ವರ್ಗ:ಬಾಗಲಕೋಟೆ ಜಿಲ್ಲೆ

"ಬೆಣ್ಣೂರು"

ಐತಿಹಾಸಿಕ ಗ್ರಾಮ.

ಬಾಗಲಕೋಟೆ ಜಿಲ್ಲೆಯ,ಬಾಗಲಕೋಟ ತಾಲೂಕಿನ,ಬೆಣ್ಣೂರು ಗ್ರಾಮ ಅತ್ಯಂತ ಪ್ರಾಚೀನವಾದ ಇತಿಹಾಸವನ್ನು ಹೊಂದಿದೆ. ಬಾಗಲಕೋಟೆಯಿಂದ ಸುಮಾರು 20 km ದೂರದಲ್ಲಿರುವ, ಈ ಗ್ರಾಮವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ.

"ಬೆಣ್ಣೂರು" ಎಂಬ ಹೆಸರು ಬರಲು ಕಾರಣ, ಇಲ್ಲಿ ಅತಿ ಹೆಚ್ಚಾಗಿ ಬೋರೆಹಣ್ಣು(ಬಾರಿ ಹಣ್ಣು) ಬೆಳೆಯುತ್ತಿದ್ದವು. ಅದರಂತೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆಯನ್ನ ಹೊಂದಿತ್ತು. "ಬಣದೂರು" ಎಂದು ಮೊದಲು ಕರೆಯುತ್ತಿದ್ದರು. ತದನಂತರದಲ್ಲಿ ಬೆಣ್ಣೂರು ಎಂದು ಕರೆಯತೊಡಗಿದರು.

ಘಟಪ್ರಭಾ ನದಿಯ ದಂಡೆಯ ಮೇಲೆ ಬೆಣ್ಣೂರು ಗ್ರಾಮವಿದೆ. ಆಲಮಟ್ಟಿ ಜಲಾಶಯದ ಹಿಂದಿನ ಭಾಗವಾಗಿದೆ. ಹಿಂದೆ 1996ರಲ್ಲಿ ಕೃಷ್ಣಾ ನದಿಯ ಹೆಚ್ಚಿನ ನೀರಿನಿಂದಾಗಿ ಜಲಾವೃತವಾಯಿತು. ನಂತರ ನದಿಯಿಂದ ಸುಮಾರು 4km ದೂರದಲ್ಲಿ, "ಕೃಷ್ಣ ಮೇಲ್ದಂಡೆ ಯೋಜನೆ"ಯ ಪುನರ್ ವಸತಿ ಗ್ರಾಮವಾಗಿ ಬೆಣ್ಣೂರು ಬೆಳೆದು ನಿಂತಿದೆ.

ಇಲ್ಲಿನ ಮುಖ್ಯ ಪ್ರಮುಖ ಬೆಳೆಗಳೆಂದರೆ, ಶೇಂಗಾ, ತೊಗರಿ, ಸಜ್ಜೆ, ಕಬ್ಬು ಹಾಗೂ ಇನ್ನಿತರ ತರಕಾರಿಗಳನ್ನು ಬೆಳೆಯುತ್ತಾರೆ. ಶ್ರೀ ಲಕ್ಕಮ್ಮ ದೇವಿ ಬೆಣ್ಣೂರು ಗ್ರಾಮದ ಗ್ರಾಮ ದೇವತೆ. ಪ್ರತಿ ಮಹಾನವಮಿಯ ದಿನದಂದು ಮಹಾ ರಥೋತ್ಸವವು ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಸುತ್ತಮುತ್ತಲಿನ ಗ್ರಾಮಗಳಿಂದಲೂ ಹಲವಾರು ಭಕ್ತಾದಿಗಳು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಶಿರೂರು

ಬದಲಾಯಿಸಿ

ಈ ಪಟ್ಟಣವು ಒಂದು ಸುಂದರವಾದ ಪಟ್ಟಣವಾಗಿದೆ ಶಿರೂರು ಪಟ್ಟಣದ ಜಿಲ್ಲಾ ಮತ್ತು ತಾಲೂಕು ಬಾಗಲಕೋಟ ಆಗಿದೆ.

ಶಿರೂರು ಪಟ್ಟಣದ ಐತಿಹಾಸಿಕ ಹಿನ್ನೆಲೆ

ಈ ಪಟ್ಟಣವು ಮೊದಲು ಒಂದು ಹಳ್ಳಿಯಾಗಿತ್ತು ಹಿಂದೆ ಈ ಊರನ್ನು ಶಿರ್ ಮತ್ತು ಸಿರಿಯೂರು ಎಂದು ಕರೆಯುತ್ತಿದ್ದರು. ಈ ಊರು ಮೊದಲು ಬದಾಮಿ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿತ್ತು. ಮತ್ತು ವಿವಿಧ ರೀತಿಯ ದೇವಾಲಯಗಳು ಮತ್ತು ಕೆರೆಗಳನ್ನು ನಿರ್ಮಿಸಿದ್ದರು.

ಈ ಊರಿನ ಜನರು ಅತಿ ಹೆಚ್ಚಾಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರನ್ನು ನಂಬುತ್ತಾರೆ. ಈ ಊರಿನಲ್ಲಿ ಯಾವುದೇ ರೀತಿಯ ಭೇದಭಾವ ಇರುವುದಿಲ್ಲ ಎಲ್ಲರೂ ಒಂದೇ ಎಂಬ ಭಾವನೆಯಿಂದ ಬಾಳುತ್ತಿದ್ದಾರೆ. ಈ ಊರಿನಲ್ಲಿ ಒಟ್ಟು ಏಳು ಕೆರೆಗಳಿವೆ.

ಅವುಗಳೆಂದರೆ,1 ಹಿರೆಕೆರೆ 2 ಪಡಿಗೇರೆ 3. ಅಂತಲಕರೆ 4. ಬೋಸರೆಡ್ಡಿಕೆರೆ 5.ಗಾಳಿದುರ್ಗಮ್ಮನ ಕೆರೆ 6 ಶಿವನಕೆರೆ 7.ಸಣ್ಣ ಅಂತಲಕೆರೆ

ಈ ಊರಿನ ಜನರು ತಮ್ಮ ಜೀವನಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳು ಎಂದರೆ ಜೋಳ, ಹೆಸರು, ಶೇಂಗಾ, ತೊಗರಿ, ಸೂರ್ಯಕಾಂತಿ ಸಜ್ಜಿ, ಕಬ್ಬು, ಕಡಲೆ, ಮೆಣಸು, ಇತ್ಯಾದಿ....

ಧಾರ್ಮಿಕ ಆಚರಣೆಗಳು

ಈ ಊರಿನಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಜನ್ಮದಿನವನ್ನು ಆಚರಿಸುತ್ತಾರೆ. ಆ ದಿನದಂದು ರಥವನ್ನು ಎಳೆದು ಐದು ದಿನಗಳ ಕಾಲ ಎಲ್ಲಾ ರೀತಿಯ ಸಮುದಾಯದ ಜನರು ಸಂತೋಷದ ಜಾತ್ರೆಯನ್ನು ಆಚರಿಸುತ್ತಾರೆ. ಮತ್ತು ಈ ಜಾತ್ರೆಯ ಅಂಗವಾಗಿ ಹಲವು ರೀತಿಯ ಆಟಗಳನ್ನು ನಡೆಸುತ್ತಾರೆ.

ಅವುಗಳೆಂದರೆ:-ಓಟದ ಸ್ಪರ್ಧೆ ಸಂಕ್ರಮಣ ಕಲ್ಲನ್ನು ಎತ್ತುವುದು, ಟ್ಯಾಕ್ಟರ್ ರಿವರ್ಸ್, ಇತ್ಯಾದಿ....