ವಸಂತ ಕವಲಿಯವರು ೧೯೩೦ ಅಕ್ಟೋಬರ್ ೧೨ರಂದು ಹಾವೇರಿ ಜಿಲ್ಲೆಯ ಬ್ಯಾಡಗಿ ಬಳಿಯಲ್ಲಿರುವ ಕದರಮಂಡಲಗಿಯಲ್ಲಿ ಜನಿಸಿದರು. ಇವರು ಆಕಾಶವಾಣಿಯಲ್ಲಿ ಅಧಿಕಾರಿಯಾಗಿದ್ದರು. ಇವರು ಆಕಾಶವಾಣಿಗಾಗಿ ಅನೇಕ ನಾಟಕಗಳನ್ನು ರಚಿಸಿದ್ದಾರೆ ಹಾಗು ನಿರ್ದೇಶಿಸಿದ್ದಾರೆ. ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ನಿಲಯದ ನಿರ್ದೇಶಕಗಾಗಿ ಸೇವೆ ಸಲ್ಲಿಸಿದ್ದರು.


ಇವರ ಕೃತಿಗಳು:

  • ಅಲಂಕಾರ
  • ಎನ್ನ ಮುದ್ದಿನ ಮುದ್ದಣ
  • ಘನ ಆನಂದ
  • ನಾದೋಪಾಸನೆ
  • ಬೇರೆ ಕೊಂಚ ಮಧು ಪಾತ್ರಕ್ಕೆ ಹಾಕು

ವಸಂತ ಕವಲಿಯವರು ೧೯೮೮ ನವೆಂಬರ್ ೧೭ರಂದು ನಿಧನರಾದರು.