ವಾಸುಕಿ ವೈಭವ್
ವಾಸುಕಿ ವೈಭವ್(ಜನನ:೭ ಡಿಸೆಂಬರ್ ೧೯೯೧) ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ರಂಗಭೂಮಿ ಕಲಾವಿದ, ಗೀತ ರಚನಕಾರ, ಸಂಗೀತ ನಿರ್ದೇಶಕ ಮತ್ತು ಗಾಯಕ. ಕಾಗದದ ದೋಣಿಯಲಿ ಹಾಡಿನಿಂದ ಖ್ಯಾತಿ ಪಡೆದ ಇವರು ಕನ್ನಡ ಚಲನಚಿತ್ರೋದ್ಯಮದ ಪ್ರಮುಖ ಗಾಯಕರಲ್ಲಿ ಒಬ್ಬರು. ೨೦೧೬ ರಲ್ಲಿ ತೆರೆಕಂಡ ರಾಮಾ ರಾಮಾ ರೇ ಚಿತ್ರದ ಸಂಗೀತದಿಂದ ಇವರು ಪ್ರಸಿದ್ಧಿ ಪಡೆದರು. ನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಸಂಗೀತ ಇವರಿಗೆ ಇನ್ನಷ್ಟು ಕೀರ್ತಿ ತಂದು ಕೊಟ್ಟಿತು.[೨]
ವಾಸುಕಿ ವೈಭವ್ | |
---|---|
ಜನ್ಮನಾಮ | ವಾಸುಕಿ ವೈಭವ್ |
ಜನನ | ಬೆಂಗಳೂರು, ಕರ್ನಾಟಕ |
ಸಂಗೀತ ಶೈಲಿ | ಚಲನಚಿತ್ರ ಧ್ವನಿಪಥ |
ವೃತ್ತಿ |
|
ವಾದ್ಯಗಳು | ಗಿಟಾರ್ , ಕೀಬೋರ್ಡ್ |
ಸಕ್ರಿಯ ವರ್ಷಗಳು | ೨೦೧೬ – |
Associated acts | ಬಿ. ಅಜನೀಶ್ ಲೋಕನಾಥ್ ರಘು ದೀಕ್ಷಿತ್ ಅನೂಪ್ ಸೀಳಿನ್ ಕೆ.ಕಲ್ಯಾಣ್[೧] |
ಜನನ ಮತ್ತು ವೈಯಕ್ತಿಕ ಜೀವನ
ಬದಲಾಯಿಸಿವಾಸುಕಿಯವರು ೭ ನೇ ಡಿಸೆಂಬರ್ ೧೯೯೧ ರಂದು ಮೈಸೂರಿನಲ್ಲಿ ಜನಿಸಿದರು . ಇವರ ತಂದೆ ಕೆ. ಜಯರಾಮ್ .[೩]
ಶಿಕ್ಷಣ
ಬದಲಾಯಿಸಿವಾಸುಕಿ ಇವರು ಜನಿಸಿದ್ದು ಮೈಸೂರಿನಲ್ಲಿ , ಬೆಳೆದದ್ದು ಬೆಂಗಳೂರಿನಲ್ಲಿ . ಇವರು ಈಸ್ಟ್ ವೆಸ್ಟ್ ಶಾಲೆಯಿಂದ ಮತ್ತು ಬೆಂಗಳೂರಿನ ಜನ ಸೇವಾ ವಿದ್ಯಾ ಕೇಂದ್ರದಿಂದ ಶಾಲಾ ಶಿಕ್ಷಣವನ್ನು ಪಡೆದರು . ನಂತರ ಇವರು ಸುರಾನ ಕಾಲೇಜ್ ಆಫ್ ಆರ್ಟ್ಸ್ ಸೈನ್ಸ್ , ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಬೆಂಗಳೂರಿನಲ್ಲಿ ಬಿ.ಕಾಂ ನಲ್ಲಿ ಪದವಿ ಪಡೆದರು . ವೈಭವ್ ರವರು ಮಾಸ್ ಕಮ್ಯುನಿಕೇಷನ್ ಎಂಬ ವಿಷಯದಲ್ಲಿ ದಯಾನಂದ ಸಾಗರ್ ಸಂಸ್ಥೆಯಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು .[೪]
ವೃತ್ತಿ
ಬದಲಾಯಿಸಿಇವರು ತನ್ನ ವೃತ್ತಿಜೀವನವನ್ನು ರಂಗಭೂಮಿ ಕಲಾವಿದನಾಗಿ ಪ್ರಾರಂಭಿಸಿದರು ಹಾಗೇ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ರಂಗಭೂಮಿ ಕಲಾವಿದ, ಗೀತ ರಚನಕಾರ, ಸಂಗೀತ ನಿರ್ದೇಶಕ ಮತ್ತು ಗಾಯಕ. ನಾಟಕ ಮಾಡುವ ಅಪಾರ ಹುಚ್ಚು ಇದ್ದ ಇವರು ಗೀತರಚನೆಯೊಂದಿಗೆ ಅವುಗಳಿಗೆ ಸಂಗೀತ ಸಂಯೋಜನೆ ಮಾಡಿ ಹಾಡುತ್ತಿದ್ದರು . ಗಾಯನದಿಂದ ಹೊರತುಪಡಿಸಿ ಇವರು ಉತ್ತಮ ನಟರು ಹೌದು .[೫] ಇವರು ೨೦೧೬ ನಲ್ಲಿ ತೆರೆಗೆ ಬಂದ ಉರ್ವಿ ಚಿತ್ರದ ಮೂಲಕ ತನ್ನ ನಟನೆಯನ್ನು ಪ್ರಾರಂಭಿಸಿದರು . ಇದಲ್ಲದೆ , ಇವರ ದಡ್ಡ ಎಂಬ ಹಾಡು ದಕ್ಷಿಣ ಭಾರತದಲ್ಲಿ ಬಹಳ ಜನಪ್ರಿಯವಾಗಿದೆ .[೬]
ಕನ್ನಡ ಚಲನಚಿತ್ರ ಮತ್ತು ಸಂಗೀತೋದ್ಯಮದೊಂದಿಗೆ ಸಂಬಂಧ ಹೊಂದಿರುವ ಇವರು ವಸುಂಧರಾ (೨೦೧೪), ಪಟ್ಟಾಭಿಷೇಕ (೨೦೧೫) [೭], ರಾಮ ರಾಮ ರೇ (೨೦೧೬) , ಹ್ಯಾಪಿ ನ್ಯೂ ಇಯರ್ (೨೦೧೭)[೮] , ವಿಸ್ಮಯ (೨೦೧೭) [೯], ಕಾಲೇಜು ಕುಮಾರ್ (೨೦೧೭) ನಂತಹ ಚಿತ್ರಗಳಿಗೆ ಅವರು ತಮ್ಮ ಧ್ವನಿಯನ್ನು ನೀಡಿದ್ದಾರೆ. ಚೂರಿಕಟ್ಟೆ (೨೦೧೮) , ಕಾನೂರಾಯಣ (೨೦೧೮)[೧೦] , ಒಂದಲ್ಲಾ ಎರಡಲ್ಲಾ (೨೦೧೮)[೧೧] ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು (೨೦೧೮)[೧೨] ಇವರ ಸಂಯೋಜನೆಗಳ ಸಾಲುಗಳಲ್ಲಿ ಸೇರಿವೆ.
[೧೩]
ಡಿಸ್ಕೋಗ್ರಾಫಿ
ಬದಲಾಯಿಸಿಸಂಯೋಜಕರಾಗಿ
ಬದಲಾಯಿಸಿವರುಷ | ಆಲ್ಬಮ್ | ಭಾಷೆ | ಟಿಪ್ಪಣಿ |
---|---|---|---|
೨೦೧೬ | ರಾಮ ರಾಮ ರೇ | ಕನ್ನಡ | ಮೂರೂ ಹಾಡುಗಳನ್ನು ಹಾಡಿದ್ದಾರೆ |
೨೦೧೮ | ಆಟಗದರ ಸಿವ[೧೪] | ತೆಲುಗು | |
ಚೂರಿಕಟ್ಟೆ | ಕನ್ನಡ | ||
ಸರ್ಕಾರಿ ಹಿ.ಪ್ರಾ.ಶಾಲೆ , ಕಾಸರಗೋಡು , ಕೊಡುಗೆ : ರಾಮಣ್ಣ ರೈ | ನಾಮಿರ್ದೇಶನ - ಅತ್ಯುತ್ತಮ ಸಂಗೀತ ನಿರ್ದೇಶಕ - ಕನ್ನಡ , ಸೈಮಾ ಪ್ರಶಸ್ತಿ | ||
ಒಂದಲ್ಲಾ ಎರಡಲ್ಲಾ | |||
೨೦೧೯ | ಭಿನ್ನಾ | [೧೫] | |
ಮುಂದಿನ ನಿಲ್ದಾಣ | ಇನ್ನೂ ಬೇಕಾಗಿದೆ ಹಾಡು | ||
ಕಥಾ ಸಂಗಮ | ೭ ಸಂಗೀತ ನಿರ್ದೇಶಕರಲ್ಲಿ ಒಬ್ಬರು[೧೬] |
ನಟನಾಗಿ
ಬದಲಾಯಿಸಿದೂರದರ್ಶನ
ಬದಲಾಯಿಸಿ- ಬಿಗ ಬಾಸ್ ೭ ರಲ್ಲಿ ಸ್ಪರ್ಧಿಯಾಗಿ .[೧೯]
ಪ್ರಶಸ್ತಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Meet the voice behind Kaagadada Doniyalli", Times of India, 2017-05-12
- ↑ https://kannada.filmibeat.com/celebs/vasuki-vaibhav/biography.html
- ↑ https://www.deccanherald.com/metrolife/metrolife-cityscape/on-my-pinboard-vasuki-vaibhav-738493.html
- ↑ [೧][ಶಾಶ್ವತವಾಗಿ ಮಡಿದ ಕೊಂಡಿ]
- ↑ A rustic Vasuki Vaibhav , UpdatedOct 12, 2016, 6:42 am IST
- ↑ https://m.dailyhunt.in/news/india/kannada/udayavani-epaper-udayavani/ivane+rishab+shettara+dadda+pravina+supar+saang+vikshisi-newsid-90739580 ವಾಸುಕಿ ವೈಭವ್ ರವರು ಹಾಡಿರುವ ದಡ್ಡ ಹಾಡು[
- ↑ https://mywordsnthoughts.com/myworld/biography/vasuki-vaibhav-the-voice-behind-the-popular-kannada-song-kaagadada-doniyalli/
- ↑ ಪ್ರೀತಿಯಾ ಹೆಸರೇ ನೀನು
- ↑ ವಿಸ್ಮಯ ಚಿತ್ರದ ಎರಡು ಹಾಡುಗಳಿಗೆ ವಾಸುಕಿರವರ ಧ್ವನಿ
- ↑ ಕಾನೂರಾಯಣ
- ↑ ಎರಡಲ್ಲಾ [ಶಾಶ್ವತವಾಗಿ ಮಡಿದ ಕೊಂಡಿ]
- ↑ ವಾಸುಕಿ ವೈಭವ್ ಹಾಡಿರುವ ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು ಚಿತ್ರದ ಕರಾವಳಿ ಹಾಡು
- ↑ https://in.bookmyshow.com/person/vasuki-vaibhav/1056054
- ↑ ಆಟಗದರ ಸಿವ
- ↑ Title montage
- ↑ "೭ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿ ವಾಸುಕಿ ವೈಭವ್". Archived from the original on 2019-12-06. Retrieved 2019-12-06.
- ↑ ಉರ್ವಿ ಸಿನಿಮಾದಲ್ಲಿ ವಾಸುಕಿ ವೈಭವ್
- ↑ "ಆರ್ಕೈವ್ ನಕಲು". Archived from the original on 2019-12-06. Retrieved 2019-12-06.
- ↑ ಬಿಗ ಬಾಸ್ ೭ ರಲ್ಲಿ ಸ್ಪರ್ಧಿಯಾಗಿ ವಾಸುಕಿ ವೈಭವ್
- ↑ "The awards season kickstarts", Banglore Mirror, 2019-01-11
- ↑ https://vijaykarnataka.com/entertainment/gossip/sri-raghavendra-chitravani-award/articleshow/67436894.cms