ವಿಕಿಪೀಡಿಯ:ದಿಕ್ಸೂಚಿ (ವಿಕಿಪೀಡಿಯ ಸಂಪರ್ಕ ಕೊಂಡಿಗಳು)


ಈ ಲೇಖನ ವಿಕಿಪೀಡಿಯ ದಿಕ್ಸೂಚಿಯ ಭಾಗ
ದಿಕ್ಸೂಚಿ ಪುಟಗಳು...

ಮುಖ ಪುಟ
ಸಂಪಾದನೆ
ಅಕ್ಷರ ಜೋಡಣೆ ಮತ್ತು ವಿನ್ಯಾಸ
ವಿಕಿಪೀಡಿಯ ಸಂಪರ್ಕ ಕೊಂಡಿಗಳು
ಸಂಬಂಧಪಟ್ಟ ತಾಣಗಳ ಕೊಂಡಿಗಳು
ಬಾಹ್ಯ ಸಂಪರ್ಕ ಕೊಂಡಿಗಳು
ಚರ್ಚಾ ಪುಟಗಳು
ಗಮನಿಸಬೇಕಾದ ಸಂಗತಿಗಳು
ನೊಂದಣೆ
ನಾಮ ವರ್ಗಗಳು
ಮುಕ್ತಾಯ

ಇವನ್ನೂ ನೋಡಿ...

ಸಹಾಯ ಪುಟಗಳು


ಸಂಪರ್ಕ ಕೊಂಡಿಗಳು ವಿಕಿಪೀಡಿಯದ ಜೀವನಾಡಿ. ಸಂಪರ್ಕ ಕೊಂಡಿಗಳ ಮೂಲಕವೇ ಒಂದು ಲೇಖನಕ್ಕೆ ಸಂಬಂಧಪಟ್ಟ ಹಲವು ವಿಕಿಪೀಡಿಯ ಲೇಖನಗಳು, ಪತ್ರಿಕಾ ವರದಿಗಳು, ವೈಯಕ್ತಿಕ ಅನಿಸಿಕೆಗಳನ್ನು ಇತ್ಯಾದಿ ವಿವರಗಳನ್ನು ಓದಬಹುದು ಹಾಗೆಯೆ ಆ ಲೇಖನಗಳಲ್ಲಿರುವ ಸಂಪರ್ಕ ಕೊಂಡಿಗಳ ಮೂಲಕ ಇನ್ನಷ್ಟು ವಿವರಗಳನ್ನು ಅರಿಯಬಹುದು ಹೀಗೆ ಸಂಪರ್ಕ ಕೊಂಡಿಗಳ ಜಾಲದ ಸಹಾಯದಿಂದಲೆ ನಡೆಯುತ್ತದೆ ಜ್ಞಾನಾರ್ಜನೆ.


ಆಂತರಿಕ ಸಂಪರ್ಕ ಕೊಂಡಿಗಳು ಬದಲಾಯಿಸಿ

ಆಂತರಿಕ ಸಂಪರ್ಕ ಕೊಂಡಿಗಳು ವಿಕಿಪೀಡಿಯದಲ್ಲಿರುವ ಸಂಬಂಧಪಟ್ಟ ಇತರ ಲೇಖನಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಓದುಗರಿಗೆ ಒಂದು ಲೇಖನ ಓದುವಾಗ ಅದಕ್ಕೆ ಸಂಬಂಧಪಟ್ಟ ಇತರ ಲೇಖನಗಳು ಸುಲಭವಾಗಿ ದೊರಕುವಂತಾಗುತ್ತದೆ.


ಯಾವಾಗ ಸಂಪರ್ಕ ಕೊಂಡಿಗಳನ್ನ ಒದಗಿಸಬೇಕು? ಬದಲಾಯಿಸಿ

ವಿಕಿಪೀಡಿಯದಲ್ಲಿ ಆಂತರಿಕ ಸಂಪರ್ಕ ಕಲ್ಪಿಸುವ ಮುನ್ನ, ಕೆಳಗಿನ ಈ ವಿಷಯಗಳ ಬಗ್ಗೆ ಪರಾಮರ್ಶಿಸಿ.

  • ಯಾವ ಲೇಖನಕ್ಕೆ ಸಂಪರ್ಕ ಕೊಂಡಿ ಕಲ್ಪಿಸಬೇಕೆಂದಿರುವಿರೊ ಆ ಲೇಖನ ಪ್ರಸ್ತುತ ಲೇಖನಕ್ಕೆ ಸಂಬಂಧಪಟ್ಟಿದ್ದೆ?
  • ಯಾವ ಲೇಖನಕ್ಕೆ ಸಂಪರ್ಕ ಕೊಂಡಿ ಕಲ್ಪಿಸಬೇಕೆಂದಿರುವಿರೊ ಆ ಲೇಖನ ಈಗಾಗಲೆ ವಿಕಿಪೀಡಿಯದಲ್ಲಿದಯೆ ಅಥವಾ ವಿಕಿಪೀಡಿಯದಲ್ಲಿ ಇರಬೇಕೆಂದು ನಿಮಗಿಷ್ಟವೆ?


ಸಂಪರ್ಕ ಕೊಂಡಿಗಳನ್ನ ಒದಗಿಸುವುದು ಹೇಗೆ? ಬದಲಾಯಿಸಿ

ವಿಕಿಪೀಡಿಯದಲ್ಲಿರುವ ಒಂದು ಲೇಖನಕ್ಕೆ ಆಂತರಿಕ ಸಂಪರ್ಕ ಕೊಂಡಿ (ವಿಕಿ ಸಂಪರ್ಕ ಕೊಂಡಿ) ನಿರ್ಮಿಸಲು ನೀವು ಲೇಖನದ ಹೆಸರನ್ನು ಚೌಕ ಆವರಣದಲ್ಲಿ (ಬ್ರ್ಯಾಕೆಟ್‌ನಲ್ಲಿ) ಹಾಕಬೇಕು.

ಉದಾ.

[[ಕರ್ನಾಟಕ]] ಹೀಗೆ ಕಾಣುವುದು ಕರ್ನಾಟಕ

ವಿಕಿಪೀಡಿಯದ ಲೀಖನಗಳು ಹಲವು ನಾಮವರ್ಗದಲ್ಲಿರುತ್ತವೆ(ಹೆಚ್ಚಿನ ವಿವರಗಳಿಗಾಗಿ ನಾಮವರ್ಗಗಳ ಬಗ್ಗೆ ಇರುವ ಅಧ್ಯಾಯ ನೋಡಿ). ಯಾವುದೆ ನಾಮವರ್ಗದಲ್ಲಿರುವ ಲೇಖನಕ್ಕೆ ಸಂಪರ್ಕ ಕಲ್ಪಿಸಲು ಚೌಕ ಆವರಣದಲ್ಲಿ (ಬ್ರ್ಯಾಕೆಟ್‌ನಲ್ಲಿ) ನಾಮವರ್ಗ, ಲೇಖನ ಮತ್ತು ಅವುಗಳ ಮಧ್ಯೆ ':' ಅಥವಾ ವಿರಾಮ (ಕೊಲನ್) ಚಿಹ್ನೆ ಹಾಕಬೇಕು. ಉದಾ.

[[ವಿಕಿಪೀಡಿಯ:ಪ್ರಯೋಗ ಶಾಲೆ]] ಹೀಗೆ ಕಾಣುವುದು ವಿಕಿಪೀಡಿಯ:ಪ್ರಯೋಗ ಶಾಲೆ

ಗಮನಿಸಿ ಇಲ್ಲಿ ':' ಮೊದಲಿರುವ 'ವಿಕಿಪೀಡಿಯ'ಎಂಬ ಸೂಚಕ, 'ಪ್ರಯೋಗ ಶಾಲೆ' ಎಂಬ ಲೇಖನ ಮುಖ್ಯ ನಾಮವರ್ಗದಡಿಯಿರದೆ ವಿಕಿಪೀಡಿಯ ಎಂಬ ನಾಮವರ್ಗದಡಿಯಿದೆ ಎಂದು ಸೂಚಿಸುತ್ತದೆ.

ವಿಕಿಪೀಡಿಯದಲ್ಲಿ ಸಂಪಾದಿಸುವಾಗ ಲೇಖನದ ಹೆಸರು ಒಂದಿದ್ದು ನಾವು ದರ್ಶಿಸಲಿಚ್ಚಿಸುವ ಪದ ಬೇರೆ ಇರುವಂಥ ಪರಿಸ್ಥಿತಿ ಎದುರಾಗುವುದು ಸಾಮಾನ್ಯ. ಉದಾ.

ಲೇಖನದ ಹೆಸರು 'ಮೈಸೂರು' ಇದ್ದು ನಾವು ಲೇಖನದಲ್ಲಿ 'ಮೈಸೂರಿನ' ಎಂಬ ಪದ ಪ್ರಯೋಗಿಸಿ ಸಂಪರ್ಕ ಕಲ್ಪಿಸಬೇಕು
ಲೇಖನದ ಹೆಸರು 'ವಿಕಿಪೀಡಿಯ:ಪ್ರಯೋಗ ಶಾಲೆ' ಆದರೆ 'ಇಲ್ಲಿ ಅಭ್ಯಾಸಿಸಿ' ಎಂಬ ಪದ ಪ್ರಯೋಗಿಸಿ ಸಂಪರ್ಕ ಕಲ್ಪಿಸಬೇಕು

ಈ ತರಹದ ಪರಿಸ್ಥಿತಿ ಬಂದಾಗ '|' ಅಥವಾ ಪೈಪ್ ಚಿಹ್ನೆ ಬಳಸಬೇಕು. ಮೇಲೆ ಉದಹರಿಸಿದ ವಿಷಯಗಳನ್ನೆ ಮತ್ತೆ ನೋಡೋಣ.

[[ಮೈಸೂರು|ಮೈಸೂರಿನ]] ಹೀಗೆ ಕಾಣುತ್ತದೆ ಮೈಸೂರಿನ
[[ವಿಕಿಪೀಡಿಯ:ಪ್ರಯೋಗ ಶಾಲೆ|ಇಲ್ಲಿ ಅಭ್ಯಾಸಿಸಿ]] ಹೀಗೆ ಕಾಣುತ್ತದೆ ಇಲ್ಲಿ ಅಭ್ಯಾಸಿಸಿ

ಗಮನವಿರಲಿ ಪೈಪ್ ಚಿಹ್ನೆಯ ಮೊದಲು ಲೇಖನದ ಹೆಸರು ಬರಬೇಕು ಹಾಗು ಪೈಪ್ ಚಿಹ್ನೆಯ ನಂತರ ನೀವು ದರ್ಶಿಸಲಿಚ್ಚಿಸುವ ಪದ.

ಗಮನವಿರಲಿ ವಿಕಿಪೀಡಿಯ ಚೌಕ ಬ್ರ್ಯಾಕೆಟ್‌ನಲ್ಲಿರುವ ಯಾವುದೆ ಪದಗಳನ್ನು ಒಂದು ಲೇಖನದ ಶೀರ್ಷಿಕೆಯೆಂದು ಪರಿಗಣಿಸುತ್ತದೆ. ಕೆಲವೊಮ್ಮೆ ಒಂದೆ ಹೆಸರಿನ ಆದರೆ ಬೇರ ವಿಶಿಷ್ಟ ವಿಷಯಗಳ ಲೇಖನಗಳು ಇದ್ದು, ತಪ್ಪು ಸಂಪರ್ಕದಿಂದ ಗೊಂದಲ ಉಂಟಾಗಬಹುದು (ಉದಾ. ಕಾಯಿ. ಗಿಡದಲ್ಲಿ ಬಿಡುವ ಕಾಯಿ ಬೇರೆ ಪಗಡೆ ಆಟದಲ್ಲಿ ಬಳಸುವ ಕಾಯಿ ಬೇರೆ).

ದಿನಾಂಕಗಳಗೆ ಸಂಪರ್ಕ ಬದಲಾಯಿಸಿ

ದಿನಾಂಕಗಳಿಗೆ ಸಂಪರ್ಕ ಕಲ್ಪಿಸುವುದು ಅಷ್ಟು ಸಮಂಜಸವಲ್ಲವೆನ್ನಿಸಬಹುದು. ಆದರೆ ಹಾಗೆ ಮಾಡುವುದರಿಂದ ನೊಂದಾಯಿಸಿದ ಬಳಕೆದಾರರು ದಿನಾಂಕ ಸಂಬಂಧಿತ ಆಯ್ಕೆಯಲ್ಲಿ ಆರಿಸಿದ ನಮೂನೆಯಲ್ಲಿ ದಿನಾಂಕ ಪ್ರದರ್ಶಿಸಲು ಅವಕಾಶವಾಗುತ್ತದೆ. ಸಂಪರ್ಕ ಕಲ್ಪಿಸದ ದಿನಾಂಕ ಉದಾ: ಆಗಸ್ಟ್ ೧೫, ೧೯೪೭ ಎಲ್ಲ ಬಳಕೆದಾರರಿಗೆ ಹಾಗೆ ಕಾಣಿಸಿಕೊಳ್ಳುವುದು. ಆದರೆ ಸಂಪರ್ಕ ಕಲ್ಪಿಸಿದ ದಿನಾಂಕ ಉದಾ. [[ಆಗಸ್ಟ್ ೧೫]], [[೧೯೪೭]] ವಿಕಿಪೀಡಿಯದ ಬಳಕೆದಾರರು ಆರಿಸಿಕೊಂಡ ಈ ಕೆಳಗಿನ ನಮೂನೆಗಳಲ್ಲಿನ ಒಂದರಂತೆ ಕಾಣಿಸಿಕೊಳ್ಳುತ್ತದೆ.

ಆಗಸ್ಟ್ ೧೫, ೧೯೪೭
೧೫ ಆಗಸ್ಟ್ ೧೯೪೭
೧೯೪೭ ಆಗಸ್ಟ್ ೧೫
೧೯೪೭-೦೮-೧೫

ಗಮನಿಸಿ ಈ ಸೌಕರ್ಯ ಕೇವಲ ನೊಂದಾಯಿತ ಸದಸ್ಯರಿಗೆ ಮಾತ್ರ ಲಭ್ಯ.

ವರ್ಗಗಳು ಬದಲಾಯಿಸಿ

ಲೇಖನಗಳ ವರ್ಗೀಕರಣ ಒಂದು ಉತ್ತಮ ಹಾಗು ಅಪೇಕ್ಷಾರ್ಹ ಪದ್ದತಿ. ನೀವು ನಿಮ್ಮ ಲೇಖನಗಳನ್ನು ಸೂಕ್ತ ವರ್ಗಗಳಡಿ ಇಡುವುದರಿಂದ ಆ ವರ್ಗಕ್ಕೆ ಸಂಬಂಧಪಟ್ಟ ಎಲ್ಲ ಲೇಖನಗಳ ಕೊಂಡಿಗಳನ್ನು ಒಂದು ಕಡೆ ಕಲೆ ಹಾಕಿದಂತಾಗುತ್ತದೆ. ಯಾವುದೆ ಲೇಖನವನ್ನು ಸಂಬಂಧಪಟ್ಟ ವರ್ಗಕ್ಕೆ ಸೇರಿಸಲು ಚೌಕ ಬ್ರ್ಯಾಕೆಟ್‌ಗಳ ಮಧ್ಯೆ category: ನಂತರ ವರ್ಗದ ಹೆಸರು ಬರೆಯಬೇಕು. ವಿವರಣೆ ಸ್ವಲ್ಪ ಕ್ಲಿಷ್ಟಕರವೆನ್ನಿಸಿತೆ? ಈಗ ಒಂದು ಉದಾಹರಣೆಯೊಂದಿಗೆ ಮತ್ತೆ ವರ್ಗಗಳಿಗೆ ಬರೋಣ.

ಈಗ ವಿಕಿಪೀಡಿಯದಲ್ಲಿರುವ ಶಿವಮೊಗ್ಗ ಲೇಖನ ಪರಿಶೀಲಿಸೋಣ. ಈ ಲೇಖನ 'ಭೂಗೋಳ' ಮತ್ತು 'ಕರ್ನಾಟಕದ' ಜಿಲ್ಲೆಗಳು ಎಂಬ ಎರಡು ವರ್ಗಕ್ಕೆ ಸೇರಿದೆ.ಈ ಲೇಖನದ ಲೇಖಕರು [[Category: ಭೂಗೋಳ]] ಮತ್ತು [[Category:ಕರ್ನಾಟಕದ ಜಿಲ್ಲೆಗಳು]] ಎಂಬ ವಿಕಿ ವರ್ಗ ಸಂಕೇತವನ್ನು ಆ ಲೇಖನದಲ್ಲಿ ಸೇರಿಸುವ ಮೂಲಕ ಲೇಖನವನ್ನು ಆ ಎರಡು ವರ್ಗದಡಿ ಇರಿಸಿರುವರು.

ವಿಕಿಪೀಡಿಯದಲ್ಲಿ ಈಗಾಗಲೆ ಇರುವ ವರ್ಗಗಳನ್ನು ವೀಕ್ಷಿಸಲು ವಿಕಿಪೀಡಿಯ:ವಿಹರಿಸಿ ಪುಟ ನೋಡಿ. ನಿಮ್ಮ ಲೇಖನ ಈ ಪುಟದಲ್ಲಿ ಪಟ್ಟಿ ಮಾಡಿರುವ ವರ್ಗಗಳಲ್ಲಿ ಯಾವುದರಡಿ ಇಡಬೇಕೆಂದು ಪರಿಶೀಲಿಸಿ ನಂತರ ಮೇಲೆ ವಿವರಿಸಿದ ಕ್ರಮ ಕೈಗೊಳ್ಳಿ. ಆಕಸ್ಮಾತ್ ನಿಮ್ಮ ಲೇಖನ ವಿಕಿಪೀಡಿಯ:ವಿಹರಿಸಿ ಪುಟದಲ್ಲಿರವ ಯಾವುದೇ ವರ್ಗಕ್ಕೆ ಸೇರದೆ, ನೀವು ಹೊಸ ವರ್ಗ ಸೃಷ್ಟಿಸಬೇಕಾದ ಪರಿಸ್ಥಿತಿ ಎದುರಾದಾಗ, ಮೇಲೆ ತಿಳಿಸಿದ ರೀತಿಯಲ್ಲಿಯೆ ವರ್ಗ ಸೂಚಕ ಬರೆಯಿರಿ. ವಿಕಿಪೀಡಿಯ ತಾನಾಗಿಯೆ ಆ ವರ್ಗ ಸೃಷ್ಟಿಸುವುದು. ಉದಾ. ನೀವು 'ತಾಲಿಸಾದಿ ಚೂರ್ಣ' ಎಂಬ ಲೇಖನ ಬರೆದಿರೆಂದುಕೊಳ್ಳಿ, ನೀವು ಈ ಲೇಖನವನ್ನು 'ಆಯುರ್ವೇದದ ಔಷಧಿಗಳು' ಮತ್ತು 'ಕಫಾ ನಿವಾರಕಗಳು' ಎಂಬ ಎರಡು ವರ್ಗಗಳಡಿ ಸೇರಿಸಬೇಕೆಂದು ಬಯಸಿರುವಿರೆಂದುಕೊಳ್ಳಿ. ಆದರೆ ಆ ವರ್ಗಗಳು ನಿಮಗೆ ವಿಕಿಪೀಡಿಯ:ವಿಹರಿಸಿ ಪುಟದಲ್ಲಿ ಕಾಣಿಸದಾಗ ಅಥವಾ ಅವುಗಳು ಇಲ್ಲದ ಪಕ್ಷದಲ್ಲಿ, ನೀವು ಲೇಖನದ ಕೊನೆಯಲ್ಲಿ [[Category: ಆಯುರ್ವೇದದ ಔಷಧಿಗಳು]] [[Category: ಕಫಾ ನಿವಾರಕಗಳು]] ಎಂಬ ಸಾಲುಗಳನ್ನು ಸೇರಿಸಿದರೆ, ವಿಕಿಪೀಡಿಯ ತಾನಾಗಿಯೆ ಅ ಎರಡು ವರ್ಗಗಳನ್ನು ಸೃಷ್ಟಿಸುತ್ತದೆ.

ಸೂಚನೆ:ಹೊಸ ವರ್ಗ ಸೃಷ್ಟಿಸುವ ಮೊದಲು ಆ ವರ್ಗ ಅಥವಾ ಅದೆ ಅರ್ಥ ಸೂಚಿಸುವ ಬೇರೆ ವರ್ಗಗಳು ವಿಕಿಪೀಡಿಯದಲ್ಲಿ ಇಲ್ಲವೆಂದು ಖಾತ್ರಿ ಪಡೆದ ನಂತರವೆ ಹೊಸ ವರ್ಗ ಸೃಷ್ಟಿಸಿ.

ವರ್ಗದ ಪುಟಕ್ಕೆ ಸಂಪರ್ಕ ಕೊಂಡಿ ನಿರ್ಮಿಸಲು, Category ಮುಂದೆ ವಿರಾಮ ಚಿಹ್ನೆ ಹಾಕಬೇಕು. ಉದಾ.

[[:Category:ಕರ್ನಾಟಕದ ಜಿಲ್ಲೆಗಳು]] ಹೀಗೆ ಕಾಣುತ್ತದೆ ವರ್ಗ:ಕರ್ನಾಟಕದ ಜಿಲ್ಲೆಗಳು.

ನೀವು ಸೃಷ್ಟಿಸಿದ ವರ್ಗವನ್ನು ವಿಕಿಪೀಡಿಯ:ವಿಹರಿಸಿ ಪುಟದಲ್ಲಿ ಪಟ್ಟಿ ಮಾಡಿದರೆ ಎಲ್ಲಾ ಬಳಕೆದಾರರಿಗೆ ಅದನ್ನು ಬಳಸಲು ಸಹಾಯವಾಗುತ್ತದೆ.

ಎಲ್ಲಾ ವರ್ಗಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಹೊಸ ಲೇಖನ ಬದಲಾಯಿಸಿ

ಅಚ್ಚುಗಳು ಬದಲಾಯಿಸಿ

ಅಚ್ಚುಗಳು ಅಥವಾ ಟೆಂಪ್ಲೇಟ್‌ಗಳು ಒಂದು ಪುಟದ ಭಾಗವಾಗಿ ಸೇರಿಸಬಹುದಾದ ಹಾಗು ಪುನರ್ ಬಳಸಬಹುದಾದ ಒಂದು ತುಣುಕು ಪುಟ. ಈ ಪುಟದಲ್ಲಿರುವ ವಿವರ ಯಾವುದೆ ವಿಷಯದ ಬೆಗ್ಗೆ ಲೇಖನವಲ್ಲ ಆದರೆ ಲೇಖನದ ದರ್ಶನೀಯತೆ ಅಥವಾ ಲೇಖನಕ್ಕೆ ಸಂಬಂಧಪಟ್ಟ ಇತರೆ ಮಾಹಿತಿ ನೀಡುವ ಒಂದು ಭಾಗ. ಉದಾ. ಈ ಪುಟದಲ್ಲಿ 'ದಿಕ್ಸೂಚಿ ಪರಿವಿಡಿ' ಮತ್ತು 'ದಿಕ್ಸೂಚಿ ವಿವರ' ಎಂಬ ಎರಡು ಅಚ್ಚುಗಳ ಬಳಕೆಯಾಗಿದೆ. 'ದಿಕ್ಸೂಚಿ ವಿವರ' ಪುಟದ ಮೇಲೆ ಹಾಗು ಕೆಳಗೆ ಕಾಣುವ ಅಧ್ಯಾಯಗಳ ಪಟ್ಟಿ ತೋರಿಸುವುದು ಹಾಗು 'ದಿಕ್ಸೂಚಿ ವಿವರ'ಪುಟದ ಬಲ ಭಾಗದಲ್ಲಿರುವ ಚಿತ್ರವುಳ್ಳ ಹಾಗು ವರ್ಣಮಯ ಅಧ್ಯಾಯಗಳ ಪಟ್ಟಿ ತೋರಿಸುವುದು. ಅಚ್ಚುಗಳ ಬಳಕೆಯಿಂದ ನಿಮ್ಮ ಲೇಖನದ ಕೆಲವು ವಿಭಾಗಗಳನ್ನು ಪದೇ ಪದೇ ಬರೆಯುವುದು ತಪ್ಪುತ್ತದೆ. ಮೇಲೆ ಹೆಸರಿಸಿದ ಎರಡು ಅಚ್ಚುಗಳನ್ನು ಈ ದಿಕ್ಸೂಚಿಯ ಎಲ್ಲಾ ಪುಟಗಳಲ್ಲಿ ಬಳಸಲಾಗಿದೆ. ಅಚ್ಚು ಬಳಸಲು ನೀವು ಹೂವಿನ ಬ್ರ್ಯಾಕೆಟ್‌ಗಳ ನಡುವೆ ಅಚ್ಚಿನ ಹಸರು ಬರೆಯಬೇಕಾಗುತ್ತದೆ. ಉದಾ. ಒಂದು ಸಣ್ಣ ಲೇಖನದ ಕೆಳಗೆ {{ಚುಟುಕು}} ಎಂದು ಸೇರಿಸಿದರೆ ಆ ಪುಟದಲ್ಲಿ ಕೆಳಗೆ ಕಾಣಿಸಿರುವ ಭಾಗ ಸೇರಿಕೊಳ್ಳುವುದು.

ಸೂಚನೆ: ನೀವು ಬರೆದೆ ಪುಟ ಅಪೂರ್ಣ ಹಾಗು ಚುಟುಕಾಗಿದ್ದ ಪಕ್ಷದಲ್ಲಿ {{ಚುಟುಕು}} ಅಚ್ಚನ್ನು ಮರೆಯದೆ ಬಳಸಿ.

ಗಮನಿಸಬೇಕಾದ ಅಂಶವೆಂದರೆ ಅಚ್ಚುಗಳನ್ನು ಲೇಖನದ ಯಾವುದೆ ಭಾಗದಲ್ಲಿ ಸೇರಿಸಬಹುದು.


ಅಚ್ಚುಗಳ ಸೃಷ್ಟಿಸುವುದು ಮತ್ತು ಅವುಗಳ ಜಾತಿಗಳ ಬಗ್ಗೆ ಹೆಚ್ಚಿನ ವಿವರಗಳಿಗೆ ಸಂಬಂಧಿತ ಸಹಾಯ ಪುಟ ನೋಡಿ.

ಅಚ್ಚಿನ ಪುಟಕ್ಕೆ ಸಂಪರ್ಕ ಕೊಂಡಿ ನಿರ್ಮಿಸಲು, Template ಮುಂದೆ ವಿರಾಮ ಚಿಹ್ನೆ ಹಾಕಬೇಕು. ಉದಾ.

[[:Template:ದಿಕ್ಸೂಚಿ ವಿವರ]] ಹೀಗೆ ಕಾಣುತ್ತದೆ Template:ದಿಕ್ಸೂಚಿ ವಿವರ.

ಎಲ್ಲಾ ಅಚ್ಚುಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ