ವನಸ್ಪತಿ ಒಂದು ಸಂಸ್ಕೃತ ಶಬ್ದವಾಗಿದ್ದು, ಸಂಪೂರ್ಣ ಸಸ್ಯಲೋಕವನ್ನು ಸೂಚಿಸುತ್ತದೆ. ಆದರೆ, ಚರಕ ಸಂಹಿತಾ ಹಾಗೂ ಸುಶ್ರುತ ಸಂಹಿತಾ ವೈದ್ಯಕೀಯ ಪಠ್ಯಗಳು ಮತ್ತು ವೈಶೇಷಿಕ ತತ್ವಶಾಸ್ತ್ರ ಪಂಥದ ಪ್ರಕಾರ, "ವನಸ್ಪತಿ" ಶಬ್ದವು ಹಣ್ಣು ಬಿಡುವ ಆದರೆ ಯಾವುದೇ ಸ್ಪಷ್ಟ ಹೂಗಳನ್ನು ಬಿಡದ ಸಸ್ಯಗಳಿಗೆ ಸೀಮಿತವಾಗಿದೆ. ಋಗ್ವೇದದ ೯ನೇ ಮಂಡಲ, ಋಕ್ಕು ೫.೧೦ ರಲ್ಲಿ, "ವನಸ್ಪತಿ"ಯು ಅರಣ್ಯದ ಪ್ರಭುತ್ವ ನಡೆಸುವ ದೇವತೆಯಾಗಿದ್ದಾನೆ ಮತ್ತು "ಸಾವಿರು ಶಾಖೆಗಳಿರುವ ಪ್ರಕಾಶಮಾನ ಸುವರ್ಣ ಬಣ್ಣದ ವನಸ್ಪತಿ" ಎಂದು ವರ್ಣಿಸಲಾಗಿದೆ.

ಜಲಜನಕೀಕೃತ ವನಸ್ಪತಿ ಎಣ್ಣೆ

ಬದಲಾಯಿಸಿ

ವನಸ್ಪತಿ ಎನ್ನುವುದು ವನಸ್ಪತಿ ಎಣ್ಣೆ ಅಥವಾ ತರಕಾರಿ ಕೊಬ್ಬನ್ನು ಸೂಚಿಸುವ ದಕ್ಷಿಣ ಏಷ್ಯಾದ ಆಡುನುಡಿ ಕೂಡ ಆಗಿದೆ. ಇದು ಸಂಪೂರ್ಣವಾಗಿ ಅಥವಾ ಭಾಗಶಃ ಜಲಜನಕೀಕೃತ ಅಡುಗೆ ಎಣ್ಣೆಯಾಗಿದ್ದು, ಹಲವುವೇಳೆ ತುಪ್ಪ ಮತ್ತು ಬೆಣ್ಣೆಗೆ ಬದಲಿ ವಸ್ತುವಾಗಿ ಬಳಸಲ್ಪಡುತ್ತದೆ. ಭಾರತದಲ್ಲಿ, ವನಸ್ಪತಿ ಎಣ್ಣೆಯನ್ನು ಸಾಮಾನ್ಯವಾಗಿ ತಾಳೆ ಎಣ್ಣೆಯಿಂದ ತಯಾರಿಸಲಾಗುತ್ತದೆ.[]

ಉಲ್ಲೇಖಗಳು

ಬದಲಾಯಿಸಿ
  1. Rebecca Coombes (2011). "Trans fats: chasing a global ban". BMJ. 343: d5567. doi:10.1136/bmj.d5567. PMID 21900347.



"https://kn.wikipedia.org/w/index.php?title=ವನಸ್ಪತಿ&oldid=1252514" ಇಂದ ಪಡೆಯಲ್ಪಟ್ಟಿದೆ