ಡಾ. ವಸು ಮಳಲಿ ಅವರು ಇತಿಹಾಸ ಪ್ರಾಧ್ಯಾಪಕಿ, ಕನ್ನಡ ಲೇಖಕಿ, ಅಂಕಣಕಾರ್ತಿ, ಚಿಂತಕಿ ಹಾಗೂ ಸಿನಿಮಾ ನಿರ್ದೇಶಕಿ. ಅವರು ಕನ್ನಡ ಸಾಹಿತಿ ಮಳಲಿ ವಸಂತ ಕುಮಾರ್ ಹಾಗು ಶಾಂತ ವಸಂತಕುಮಾರ್ ಅವರ ಹಿರಿಯ ಪುತ್ರಿ.

ವಸು ಮಳಲಿ
[[File:
Dr Vasu
|frameless|center=yes|alt=]]
ಡಾ. ವಸು ಮಳಲಿ
ಜನನಎಂ.ವಿ. ವಸು
೦೭/೦೨/೧೯೬೭
ಮರಣ೦೩/೦೨/೨೦೧೫
ಬೆಂಗಳೂರು, ಕರ್ನಾಟಕ, ಭಾರತ
ಕಾವ್ಯನಾಮವಸು ಮಳಲಿ
ವೃತ್ತಿಪ್ರಾಧ್ಯಾಪಕಿ, ಇತಿಹಾಸ ತಜ್ಞೆ, ಲೇಖಕಿ, ಅಂಕಣಕಾರ್ತಿ, ಚಿತ್ರ ನಿರ್ದೇಶಕಿ
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ಪೌರತ್ವಭಾರತೀಯ
ವಿದ್ಯಾಭ್ಯಾಸಎಂ.ಎ., ಪಿಎಚ್.ಡಿ.
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾಲಯ
ಪ್ರಕಾರ/ಶೈಲಿಇತಿಹಾಸ
ವಿಷಯಇತಿಹಾಸ
ಮಕ್ಕಳುಅವನಿ

ಶಿಕ್ಷಣ ಬದಲಾಯಿಸಿ

ವಸು ಮಳಲಿಯವರು ಮೈಸೂರು ವಿಶ್ವವಿದ್ಯಾನಿಲಯದಿಂದ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್.ಡಿ. ಪದವಿ ಪಡೆದಿದ್ದರು.

ವೃತ್ತಿಜೀವನ ಬದಲಾಯಿಸಿ

ಡಾ. ವಸು ಮಳಲಿಯವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಕೃತಿಗಳು ಬದಲಾಯಿಸಿ

ಪ್ರಜಾವಾಣಿ ಪತ್ರಿಕೆಯಲ್ಲಿ 'ಕಳ್ಳುಬಳ್ಳಿ' ಅಂಕಣದಿಂದ ಜನಪ್ರಿಯರಾಗಿದ್ದ ವಸು ಮಳಲಿಯವರು ಕೆಳಕಂಡ ಕೃತಿಗಳನ್ನು ರಚಿಸಿದ್ದಾರೆ/ಸಂಪಾದಿಸಿದ್ದಾರೆ.

  1. ಮೌಖಿಕ ಇತಿಹಾಸ,ಅಂಕಿತ ಪ್ರಕಾಶನ, ೨೦೦೪.
  2. ದಕ್ಷಿಣ ಕರ್ನಾಟಕದ ಅರಸು ಮನೆತನಗಳು(ಸಂ), ಕನ್ನಡ ವಿಶ್ವವಿದ್ಯಾಲಯ,ಹಂಪಿ,೨೦೦೨.
  3. ಕರ್ನಾಟಕ ಚರಿತ್ರೆಯ ಕೆಲವು ಆಯ್ದ ವಿಷಯಗಳು, ಕನ್ನಡ ವಿಶ್ವವಿದ್ಯಾಲಯ,ಹಂಪಿ,೨೦೦೬.
  4. ಕನ್ನಡದೊಳ್ ಭಾವಿಸಿದ ಜನಪದಂ(ಸಂ.), ಕರ್ನಾಟಕ ಇತಿಹಾಸ ಪರಿಷತ್ತು, ೨೦೦೯.

ಸಿನಿಮಾ ಬದಲಾಯಿಸಿ

ಹಾಲಿವುಡ್‍ನಲ್ಲಿ ನಿರ್ದೇಶನದ ತರಬೇತಿ ಪಡೆದಿದ್ದ ವಸು ಮಳಲಿಯವರು ನಕ್ಸಲ್ ನಾಯಕ ಸಾಕೇತ ರಾಜನ್ ಜೀವನ ಆಧರಿಸಿದ 'ಶಸ್ತ್ರ' ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ನಟ ಕಿಶೋರ್ ಮುಖ್ಯ ಪಾತ್ರದಲ್ಲಿದ್ದಾರೆ.

ಚಿತ್ರ ಶಾಲೆ ಬದಲಾಯಿಸಿ

ವಿದಾಯ ಬದಲಾಯಿಸಿ

ವಸು ಮಳಲಿಯವರು ಫೆಬ್ರವರಿ 3, 2015ರಂದು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಹೃದಯಾಘಾತದಿಂದ ನಿಧನರಾದರು. ಅದಕ್ಕೂ ಮುಂಚೆ ಅವರು ಸ್ತನ ಕ್ಯಾನ್ಸರ್‍ಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದರು.

ಬಾಹ್ಯ ಕೊಂಡಿಗಳು ಬದಲಾಯಿಸಿ