ಕನ್ನಡದ ಉದಯೋನ್ಮುಖ ಕವಿಗಳಲ್ಲಿ ವಾಸುದೇವ ನಾಡಿಗ್ ರಿಗೆ ವೀಶೇಷ ಸ್ಥಾನವಿದೆ. ವೃತ್ತಿಯಿಂದ ಅಧ್ಯಾಪಕರು ಪ್ರವೃತ್ತಿಯಿಂದ ಕವಿ.

ವಾಸುದೇವ ನಾಡಿಗ್
ವಾಸುದೇವ ನಾಡಿಗ್
ವೃತ್ತಿಕನ್ನಡ ಅಧ್ಯಾಪಕ
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ

ಬಾಲ್ಯ, ವಿದ್ಯಾಭ್ಯಾಸ ಬದಲಾಯಿಸಿ

ಶಿವಮೊಗ್ಗದ ಡಿ.ವಿ.ಎಸ್. ಕಾಲೇಜಿನಲ್ಲಿ ಬಿ.ಎ. ಮುಗಿಸಿ ಕುವೆಂಪು ವಿಶ್ವ ವಿದ್ಯಾನಿಲಯದಿಂದ ಕನ್ನಡ ಎಂ.ಎ.ಪದವಿ. ತುಮಕೂರು ಶ್ರೀ ಸಿದ್ಧಗಂಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಎಡ್ ವಿದ್ಯಾರ್ಥಿ ಯಾಗಿ ದ್ದಾಗಲೇ ಕೆ ಎಸ್ ನರಸಿಂಹ ಸ್ವಾಮಿ ಅವರ ಅಧ್ಯಕ್ಷ ತೆ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯಲ್ಲಿ ಭಾಗವಹಿಸಿದ್ದರು.

ಅಳ್ವಾಸ್ ಕನ್ನಡ ನುಡಿಸಿರಿ ಕವಿ ಸಮಯ, ಮೈಸೂರು ದಸರಾ ಕವಿಗೋಷ್ಟಿಗಳಲ್ಲಿ ಭಾಗವಹಿಸಿದ್ದಾರೆ. ಭದ್ರಾವತಿ, ಚಿತ್ರದುರ್ಗ ಆಕಾಶವಾಣಿಗಳಲ್ಲಿ ಭಾಷಣ, ಚಿಂತನ, ಕಾವ್ಯ ವಾಚನಗಳಲ್ಲಿ ಭಾಗವಹಿದ್ದಾರೆ.

ವೃತ್ತಿ ಜೀವನ ಬದಲಾಯಿಸಿ

೧೯೯೪ ರಿಂದ ೧೯೯೮ ರ ವರೆಗೆ ದಾವಣಗೆರೆ ಶ್ರೀ ತರಳಬಾಳು ಕಾಲೇಜು ಮತ್ತು ಫ್ರೌಢಶಾಲೆಯಲಿ ಕನ್ನಡ ಅಧ್ಯಾಪಕ

೨೦೦೪ ರಿಂದ ೨೦೧೨ರವರೆಗೆ ಜವಾಹರ ನವೋದಯ ವಿದ್ಯಾಲಯ, ಎನಿಗದಲೆ, ಚಿಂತಾಮಣಿಯಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಪ್ರಸ್ತುತ ಉತ್ತರ ಪ್ರದೇಶದ ಜಾಲೌನ್ ಜಿಲ್ಲೆಯ ಓರೈಯ ಜವಾಹರ ನವೋದಯ ವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿದ್ದಾರೆ.

ಪ್ರಸ್ತುತ ೨೦೧೮ ಜೂನ್ ೧ ರಿಂದ ಜವಾಹರ ನವೋದಯ ವಿದ್ಯಾಲಯ ಕನಕಪುರ ರಾಮನಗರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಣೆ

ಪ್ರಕಟಿತ ಕೃತಿಗಳು ಬದಲಾಯಿಸಿ

  1. ವೃಷಭಾಚಲದ ಕನಸು
  2. ಹೊಸ್ತಿಲು ಹಿಮಾಲಯದ ಮಧ್ಯೆ
  3. ಭವದ ಹಕ್ಕಿ
  4. ವಿರಕ್ತರ ಬಟ್ಟೆಗಳು
  5. ನಿನ್ನ ಧ್ಯಾನದ ಹಣತೆ
  6. ಅಲೆ ತಾಕಿದರೆ ದಡ

ಪ್ರಶಸ್ತಿಗಳು ಬದಲಾಯಿಸಿ

  1. ಬೇಂದ್ರೆ ಅಡಿಗ ಕಾವ್ಯ ಪ್ರಶಸ್ತಿ ವೃಷಭಾಚಲದ ಕನಸು ಕೃತಿಗೆ (೧೯೯೮)
  2. ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಶ ಪ್ರಶಸ್ತಿ ಭವದ ಹಕ್ಕಿ ಕೃತಿಗೆ (೨೦೦೭)
  3. ರಾಷ್ಟ್ರಕವಿ ಗೋವಿಂದ ಪೈ ಪ್ರತಿಷ್ಟಾನದ ಕಡೆಂಗೋಡ್ಲು ಪ್ರಶಸ್ತಿ ನಿನ್ನ ಧ್ಯಾನದ ಹಣತೆ ಕೃತಿಗೆ (೨೦೧೪)
  4. ಶಿವಮೊಗ್ಗ ಕರ್ನಾಟಕ ಸಂಘದ ಜಿ ಎಸ್ ಶಿವರುದ್ರಪ್ಪ ಕಾವ್ಯ ಪ್ರಶಸ್ತಿ ೨೦೧೬