, ೨೦೧೮ ಔಷಧೀಯ ಸಸ್ಯಗಳು
ಶಿವಮೊಗ್ಗ ಮೇ ೦೫-೦೬, ೨೦೧೮ ಮಹಿಳಾ ಆರೋಗ್ಯ
ಬೆಳಗಾವಿ ಜೂನ್ ೦೨-೦೩, ೨೦೧೮


ಭಾಗವಹಿಸಲು ಆಸಕ್ತಿ ಇರುವವರು ಆಯಾ ಸಂಪಾದನೋತ್ಸವದ ಪುಟದಲ್ಲಿ ನೋದಾಯಿಸಬೇಕಾಗಿ ವಿನಂತಿ.