ವರ್ಣ ಮಾಯಾಜಾಲ (ಪುಸ್ತಕ)

ವರ್ಣ ಮಾಯಾಜಾಲ ಎನ್ ಎಸ್ ಲೀಲಾ ಅವರು ಬರೆದ ಪುಸ್ತಕ.

ವರ್ಣ ಮಾಯಾಜಾಲ
ಲೇಖಕರುಎನ್ ಎಸ್ ಲೀಲಾ
ದೇಶಭಾರತ
ಭಾಷೆಕನ್ನಡ
ವಿಷಯವಿಜ್ಞಾನ
ಪ್ರಕಾರತಂತ್ರಜ್ಞಾನ
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೧, ೧ನೇ ಮುದ್ರಣ
ಪುಟಗಳು೧೪೪
ಐಎಸ್‍ಬಿಎನ್೯೭೮-೮೧-೮೪೬೭-೨೫೭-೨ false

ಬೆಳಕಿನ ಹಲವು ಅಂಶಗಳನ್ನು ವಿವರಿಸುವ ಈ ಪುಸ್ತಕ ವರ್ಣ ಜಗತ್ತಿಗೊಂದು ಕೈಪಿಡಿಯಂತಿದೆ. ಜೀವಿ-ಅಜೀವಿಗಳನ್ನೂ ಅವುಗಳಿಂದಾಗಿ ರೂಪು ತಳೆದಂತಿರುವ ವ್ಯೋಮವೂ ನಮ್ಮ ಮನಸ್ಸಿನಲ್ಲಿ ಜಗತ್ತಿನ ಚಿತ್ರಣವೊಂದನ್ನು ನೇಯುತ್ತವೆ. ನಾವು ನೋಡುವ ಯಾವುದೇ ವಸ್ತು ತನ್ನ ಆಕಾರ, ಗಾತ್ರ ಮತ್ತು ಬಣ್ಣಗಳಿಂದ ನಮಗೆ ಕಾಣಿಸುತ್ತದೆ. ಬಣ್ಣವಿಲ್ಲದ ವಸ್ತುವೊಂದನ್ನು ಕಲ್ಪಿಸಿ ಕೊಳ್ಳುವುದು ಕಷ್ಟ. ಲೇಖಕಿಯವರಾದ ಡಾ|| ಎನ್. ಎಸ್. ಲೀಲಾ ಅವರು ತನ್ನ ಈ ಕೃತಿಯಲ್ಲಿ ಬಣ್ಣದ ಗುಣಗಳನ್ನು ನಮ್ಮ ಜೀವನದ ಎಲ್ಲ ಮಗ್ಗುಲುಗಳಲ್ಲಿ ಅದು ಹರಡಿರುವುದನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಬೆಳಕಿಲ್ಲದೆ ಬಣ್ಣವಿಲ್ಲ. ಜಗತ್ತಿಗೆ ಬೆಳಕು ಕೊಡುವ ಸೂರ್ಯನ ಕುರಿತಾದ ಸುಂದರ ಉಲ್ಲೇಖಗಳಿಂದ ಕೃತಿಯು ಪ್ರಾರಂಭವಾಗುತ್ತದೆ. ದೃಷ್ಟಿ ಪ್ರಕ್ರಿಯೆ, ಅದರಲ್ಲಿ ಕಣ್ಣಿನ ಪಾತ್ರ, ದೃಷ್ಟಿ ಸೂಚನೆಯಲ್ಲಿ ಮಿದುಳಿನ ಕೆಲಸ ಹಾಗೂ ಈ ಎಲ್ಲ ವಿದ್ಯಮಾನಗಳ ಬಗ್ಗೆ ನಡೆದ ಮಹತ್ವದ ಸಂಶೋಧನೆಗಳನ್ನು ಲೇಖಕಿಯವರು ವಿಶ್ಲೇಷಿಸುತ್ತಾರೆ. ಬಣ್ಣದ ಗ್ರಹಿಕೆಯನ್ನು ಪ್ರಭಾವಿಸುವ ಹಲವು ಅಂಶಗಳಿವೆ. ವಸ್ತುವಿನದ್ದೇ ಆದ ಸಂಯೋಜನೆ, ಅದರ ಮೇಲೆ ಬೀಳುವ ಬೆಳಕು, ವಸ್ತುವಿನ ಹಿನ್ನೆಲೆ ಹಾಗೂ ವೀಕ್ಷಕನ ನೆಲೆ-ಸ್ಥಾನಗಳೆಲ್ಲ ಇಂಥ ಗ್ರಹಿಕೆಯನ್ನು ರೂಪಿಸುತ್ತವೆ. ಸಾಗರ , ಆಕಾಶ, ಮರ, ಎಲೆ, ಹೂ, ಧ್ರುವ ಪ್ರಭೆ, ಪಾತರಗಿತ್ತಿ, ರಕ್ತ ಹಾಗೂ ಇನ್ನಿತರ ಅನೇಕ ವಸ್ತುಗಳ ಉದಾಹರಣೆಗಳೊಂದಿಗೆ ಇದು ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ, ನಮ್ಮ ದೈನಂದಿನ ಚಟುವಟಿಕೆಗಳಲ್ಲೂ ಬಣ್ಣಗಳು ಪಾತ್ರ ವಹಿಸುತ್ತವೆ. ಅಲಂಕರಣ, ಹಬ್ಬ-ಹರಿದಿನಗಳಲ್ಲಿ ಇದು ಎದ್ದು ಕಾಣಿಸುತ್ತದೆ. ಹವಾಮಾನ ಬದಲಾವಣೆಯಿಂದ ಹವಳದ ದಿಬ್ಬಗಳಂಥ ಪ್ರಾಕೃತಿಕ ವಸ್ತುಗಳು ಅನುಭವಿಸುವ ಬಣ್ಣಗೇಡು ಮತ್ತು ಆರೋಗ್ಯ - ಅನಾರೋಗ್ಯಗಳ ತಪಾಸಣೆಯಲ್ಲಿ ಸೂಚಕವಾಗುವ ಬಣ್ಣ ಬದಲಾವಣೆ - ಇವೆಲ್ಲವನ್ನೂ ಬರಹವು ಒಳಗೊಂಡಿದೆ. ಈ ಕೃತಿಯು ವರ್ಣಚಿತ್ರಗಳೊಂದಿಗೆ ಬಣ್ಣಗಳ ಸಮಗ್ರ ಚಿತ್ರಣವನ್ನು ಮೈಗೂಡಿಸಿಕೊಂಡಂತಿದೆ.

ಎನ್ ಎಸ್ ಲೀಲಾ ಅವರು ಪುಸ್ತಕಗಳು

ಬದಲಾಯಿಸಿ
  • ನೀರು
  • ಜೈವಿಕ ತಂತ್ರಜ್ಞಾನ
  • ಜೀವ ಜಗತ್ತಿನ ಕೌತುಕಗಳು - ಚಲನೆ
  • ಜೀವ ಜಗತ್ತಿನ ಕೌತುಕಗಳು - ಲಾಲನೆ ಪಾಲನೆ
  • ಜೀವ ಜಗತ್ತಿನ ಕೌತುಕಗಳು - ಪ್ರೀತಿ ಪ್ರಣಯ
  • ಜೀವ ಜಗತ್ತಿನ ಕೌತುಕಗಳು - ನಿದ್ರೆ ವಿಶ್ರಾಂತಿ
  • ಜೀವ ಜಗತ್ತಿನ ಕೌತುಕಗಳು - ಹುಟ್ಟು ಸಾವು
  • ಜೀವಿ ವೈವಿಧ್ಯ ಮತ್ತು ವಿಕಾಸ

ಬಾಹ್ಯ ಸಂಪರ್ಕ

ಬದಲಾಯಿಸಿ